ಏರುಧ್ವನಿಯಲ್ಲಿ ಮಾತನಾಡಿದ್ದಕ್ಕೆ ರೈತರಲ್ಲಿ ಕ್ಷಮೆ ಯಾಚಿಸಿದ ಗದಗ ಜಿಲ್ಲಾಧಿಕಾರಿ
ಗದಗ: ಬೆಳೆ ವಿಮೆ ಪರಿಹಾರದ ಬಗ್ಗೆ ವಿಚಾರಿಸಲು ಬಂದ ರೈತರೊಂದಿಗೆ ಏರುಧ್ವನಿಯಲ್ಲಿ ಮಾತನಾಡಿದ್ದಕ್ಕೆ ಕ್ಷಮೆಯಾಚಿಸುತ್ತೇನೆ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಹೇಳಿದರು.ಜಿಲ್ಲಾಧಿಕಾರಿ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿ ರೈತರು ನಗರದಲ್ಲಿನ ಜಿಲ್ಲಾಡಳಿತ ಭವನಕ್ಕೆ ಬುಧವಾರ ಮುತ್ತಿಗೆ ಹಾಕಿದರು.ಜಿಲ್ಲಾಡಳಿತ ಭವನದೊಳಗೆ ರೈತರು ಪ್ರವೇಶಿಸದಂತೆ ಪೊಲೀಸರು ಗೇಟ್ ಬಂದ್

ಗದಗ: ಬೆಳೆ ವಿಮೆ ಪರಿಹಾರದ ಬಗ್ಗೆ ವಿಚಾರಿಸಲು ಬಂದ ರೈತರೊಂದಿಗೆ ಏರುಧ್ವನಿಯಲ್ಲಿ ಮಾತನಾಡಿದ್ದಕ್ಕೆ ಕ್ಷಮೆಯಾಚಿಸುತ್ತೇನೆ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಹೇಳಿದರು.ಜಿಲ್ಲಾಧಿಕಾರಿ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿ ರೈತರು ನಗರದಲ್ಲಿನ ಜಿಲ್ಲಾಡಳಿತ ಭವನಕ್ಕೆ ಬುಧವಾರ ಮುತ್ತಿಗೆ ಹಾಕಿದರು.ಜಿಲ್ಲಾಡಳಿತ ಭವನದೊಳಗೆ ರೈತರು ಪ್ರವೇಶಿಸದಂತೆ ಪೊಲೀಸರು ಗೇಟ್ ಬಂದ್ ಮಾಡಿದ್ದಕ್ಕೆ ಜಿಲ್ಲಾಡಳಿತ ಭವನ ಮುಂದಿನ ರಸ್ತೆಯಲ್ಲಿ ಧರಣಿ ಕುಳಿತರು. ವಿವಿಧ ರೈತ ಮುಖಂಡರು ಜಿಲ್ಲಾಧಿಕಾರಿ ಹಾಗೂ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಪೊಲೀಸ್ ಭದ್ರತೆಯಲ್ಲಿ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ರೈತರ ಅಹವಾಲು ಆಲಿಸಿದರು. ವಿಮೆ ಪರಿಹಾರಕ್ಕೆ ಕ್ರಮ ವಹಿಸುವುದಾಗಿ ಭರವಸೆ ನೀಡಿದರು. ಜಿಲ್ಲಾಧಿಕಾರಿ ಕ್ಷಮೆ ಕೇಳಿದ್ದಕ್ಕೆ ಧರಣಿ ಹಿಂಪಡೆಯಲಾಯಿತು.ಗದಗ ಜಿಲ್ಲಾಡಳಿತ ಭವನಕ್ಕೆ ರೈತರ ಮುತ್ತಿಗೆ: ಡಿ.ಸಿ ಕ್ಷಮೆಯಾಚನೆಗೆ ಪಟ್ಟು
Read the complete story at Prajavani