ಅವಮಾನದಿಂದ ಸೋತುಹೋಗಿದ್ದೇನೆ; ಟ್ರೋಲ್ ಆಗಿದ್ದಕ್ಕೆ ನೊಂದು ಕಣ್ಣೀರಿಟ್ಟ ಶಿಕ್ಷಕಿ
ಇನ್ಸ್ಟಾಗ್ರಾಂ ರೀಲ್ಸ್ ಮೂಲಕ ಖಾಸಗಿ ಶಾಲೆಗೆ ಪ್ರಚಾರ ನೀಡಿದ ಆರೋಪದಡಿ ಅಮಾನತುಗೊಂಡಿದ್ದ ತೆಲಂಗಾಣದ ಸರ್ಕಾರಿ ಶಾಲೆ ಶಿಕ್ಷಕಿಯೊಬ್ಬರು ‘ಅವಮಾನ, ಟೀಕೆಗಳಿಂದ ಸೋತುಹೋಗಿದ್ದೇನೆ’ ಎನ್ನುವ ಮೂಲಕ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಬಗ್ಗೆ ವಿಡಿಯೊ ಹಂಚಿಕೊಂಡು ಕಣ್ಣೀರು ಸುರಿಸಿದ್ದಾರೆ.ತೆಲಂಗಾಣದ ಖಮ್ಮಂ ಜಿಲ್ಲೆಯ ಮಾಮಿಲ್ಲಗುಡೆಂ ಸರ್ಕಾರಿ ಪ್ರೌಢಶಾಲೆಯಲ್ಲಿ ಗೌತಮಿ

ಇನ್ಸ್ಟಾಗ್ರಾಂ ರೀಲ್ಸ್ ಮೂಲಕ ಖಾಸಗಿ ಶಾಲೆಗೆ ಪ್ರಚಾರ ನೀಡಿದ ಆರೋಪದಡಿ ಅಮಾನತುಗೊಂಡಿದ್ದ ತೆಲಂಗಾಣದ ಸರ್ಕಾರಿ ಶಾಲೆ ಶಿಕ್ಷಕಿಯೊಬ್ಬರು ‘ಅವಮಾನ, ಟೀಕೆಗಳಿಂದ ಸೋತುಹೋಗಿದ್ದೇನೆ’ ಎನ್ನುವ ಮೂಲಕ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಬಗ್ಗೆ ವಿಡಿಯೊ ಹಂಚಿಕೊಂಡು ಕಣ್ಣೀರು ಸುರಿಸಿದ್ದಾರೆ.ತೆಲಂಗಾಣದ ಖಮ್ಮಂ ಜಿಲ್ಲೆಯ ಮಾಮಿಲ್ಲಗುಡೆಂ ಸರ್ಕಾರಿ ಪ್ರೌಢಶಾಲೆಯಲ್ಲಿ ಗೌತಮಿ ಎನ್ನುವವರು ಇಂಗ್ಲಿಷ್ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ರೀಲ್ಸ್ ಮಾಡುವ ಅಭ್ಯಾಸವಿದ್ದ ಇವರು ವಿಡಿಯೊವೊಂದರಲ್ಲಿ ಖಾಸಗಿ ಶಾಲೆಯೊಂದರ ಬಗ್ಗೆ ಮಾತನಾಡಿದ್ದರು. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ವಿವಾದ ಸೃಷ್ಟಿಯಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಶಿಕ್ಷಣಾಧಿಕಾರಿಗಳು, ಶಿಕ್ಷಕಿ ಸರ್ಕಾರಿ ಶಾಲೆಯಲ್ಲಿ ಸರಿಯಾಗಿ ತನ್ನ ಜವಾಬ್ದಾರಿ ನಿರ್ವಹಿಸುತ್ತಿಲ್ಲ ಎಂದು ಆರೋಪಿಸಿ ಅಮಾನತು ಮಾಡಿದ್ದರು. ಅಮಾನತಾದ ಬಳಿಕವೂ ಸಾಮಾಜಿಕ ಜಾಲತಾಣಗಳಲ್ಲಿ, ಕಚೇರಿಯಲ್ಲಿ ಟೀಕೆ, ನಿಂದನೆ ಮುಂದುವರಿದಿತ್ತು ಎಂದು ಗೌತಮಿ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ವಿಡಿಯೊ ಮಾಡಿ ಅತ್ತ ಶಿಕ್ಷಕಿತನ್ನಿಷ್ಟದ ಕೆಲಸಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಗಳಗಳನೆ ಅತ್ತ ಶಿಕ್ಷಕಿ ಗೌತಮಿ, ‘ವಿವಾದ ಸೃಷ್ಟಿಸಿದ ವಿಡಿಯೊವನ್ನು ನಾನು ನನ್ನ ಮನೆಯಲ್ಲಿ ರೆಕಾರ್ಡ್ ಮಾಡಿದ್ದೇನೆಯೇ ಹೊರತು ಶಾಲಾ ಅವಧಿಯಲ್ಲಿ ಅಲ್ಲ. ನನ್ನ ಯಾವುದೇ ಜವಾಬ್ದಾರಿಗಳನ್ನು ಎಂದಿಗೂ ಮರೆತಿಲ್ಲ. 12 ವರ್ಷ ನನ್ನನ್ನೇ ಸಮರ್ಪಿಸಿಕೊಂಡು ಕೆಲಸ ಮಾಡಿದ್ದೇನೆ’ ಎಂದಿದ್ದಾರೆ.‘ನನ್ನನ್ನು ನಡೆಸುವ ಅಪ್ಪ, ನನ್ನ ಆಧಾರವಾದ ನನ್ನ ಗಂಡ, ನನ್ನ ಶಾಲೆಯ ಮಕ್ಕಳ ಪ್ರೀತಿ, ನನ್ನ ಫಾಲೋವರ್ಸ್ಗಳ ನಂಬಿಕೆ, ಇವೆಲ್ಲವೂ ನನ್ನನ್ನು ಮುನ್ನಡೆಸುತ್ತವೆ ಎಂದು ನಾನು ನಂಬಿದ್ದೇನೆ. ಬಡ ಮಕ್ಕಳಿಗೆ ಶಿಕ್ಷಣ ನೀಡಬೇಕೆಂಬ ಉದ್ದೇಶದಿಂದ ಶಿಕ್ಷಕಿ ಕೆಲಸ ಗಿಟ್ಟಿಸಿಕೊಂಡೆ. ಎಷ್ಟೋ ಅವಮಾನಗಳು, ಎಷ್ಟೋ ಒತ್ತಡವಾದರೂ ಹೋರಾಟ ನಡೆಸಿ, ಪುಸ್ತಕಗಳನ್ನು ದೇಣಿಗೆ ನೀಡಿದೆ. ಯೂಟ್ಯೂಬ್ ಇಂಗ್ಲಿಷ್ ಚಾನೆಲ್ ಮೂಲಕ ಶಿಕ್ಷಣ ನೀಡಿದೆ. ನನ್ನ ಚಾನೆಲ್ ತೋರಿಸಿ ಎಷ್ಟೋ ವಿದ್ಯಾರ್ಥಿಗಳನ್ನು ಸರ್ಕಾರಿ ಶಾಲೆಗೆ ಸೇರಿಸಿದೆ. ನನ್ನೆಲ್ಲಾ ಜವಾಬ್ದಾರಿಯನ್ನು ನಿರ್ವಹಿಸಿದೆ. ಆದರೆ ಈಗ ಆಯಾಸಗೊಂಡಿದ್ದೇನೆ. ಕಷ್ಟಪಟ್ಟು ಕೆಲಸ ಮಾಡುವ ಶಿಕ್ಷಕಿ ಇಂದು ಸೋತುಹೋಗಿದ್ದಾಳೆ. ಎಷ್ಟೋ ಕನಸುಗಳನ್ನು ಕಂಡಿದ್ದೆ. ತಿಳಿಯದೆ ಮಾಡಿದ ತಪ್ಪಿಗೆ ಟ್ರೋಲ್ಗಳು, ಸಮಾಜದಲ್ಲಿ ಅಪಹಾಸ್ಯಗಳು, ಎಷ್ಟೋ ಅವಮಾನಗಳನ್ನು ನೋಡಬೇಕಾಗಿ ಬಂತು. ಕಷ್ಟಪಟ್ಟು ಕೆಲಸ ಮಾಡಿದರೂ ಅದು ತಪ್ಪೇ ಆಯಿತು. ಮಕ್ಕಳಿಗಾಗಿ ಮಾಡಿದ ಕಠಿಣ ಶ್ರಮವೇ ನನಗೆ ಶಾಪವಾಯಿತು’ ಎಂದು ದುಃಖಿಸಿದ್ದಾರೆ.ಸಹಶಿಕ್ಷಕರ ಸಂಚು‘ಸೋಷಿಯಲ್ ಮೀಡಿಯಾ ಟ್ರೋಲ್ಗಳು ನನ್ನ ವಿಷಯದಲ್ಲಿ ತುಂಬಾ ಚೆನ್ನಾಗಿ ಕೆಲಸ ಮಾಡಿದವು. ನನ್ನೊಂದಿಗೆ ಚೆನ್ನಾಗಿದ್ದ ಮಕ್ಕಳನ್ನೇ ಟಾರ್ಗೆಟ್ ಮಾಡಿದರು. ಅದನ್ನು ತಿಳಿದುಕೊಳ್ಳಲಾರದಷ್ಟು ಮೂರ್ಖಳೇನೂ ನಾನಲ್ಲ. ಇಲ್ಲಿ ಕಷ್ಟಪಟ್ಟು ಕೆಲಸ ಮಾಡುವ ಶಿಕ್ಷಕರಿಗೆ ಜಾಗವಿಲ್ಲ ಎಂದು ಅನ್ನಿಸುತ್ತಿದೆ. ಟೈಮ್ ಪಾಸ್ ಮಾಡಬೇಕು. ರಾಜಕೀಯ ನಡೆಸಬೇಕು. ಪಾಠ ಹೇಳಿಕೊಡದೆ, ಫೋನ್ನಲ್ಲಿ ಮಾತನಾಡಿಕೊಳ್ಳಬೇಕು... ಅಂಥವರಿಗೆ ಮಾತ್ರ ಇಲ್ಲ ಸ್ಥಾನವಿದೆ. ನನ್ನಂತಹ ಶಿಕ್ಷಕರಿಗೆ ಸ್ಥಾನವಿಲ್ಲ. ಕಷ್ಟಪಡುವ ಗುಣವೇ ನನಗೆ ಶಾಪವಾಯಿತು. ಸಹಶಿಕ್ಷಕರ ದ್ವೇಷ, ಸಂಚುಗಳು, ಸಾಮಾಜಿಕ ಮಾಧ್ಯಮ ಟ್ರೋಲ್ಗಳು ನನ್ನ ಮೇಲೆ ತುಂಬಾ ಪರಿಣಾಮ ಬೀರಿದವು. ನನ್ನ ಈ ನಿರ್ಧಾರ ನನ್ನನ್ನು ಮುಂದೆ ನಡೆಸುತ್ತದೆ ಎಂದು ನಂಬಿದ್ದೇನೆ. ನಿಮ್ಮ ಸಹಾಯವನ್ನು ಕೋರುತ್ತಿದ್ದೇನೆ’ ಎಂದು ಬರೆದುಕೊಂಡಿದ್ದಾರೆ. View this post on Instagram A post shared by Bhukya Gowthami (@gouthamirathode)