ನಕಲಿ ಬಿಲ್ ಸೃಷ್ಟಿಸಿ ₹9 ಕೋಟಿ ವಂಚನೆ: ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಆರೋಪ
ಬೆಂಗಳೂರು: ‘ಐದು ವರ್ಷಗಳಲ್ಲಿ ಶಾಂತಿನಗರ ಕಾರ್ಯಪಾಲಕ ಎಂಜಿನಿಯರ್ ಕಚೇರಿಯೊಂದಕ್ಕೆ ₹ 9 ಕೋಟಿ ವೆಚ್ಚದ ಕಂಪ್ಯೂಟರ್, ಕ್ಯಾಪಿಯರ್ಸ್, ಪ್ರಿಂಟರ್ ಒದಗಿಸಲಾಗಿದೆ ಎಂದು ನಕಲಿ ಬಿಲ್ ನೀಡಿ ವಂಚಿಸಲಾಗಿದೆ’ ಎಂದು ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಆರೋಪಿಸಿದರು.ದಾಖಲೆಗಳನ್ನು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರಿಗೆ ಮಂಗಳವಾರ ನೀಡಿದ ನಂತರ ಸುದ್ದಿಗಾರರೊಂದಿಗೆ ಅವರು ಮ

ಬೆಂಗಳೂರು: ‘ಐದು ವರ್ಷಗಳಲ್ಲಿ ಶಾಂತಿನಗರ ಕಾರ್ಯಪಾಲಕ ಎಂಜಿನಿಯರ್ ಕಚೇರಿಯೊಂದಕ್ಕೆ ₹ 9 ಕೋಟಿ ವೆಚ್ಚದ ಕಂಪ್ಯೂಟರ್, ಕ್ಯಾಪಿಯರ್ಸ್, ಪ್ರಿಂಟರ್ ಒದಗಿಸಲಾಗಿದೆ ಎಂದು ನಕಲಿ ಬಿಲ್ ನೀಡಿ ವಂಚಿಸಲಾಗಿದೆ’ ಎಂದು ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಆರೋಪಿಸಿದರು.ದಾಖಲೆಗಳನ್ನು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರಿಗೆ ಮಂಗಳವಾರ ನೀಡಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.‘ಹಿಂದಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಪೂರ್ವ ವಲಯ ಅಥವಾ ಈಗಿನ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಶಾಂತಿನಗರ ವಿಧಾನಸಭಾ ಕ್ಷೇತ್ರದ ಕಾರ್ಯಪಾಲಕ ಎಂಜಿನಿಯರ್ ಕಚೇರಿಗೆ ಎನ್.ಎಸ್. ಎಂಟರ್ಪ್ರೈಸಸ್ ಸಂಸ್ಥೆ ಮೂಲಕ ₹ 8,91,46,526 ಮೊತ್ತದ ಕಂಪ್ಯೂಟರ್, ಕ್ಯಾಪಿಯರ್ಸ್, ಪ್ರಿಂಟರ್ ಮತ್ತು ಸ್ಟೇಷನರಿ ಪೂರೈಸಲಾಗಿದೆ ಎಂದು ನಕಲಿ ಬಿಲ್ ಬಿಡುಗಡೆ ಮಾಡಲಾಗಿದೆ’ ಎಂದರು.‘2021-22ರಲ್ಲಿ ₹35,41,500, 2022-23ರಲ್ಲಿ ₹ 69,63,280, 2023-24ರಲ್ಲಿ ₹ 3,16,13,726, 2024-25ರಲ್ಲಿ ₹ 2,61,41,166, 2025-26ರಲ್ಲಿ ₹ 1,61,42,303 ಮತ್ತು 2026ರ ಏಪ್ರಿಲ್ 1ರಿಂದ ಜೂನ್ 30 ರ ಅವಧಿಯಲ್ಲಿ ₹ 47,44,551 ಮೊತ್ತದ ಬಿಲ್ ಸೃಷ್ಟಿಸಿ, ಸಾರ್ವಜನಿಕರ ತೆರಿಗೆ ಹಣ ಪಡೆದು ವಂಚಿಸಿದ್ದಾರೆ’ ಎಂದು ವಿವರಿಸಿದರು.ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ260805-15-409641903