ಅಪಾಯಕಾರಿ ಟಾಸ್ಕ್... ಖತ್ರೋನ್ ಕೆ ಖಿಲಾಡಿ ಶೋ ವಿರುದ್ಧ ನೆಟ್ಟಿಗರ ಆಕ್ರೋಶ
ಹಿಂದಿಯ ಜನಪ್ರಿಯ ರಿಯಾಲಿಟಿ ಶೋ ‘ಖತ್ರೋನ್ ಕೆ ಖಿಲಾಡಿ 15’ ಆಗಸ್ಟ್ 1ರಂದು ಆರಂಭಗೊಂಡಿತ್ತು. ರೋಹಿತ್ ಶೆಟ್ಟಿ ಅವರ ನಿರೂಪಣೆಯಲ್ಲಿ ಮೂಡಿಬರುತ್ತಿರುವ ಖತ್ರೋನ್ ಕೆ ಖಿಲಾಡಿ ಶೋ ಪ್ರಾರಂಭವಾದ ಬೆನ್ನಲ್ಲೇ ಸ್ಪರ್ಧಿಗಳಿಗೆ ನೀಡುತ್ತಿರುವ ಅಪಾಯಕಾರಿ ಟಾಸ್ಕ್ಗಳು ವಿವಾದಕ್ಕೆ ಕಾರಣವಾಗಿದೆ. ಇತ್ತೀಚೆಗೆ ಸ್ಪರ್ಧಿಗಳಿಗೆ ‘ರಬ್ಬರ್ ಬುಲೆಟ್’ ಟಾಸ್ಕ್ ನೀಡಲಾಗಿತ್ತು. ಆ ಟಾಸ್ಕ್

ಹಿಂದಿಯ ಜನಪ್ರಿಯ ರಿಯಾಲಿಟಿ ಶೋ ‘ಖತ್ರೋನ್ ಕೆ ಖಿಲಾಡಿ 15’ ಆಗಸ್ಟ್ 1ರಂದು ಆರಂಭಗೊಂಡಿತ್ತು. ರೋಹಿತ್ ಶೆಟ್ಟಿ ಅವರ ನಿರೂಪಣೆಯಲ್ಲಿ ಮೂಡಿಬರುತ್ತಿರುವ ಖತ್ರೋನ್ ಕೆ ಖಿಲಾಡಿ ಶೋ ಪ್ರಾರಂಭವಾದ ಬೆನ್ನಲ್ಲೇ ಸ್ಪರ್ಧಿಗಳಿಗೆ ನೀಡುತ್ತಿರುವ ಅಪಾಯಕಾರಿ ಟಾಸ್ಕ್ಗಳು ವಿವಾದಕ್ಕೆ ಕಾರಣವಾಗಿದೆ. ಇತ್ತೀಚೆಗೆ ಸ್ಪರ್ಧಿಗಳಿಗೆ ‘ರಬ್ಬರ್ ಬುಲೆಟ್’ ಟಾಸ್ಕ್ ನೀಡಲಾಗಿತ್ತು. ಆ ಟಾಸ್ಕ್ ನೋಡಿದ ವೀಕ್ಷಕರು ಶೋ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ. ರಬ್ಬರ್ ಬುಲೆಟ್ ಟಾಸ್ಕ್ನಲ್ಲಿ ಸ್ಪರ್ಧಿಗಳಾದ ಗೌರವ್ ಖನ್ನಾ, ವಿಶಾಲ್ ಆದಿತ್ಯ ಸಿಂಗ್, ಶಗುನ್ ಶರ್ಮಾ ಮತ್ತು ಕರಣ್ ವಾಹಿ ಭಾಗವಹಿಸಿದ್ದರು. ಟಾಸ್ಕ್ ವೇಳೆ ರಬ್ಬರ್ ಬುಲೆಟ್ಗಳ ಏಟಿನಿಂದಾಗಿ ಸ್ಪರ್ಧಿಗಳ ಬೆನ್ನಿನ ಭಾಗ ಸಂಪೂರ್ಣ ಗಾಯಗೊಂಡು ರಕ್ತದ ಗುಳ್ಳೆಗಳು ಕಾಣಿಸಿಕೊಂಡಿದ್ದವು.ಏನಿದು ರಬ್ಬರ್ ಬುಲೆಟ್ ಟಾಸ್ಕ್?ಶೋನ ನಿರೂಪಕ ರೋಹಿತ್ ಶೆಟ್ಟಿ ವಿವರಿಸಿದಂತೆ, ಸ್ಪರ್ಧಿಗಳು ಶೂಟರ್ನತ್ತ ಬೆನ್ನು ಮಾಡಿ ನಿಲ್ಲಬೇಕಿತ್ತು. ಸ್ಪರ್ಧಿಗಳತ್ತ ರಬ್ಬರ್ ಬುಲೆಟ್ಗಳನ್ನು ಸತತವಾಗಿ ಶೂಟ್ ಮಾಡಲಾಗುತ್ತಿತ್ತು. ಇಬ್ಬರು ಸ್ಪರ್ಧಿಗಳು ನೋವು ತಾಳಲಾರದೆ ಆಟವನ್ನು ಬಿಟ್ಟುಕೊಡುವವರೆಗೆ ಉಳಿದವರು ಈ ನೋವನ್ನು ಸಹಿಸಿಕೊಳ್ಳಬೇಕಿತ್ತು.ಸಮಯ ಕಳೆದಂತೆ ಶೂಟರ್ ಮತ್ತು ಸ್ಪರ್ಧಿಗಳ ನಡುವಿನ ಅಂತರವನ್ನು ಕಡಿಮೆ ಮಾಡಲಾಗುತ್ತಿತ್ತು. ಇದರಿಂದಾಗಿ ನೋವಿನ ತೀವ್ರತೆ ಹೆಚ್ಚಾಗಿ ಸ್ಪರ್ಧಿಗಳು ನರಳಾಡಿದರು. ತೀವ್ರ ನೋವಿನಿಂದಾಗಿ ಮೊದಲು ಶಗುನ್ ಶರ್ಮಾ ಆಟ ತೊರೆದರೆ, ಅವರ ಬೆನ್ನಲ್ಲೇ ಗೌರವ್ ಖನ್ನಾ ಹೊರನಡೆದರು. ಅಂತಿಮವಾಗಿ ನೋವನ್ನು ಸಹಿಸಿಕೊಂಡು ನಿಂತ ವಿಶಾಲ್ ಆದಿತ್ಯ ಸಿಂಗ್ ಹಾಗೂ ಕರಣ್ ವಾಹಿ ಈ ಟಾಸ್ಕ್ನಲ್ಲಿ ಗೆಲುವು ಸಾಧಿಸಿದರು. View this post on Instagram A post shared by Vishal Aditya Singh (@vishalsingh713) ‘ಇದು ಸಾಹಸವಲ್ಲ, ಕ್ರೂರ ಹಿಂಸೆ ಎಂದು ನೆಟ್ಟಿಗರ ಆಕ್ರೋಶಅಪಾಯಕಾರಿ ಸವಾಲುಗಳಿಗೆ ಹೆಸರಾದ ‘ಖತ್ರೋನ್ ಕೆ ಖಿಲಾಡಿ’ ಶೋನಲ್ಲಿ, ರಂಜನೆಗಾಗಿ ಇಷ್ಟೊಂದು ಕ್ರೂರವಾದ ನೋವನ್ನು ನೀಡುವುದು ಅಗತ್ಯವೇ’ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ತೀವ್ರ ವಿರೋಧ ವ್ಯಕ್ತವಾಗುತ್ತಿದೆ.‘ನಾನು ವರ್ಷಗಳಿಂದ ಈ ಶೋ ನೋಡುತ್ತಿದ್ದೇನೆ. ಸ್ಪರ್ಧಿಗಳು ಒಪ್ಪಂದಕ್ಕೆ ಸಹಿ ಹಾಕಿ ಬಂದಿರುತ್ತಾರೆ ನಿಜ. ಆದರೆ ಇಂತಹ ಅಪಾಯಕಾರಿ ಟಾಸ್ಕ್ಗಳು ಹೆಚ್ಚಾಗುತ್ತಿರುವುದು ನಿಜಕ್ಕೂ ಕಳವಳಕಾರಿ’ ಎಂದು ವೀಕ್ಷಕರೊಬ್ಬರು ಕಮೆಂಟ್ ಮಾಡಿದ್ದಾರೆ.ಇನ್ನೊಬ್ಬರು ಪ್ರತಿಕ್ರಿಯಿಸಿ, ‘ಭಯವನ್ನು ಎದುರಿಸುವುದು ಸರಿ, ಆದರೆ ಈ ಗಾಯಗಳು ಶೋ ಮುಗಿದ ಮೇಲೆಯೂ ಅವರ ಆರೋಗ್ಯದ ಮೇಲೆ ಪರಿಣಾಮ ಬೀರಿದರೆ ಅದಕ್ಕೆ ಯಾರು ಹೊಣೆ’ ಎಂದು ಪ್ರಶ್ನಿಸಿದ್ದಾರೆ.‘ಇದು ಸಾಹಸ ಶೋ ಥರ ಕಾಣುತ್ತಿಲ್ಲ, ಬದಲಿಗೆ ಚಿತ್ರಹಿಂಸೆ ನೀಡುತ್ತಿರುವುದು ಎದ್ದು ಕಾಣುತ್ತಿದೆ. ಭಯವನ್ನು ಮೆಟ್ಟಿ ನಿಲ್ಲುವ ಟಾಸ್ಕ್ ನೀಡಿ, ಅದನ್ನು ಬಿಟ್ಟು ಕಣ್ಣೀರು ತರಿಸುವ ಇಂತಹ ಕ್ರೂರ ಆಟಗಳನ್ನಲ್ಲ’ ಎಂದು ಅನೇಕರು ಶೋ ಆಯೋಜಕರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.ಈ ಬಾರಿಯ ‘ಖತ್ರೋನ್ ಕೆ ಖಿಲಾಡಿ 15‘ರಲ್ಲಿ ಗೌರವ್ ಖನ್ನಾ, ವಿಶಾಲ್, ಶಗುನ್, ಕರಣ್ ವಾಹಿ, ಅವಿನಾಶ್ ಮಿಶ್ರಾ, ಫರ್ಹಾನಾ ಭಟ್, ಅವಿಕಾ ಗೋರ್, ಓರಿ, ಹರ್ಷ್ ಗುಜ್ರಾಲ್, ಜಾಸ್ಮಿನ್ ಭಾಸಿನ್, ರೂಬಿನಾ ದಿಲೈಕ್ ಮತ್ತು ರಿತ್ವಿಕ್ ಧನ್ಜಾನಿ ಸ್ಪರ್ಧಿಗಳಾಗಿ ಕಣದಲ್ಲಿದ್ದಾರೆ.