ಪಶ್ಚಿಮ ಕೆನಡಾದಲ್ಲಿ ಕಾಳ್ಗಿಚ್ಚು:ಸುಮಾರು 230ಕ್ಕೂ ಹೆಚ್ಚು ಮನೆಗಳು ಬೆಂಕಿಗಾಹುತಿ
ವೆರ್ನನ್: ಪಶ್ಚಿಮ ಕೆನಡಾದಲ್ಲಿ ಕಾಳ್ಗಿಚ್ಚು ಸಂಭವಿಸಿದ್ದು ಈ ಘಟನೆಯಲ್ಲಿ ಸುಮಾರು 230ಕ್ಕೂ ಹೆಚ್ಚು ಮನೆಗಳು ಬೆಂಕಿಗಾಹುತಿಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬ್ರಾಡ್ಲಿ ಕ್ರೀಕ್ ಕಾಳ್ಗಿಚ್ಚು ವ್ಯಾಂಕೂವರ್ನ ಈಶಾನ್ಯದಿಂದ ಸುಮಾರು 440 ಕಿಲೋಮಿಟರ್ ದೂರದಲ್ಲಿರುವ ವರ್ನಾನ್ವರೆಗೂ ವ್ಯಾಪಿಸಿಸಿದೆ. ಈ ಪ್ರದೇಶದ ಸುತ್ತಮುತ್ತ ವಾಸಿಸುತ್ತಿದ್ದ

ವೆರ್ನನ್: ಪಶ್ಚಿಮ ಕೆನಡಾದಲ್ಲಿ ಕಾಳ್ಗಿಚ್ಚು ಸಂಭವಿಸಿದ್ದು ಈ ಘಟನೆಯಲ್ಲಿ ಸುಮಾರು 230ಕ್ಕೂ ಹೆಚ್ಚು ಮನೆಗಳು ಬೆಂಕಿಗಾಹುತಿಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬ್ರಾಡ್ಲಿ ಕ್ರೀಕ್ ಕಾಳ್ಗಿಚ್ಚು ವ್ಯಾಂಕೂವರ್ನ ಈಶಾನ್ಯದಿಂದ ಸುಮಾರು 440 ಕಿಲೋಮಿಟರ್ ದೂರದಲ್ಲಿರುವ ವರ್ನಾನ್ವರೆಗೂ ವ್ಯಾಪಿಸಿಸಿದೆ. ಈ ಪ್ರದೇಶದ ಸುತ್ತಮುತ್ತ ವಾಸಿಸುತ್ತಿದ್ದ ಸುಮಾರು ಎಂಟು ಸಾವಿರಕ್ಕೂ ಅಧಿಕ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.ಕಾಳ್ಗಿಚ್ಚು ಬಳಿಕ ವೈಮಾನಿಕ ಸಮೀಕ್ಷೆ ನಡೆಸಿರುವ ಒಕನಾಗನ್ ಇಂಡಿಯನ್ ಬ್ಯಾಂಡ್ನ ಮುಖ್ಯಸ್ಥ ಡ್ಯಾನ್ ವಿಲ್ಸನ್ ಅವರು ಅಭಿಪ್ರಾಯ ಹಂಚಿಕೊಂಡಿದ್ದಾರೆ. ‘ಈ ಘಟನೆಯಲ್ಲಿ ಎಲ್ಲಾ ಮನೆಗಳು ಬೆಂಕಿಗಾಹುತಿ ಆಗಿದ್ದರಿಂದ ನನ್ನ ಸಮುದಾಯವನ್ನು ಗುರುತಿಸುವುದು ಕಷ್ಟವಾಗಿತ್ತು. ಅತ್ಯಂತ ಭಯಾನಕ ಕಾಡ್ಗಿಚ್ಚಿಗೆ ಈ ಘಟನೆ ಸಾಕ್ಷಿಯಾಗಿದೆ. ಇದರ ಹೊಗೆ ಅಮೆರಿಕಕ್ಕೂ ವ್ಯಾಪಿಸಿದೆ. ಶುಕ್ರವಾರ ಮಧ್ಯರಾತ್ರಿ ಸುಮಾರಿಗೆ ಪಶ್ಚಿಮ ಕೆನಾಡದಲ್ಲಿ ಕಾಳ್ಗಿಚ್ಚು ಸಂಭವಿಸಿದೆ. ಬೆಂಕಿಯಿಂದ ರಕ್ಷಿಸಲು ಅಗ್ನಿಶಾಮಕ ಸಿಬ್ಬಂದಿ ಸಾಕಷ್ಟು ಪ್ರಯತ್ನ ಪಟ್ಟಿದ್ದಾರೆ ಎಂದಿದ್ದಾರೆ. ಈ ಕುರಿತು ಪೋಸ್ಟ್ ಹಂಚಿಕೊಂಡಿರುವ ಕೆನಡಾದ ನೂತನ ಪ್ರಧಾನಿಯಾಗಿ ಮಾರ್ಕ್ ಕಾರ್ನಿ, ‘ಬ್ರಿಟಿಷ್ ಕೊಲಂಬಿಯಾದಲ್ಲಿ ಕಾಳ್ಗಿಚ್ಚಿನಿಂದ ಸಂಕಷ್ಟಕ್ಕೆ ಒಳಗಾದ ಪ್ರತಿಯೊಬ್ಬರ ಪರವಾಗಿ ನಾನು ಪ್ರಾರ್ಥಿಸುವೆ. ಈ ಘಟನೆಯಿಂದ ಸಾವಿರಾರು ಜನರು ನಿವಾಸಗಳನ್ನು ತೊರೆಯಬೇಕಾಯಿತು. ಅಪಾಯದಲ್ಲಿ ಸಿಲುಕಿದ್ದ ಎಲ್ಲರನ್ನೂ ಸುರಕ್ಷಿತವಾಗಿರಿಸಲು ಶ್ರಮಿಸುತ್ತಿರುವ ಅಗ್ನಿಶಾಮಕ ಸಿಬ್ಬಂದಿಗೆ, ರಕ್ಷಣಾ ತಂಡಕ್ಕೆ ಮತ್ತು ಸ್ವಯಂಸೇವಕರಿಗೆ ಕೆನಡಾ ಜನರ ಪರವಾಗಿ ಕೃತಜ್ಞತೆ ತಿಳಿಸುತ್ತೇನೆ’ ಎಂದಿದ್ದಾರೆ.