ಕಾವಡ್ ಯಾತ್ರೆ: 50ಲಕ್ಷಕ್ಕೂ ಹೆಚ್ಚು ಮಂದಿ ಭಾಗಿ
ಮುಜಫ್ಫರ್ನಗರ : ಉತ್ತರ ಪ್ರದೇಶದದಲ್ಲಿ ನಡೆಯುತ್ತಿರುವ ವಾರ್ಷಿಕ ಕಾವಡ್ ಯಾತ್ರೆಯಲ್ಲಿ, ಈವರೆಗೆ 50 ಲಕ್ಷಕ್ಕೂ ಹೆಚ್ಚು ಮಂದಿ ತೀರ್ಥಯಾತ್ರಿಕರು ಮುಜಫ್ಫರ್ನಗರದ ಮೂಲಕ ಹಾದು ಹೋಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತೀರ್ಥಯಾತ್ರಿಕರು, ಹರಿದ್ವಾರದಲ್ಲಿ ಗಂಗಾ ನದಿ ನೀರನ್ನು ಸಂಗ್ರಹಿಸಿ, ಕಾಲ್ನಡಿಗೆಯಲ್ಲಿ ಸಾಗಿ ತಮ್ಮ ಊರುಗಳಲ್ಲಿರುವ ಶಿವ ದೇವಸ್ಥಾನಕ

ಮುಜಫ್ಫರ್ನಗರ : ಉತ್ತರ ಪ್ರದೇಶದದಲ್ಲಿ ನಡೆಯುತ್ತಿರುವ ವಾರ್ಷಿಕ ಕಾವಡ್ ಯಾತ್ರೆಯಲ್ಲಿ, ಈವರೆಗೆ 50 ಲಕ್ಷಕ್ಕೂ ಹೆಚ್ಚು ಮಂದಿ ತೀರ್ಥಯಾತ್ರಿಕರು ಮುಜಫ್ಫರ್ನಗರದ ಮೂಲಕ ಹಾದು ಹೋಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತೀರ್ಥಯಾತ್ರಿಕರು, ಹರಿದ್ವಾರದಲ್ಲಿ ಗಂಗಾ ನದಿ ನೀರನ್ನು ಸಂಗ್ರಹಿಸಿ, ಕಾಲ್ನಡಿಗೆಯಲ್ಲಿ ಸಾಗಿ ತಮ್ಮ ಊರುಗಳಲ್ಲಿರುವ ಶಿವ ದೇವಸ್ಥಾನಕ್ಕೆ ಅರ್ಪಿಸುತ್ತಾರೆ. ಈ ಯಾತ್ರೆಯು ಆ.11ರಂದು ಮುಕ್ತಾಯಗೊಳ್ಳುತ್ತದೆ. ಹರಿಯಾಣ, ರಾಜಸ್ಥಾನ ಹಾಗೂ ದೆಹಲಿ ಸೇರಿದಂತೆ ಉತ್ತರ ಪ್ರದೇಶದ ಹಲವು ಜಿಲ್ಲೆಗಳ ಜನರು ಯಾತ್ರೆಯಲ್ಲಿ ಭಾಗಿಯಾಗಿದ್ದಾರೆ. ಯಾತ್ರೆ ಮುಗಿಯುವವರೆಗೆ ಒಟ್ಟು 4 ಕೋಟಿ ಜನರು ಮುಜಫ್ಫರ್ನಗರದ ಮೂಲಕ ಹಾದು ಹೋಗುವ ನಿರೀಕ್ಷೆ ಇದೆ ಎಂದು ಅಂದಾಜಿಸಲಾಗಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದರು. ಯಾತ್ರಾರ್ಥಿಗಳ ಸುಗಮ ಮತ್ತು ಸುರಕ್ಷಿತ ಸಂಚಾರಕ್ಕಾಗಿ ಬಿಗಿ ಭದ್ರತೆಯನ್ನು ಕಲ್ಪಿಸಲಾಗಿದೆ. ಭಯೋತ್ಪಾದನೆ ನಿಗ್ರಹ ದಳದ ತಂಡಗಳು, ಬಾಂಬ್ ನಿಷ್ಕ್ರಿಯ ದಳಗಳು, ಇತರ ವಿಶೇಷ ತಂಡಗಳು, ಹಾಗೂ 4,000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಸಂಜಯ್ ಕುಮಾರ್ ತಿಳಿಸಿದರು.