ಡಂಗಾವಾಸ್ ಹತ್ಯಾಕಾಂಡ: 40 ಆರೋಪಿಗಳು ಖುಲಾಸೆ
ಜೈಪುರ : ರಾಜಸ್ಥಾನದ ನಾಗಪುರ ಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಪ್ರಕರಣಗಳ ವಿಶೇಷ ನ್ಯಾಯಾಲಯವು 2015ರ ಡಂಗಾವಾಸ್ ಹತ್ಯಾಕಾಂಡ ಪ್ರಕರಣದ 40 ಆರೋಪಿಗಳನ್ನು ಖುಲಾಸೆಗೊಳಿಸಿ ಬುಧವಾರ ಆದೇಶಿಸಿದೆ.ಡಂಗಾವಾಸ್ ಗ್ರಾಮದಲ್ಲಿ 11 ವರ್ಷಗಳ ಹಿಂದೆ ಭೂ ವಿವಾದಕ್ಕೆ ಸಂಬಂಧಿಸಿದಂತೆ ಐವರು ದಲಿತರ ಹತ್ಯೆ ನಡೆದಿತ್ತು. ಆ ಪ್ರಕರಣದ ಆದೇಶವನ್ನು ವಿಶೇಷ ನ್ಯಾಯಾಲಯದ

ಜೈಪುರ : ರಾಜಸ್ಥಾನದ ನಾಗಪುರ ಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಪ್ರಕರಣಗಳ ವಿಶೇಷ ನ್ಯಾಯಾಲಯವು 2015ರ ಡಂಗಾವಾಸ್ ಹತ್ಯಾಕಾಂಡ ಪ್ರಕರಣದ 40 ಆರೋಪಿಗಳನ್ನು ಖುಲಾಸೆಗೊಳಿಸಿ ಬುಧವಾರ ಆದೇಶಿಸಿದೆ.ಡಂಗಾವಾಸ್ ಗ್ರಾಮದಲ್ಲಿ 11 ವರ್ಷಗಳ ಹಿಂದೆ ಭೂ ವಿವಾದಕ್ಕೆ ಸಂಬಂಧಿಸಿದಂತೆ ಐವರು ದಲಿತರ ಹತ್ಯೆ ನಡೆದಿತ್ತು. ಆ ಪ್ರಕರಣದ ಆದೇಶವನ್ನು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಆಶಿಶ್ ಬಿಜರಾನಿಯಾ ಪ್ರಕಟಿಸಿದರು.ಭೂ ವಿವಾದದಿಂದ 2015ರ ಮೇ 14ರಂದು ಎರಡು ಗುಂಪುಗಳ ನಡುವೆ ಹಿಂಸಾಚಾರ ಭುಗಿಲೆದ್ದು, ರತನ್ರಾಮ್ ಮೇಘವಾಲ್, ಫೋಖರ್ರಾಮ್ ಮೇಘವಾಲ್, ಪಂಚಾರಾಮ್ ಮೇಘವಾಲ್, ಗಣಪತ್ರಾಮ್ ಮೇಘವಾಲ್ ಮೃತಪಟ್ಟಿದ್ದರು. ವಿರೋಧಿ ಗುಂಪಿನ ರಾಂಪಾಲ್ ಗೋಸಾಯಿ ಎಂಬುವರೂ ಮೃತಪಟ್ಟಿದ್ದರು. ಸಂತ್ರಸ್ತರ ಪೈಕಿ ಮೂವರ ಮೇಲೆ ಟ್ರ್ಯಾಕ್ಟರ್ ಹತ್ತಿಸಿ ಹತ್ಯೆ ಮಾಡಲಾಗಿದೆ ಎಂದು ಆರೋಪಿಸಿಲಾಗಿತ್ತು. ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲಾಗಿತ್ತು.ಆರೋಪಿಗಳ ಖುಲಾಸೆ ಕುರಿತು ಪ್ರತಿಕ್ರಿಯಿಸಿದ ದೂರುದಾರ ಗೋವಿಂದ್ ಮೇಘವಾಲ್, ‘ಎಲ್ಲ ಆರೋಪಿಗಳು ಖುಲಾಸೆ ಆಗಿದ್ದಾರೆ. ಹಾಗಾದರೆ ನಮ್ಮ ಐವರನ್ನು ಕೊಂದವರು ಯಾರು? ಈ ಆದೇಶವನ್ನು ನಾವು ಹೈಕೋರ್ಟ್ನಲ್ಲಿ ಪ್ರಶ್ನಿಸುತ್ತೇವೆ’ ಎಂದರು. ಘಟನೆಯಲ್ಲಿ ಆರೋಪಿಗಳು ನೇರವಾಗಿ ಭಾಗಿಯಾಗಿರಲಿಲ್ಲ ಎಂದು ಆರೋಪಿಗಳ ಪರ ವಕೀಲ ಮಹೇಂದ್ರ ಚೌಧರಿ ತಿಳಿಸಿದರು.