ವಿದೇಶಿ ಕೊಡುಗೆ ನಿಯಂತ್ರಣ ತಿದ್ದುಪಡಿ ಮಸೂದೆಗೆ ತೀವ್ರ ವಿರೋಧ
ನವದೆಹಲಿ: ವಿದೇಶಿ ನಿಧಿ ನಿಯಮವನ್ನು ಬಿಗಿಗೊಳಿಸಲು ಕೇಂದ್ರ ಸರ್ಕಾರ (Central Govt) ಮಂಡಿಸಲು ಉದ್ದೇಶಿಸಿರೋ ವಿದೇಶಿ ಕೊಡುಗೆ ನಿಯಂತ್ರಣ ತಿದ್ದುಪಡಿ (FCRA) ತಿದ್ದುಪಡಿಗೆ ಮಸೂದೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ವಿದೇಶಿ ನಿಧಿಯನ್ನು ಅವಲಂಬಿಸಿರುವ ಸಂಸ್ಥೆಗಳ ಮೇಲೆ ಕೇಂದ್ರ ಸರ್ಕಾರಕ್ಕೆ ಅತಿಯಾದ ನಿಯಂತ್ರಣವನ್ನು ಈ ತಿದ್ದುಪಡಿಗಳು ನೀಡುತ್ತದೆ ಎಂದು ವಿರೋಧ ಪಕ್ಷ

ನವದೆಹಲಿ: ವಿದೇಶಿ ನಿಧಿ ನಿಯಮವನ್ನು ಬಿಗಿಗೊಳಿಸಲು ಕೇಂದ್ರ ಸರ್ಕಾರ (Central Govt) ಮಂಡಿಸಲು ಉದ್ದೇಶಿಸಿರೋ ವಿದೇಶಿ ಕೊಡುಗೆ ನಿಯಂತ್ರಣ ತಿದ್ದುಪಡಿ (FCRA) ತಿದ್ದುಪಡಿಗೆ ಮಸೂದೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ವಿದೇಶಿ ನಿಧಿಯನ್ನು ಅವಲಂಬಿಸಿರುವ ಸಂಸ್ಥೆಗಳ ಮೇಲೆ ಕೇಂದ್ರ ಸರ್ಕಾರಕ್ಕೆ ಅತಿಯಾದ ನಿಯಂತ್ರಣವನ್ನು ಈ ತಿದ್ದುಪಡಿಗಳು ನೀಡುತ್ತದೆ ಎಂದು ವಿರೋಧ ಪಕ್ಷಗಳು ಮತ್ತು ಎನ್ಜಿಒಗಳು ವಾದಿಸುತ್ತಿವೆ. ಚರ್ಚುಗಳು ಮತ್ತು ಧಾರ್ಮಿಕ ಸಂಸ್ಥೆಗಳು ತಮ್ಮ ನೋಂದಣಿ ಅವಧಿ ಮುಗಿದರೆ ಅಥವಾ ರದ್ದುಗೊಂಡರೆ, ಶಾಲೆಗಳು, ಆಸ್ಪತ್ರೆಗಳು, ಕಲ್ಯಾಣ ಸಂಸ್ಥೆಗಳು ಮತ್ತು ದಶಕಗಳಿಂದ ವಿದೇಶಿ ದೇಣಿಗೆಯಿಂದ ನಿರ್ಮಿಸಲಾದ ಇತರ ಆಸ್ತಿಗಳು ಸರ್ಕಾರದ ನಿಯಂತ್ರಣಕ್ಕೆ ಬರಬಹುದು ಎಂದು ಕಳವಳ ವ್ಯಕ್ತಪಡಿಸಿವೆ. ಇದನ್ನೂ ಓದಿ: ಕೇಂದ್ರದ ಗ್ರೀನ್ ಸಿಗ್ನಲ್ ಮಧ್ಯೆ ಮೇಕೆದಾಟು ಯೋಜನೆಗೆ ಮತ್ತೆ ತಮಿಳುನಾಡು ಸರ್ಕಾರ ವಿರೋಧ ಎಫ್ಸಿಆರ್ಎ ತಿದ್ದುಪಡಿಗೆ ಮಸೂದೆಗೆ ಅಮೆರಿಕ ಕಾಂಗ್ರೆಸ್ ಕೂಡ ಆಕ್ಷೇಪ ವ್ಯಕ್ತಪಡಿಸಿದೆ. ಇದು ಕ್ರೈಸ್ತರ ಮೇಲಿನ ನೇರ ದಾಳಿ ಅಂತ ಕರೆದಿದೆ. ಇನ್ನು, ಸಂಸತ್ 13ನೇ ದಿನದ ಕಲಾಪವೂ ಅನುತ್ಪಾದಕವಾಗಿದೆ. ಮೋದಿ, ಅಮಿತ್ಶಾ ಕಲಾಪಕ್ಕೆ ಬರಬೇಕು. ಅಮಿತ್ ಶಾ ಎಲ್ಲಿ ಅಡಗಿ ಕೂತಿದ್ದಾರೆ? ಅಂತ ಎರಡೂ ಸದನಗಳಲ್ಲಿ ವಿಪಕ್ಷಗಳು ಬಹಿಷ್ಕಾರ ಮಾಡಿವೆ. ಇನ್ನೊಂದೆಡೆ, ಡಿಲಿಮಿಟೇಷನ್ ಬಿಲ್-ಮಹಿಳಾ ಮೀಸಲಾತಿ ತಿದ್ದುಪಡಿ ಬಿಲ್ ಮಂಡನೆಗೆ ಕೇಂದ್ರ ಸರ್ಕಾರ ಮುಂದಾಗಿದೆ. ಈ ಸಂಬಂಧ ಸಹಕಾರ ನೀಡುವಂತೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರನ್ನು ಕೇಂದ್ರ ಸಚಿವ ಕಿರಣ್ ರಿಜಿಜು ಭೇಟಿಯಾಗಿದ್ದರು. ಆದರೆ, ರಾಹುಲ್ ಗಾಂಧಿ ಸರ್ಕಾರದ ಮನವಿಯನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ ಎನ್ನಲಾಗಿದೆ. ಮುಂಗಾರು ಅಧಿವೇಶನ ಇದೇ 13ಕ್ಕೆ ಮುಗಿಯಲಿದೆ. ಹಾಗಾಗಿ, ಡಿಲಿಮಿಟೇಷನ್-ವಿಮೆನ್ ರಿಸವೇರ್ಷನ್ ಬಿಲ್ಗಾಗಿ ಆಗಸ್ಟ್ 16ರಿಂದ 18ರವರೆಗೆ ವಿಶೇಷ ಅಧಿವೇಶನ ನಡೆಯಲಿದೆ ಎನ್ನಲಾಗಿದೆ. ಈ ಮಧ್ಯೆ, ರಾಹುಲ್ ಗಾಂಧಿ ಮಾತಾಡಿ, 13 ದಿನವಾದರೂ ಪ್ರಧಾನಿ, ಗೃಹ ಸಚಿವರು ಕಲಾಪಕ್ಕೆ ಬಂದಿಲ್ಲ. ಎಲ್ಲಿ ಅಡಗಿದ್ದಾರೆ ಅಂತ ಕಿಡಿಕಾರಿದರು. ಅಲ್ಲದೆ, ಜೆನ್-ಝೀ ಹೋರಾಟಕ್ಕೆ ಬೆಂಬಲ ನೀಡಿದ ರಾಹುಲ್, ನಾವು ವಿದ್ಯಾರ್ಥಿಗಳ ರಕ್ಷಣೆಗೆ ಇದ್ದೇವೆ. ವಿದ್ಯಾರ್ಥಿಗಳ ಮನೆಗೆ ಗೂಂಡಾಗಳನ್ನು ಕಳಿಸಿ ಬೆದರಿಸಲಾಗಿದೆ. 15 ವರ್ಷದ ಬಾಲಕಿ ರುಚಿಕಾ ಸಿಂಗ್ಳನ್ನು ಕ್ಷಮೆ ಕೇಳುವಂತೆ ಒತ್ತಡ ಹೇರಲಾಗಿದೆ ಅಂದಿದ್ದಾರೆ.ಇದನ್ನೂ ಓದಿ: ಬಾಂಗ್ಲಾದಲ್ಲಿ ನಡೆದಿದ್ದು ವಿದ್ಯಾರ್ಥಿ ಚಳವಳಿಯಲ್ಲ, ಆಡಳಿತ ಬದಲಾವಣೆಗೆಂದೇ ನಡೆಸಿದ ಸಂಘಟಿತ ಹಿಂಸಾತ್ಮಕ ಅಸ್ತ್ರ: ಶೇಖ್ ಹಸೀನಾ