ಕೆಎಎಸ್ ಪರೀಕ್ಷೆಯಲ್ಲೂ ಅಕ್ರಮ; 25 ಮಾರ್ಕ್ಸ್ಗೆ 1.5 ಕೋಟಿ ಹಣಕ್ಕೆ ಡಿಮ್ಯಾಂಡ್ ಆರೋಪ
ಬೆಂಗಳೂರು: ಕೆಎಎಸ್ ಪರೀಕ್ಷೆಯಲ್ಲೂ (KAS Exam) ಅಕ್ರಮದ ಆರೋಪ ಕೇಳಿಬಂದಿದೆ. 25 ಮಾರ್ಕ್ಸ್ಗೆ ಒಂದೂವರೆ ಕೋಟಿ ಹಣಕ್ಕೆ ಡಿಮ್ಯಾಂಡ್ ಮಾಡಿದ್ದ ಬಗ್ಗೆ ಗಂಭೀರ ಆರೋಪ ಹೊರಿಸಲಾಗಿದೆ. ಕೆಎಎಸ್ ಅಕ್ರಮ ವಿಚಾರವಾಗಿ ವಿಧಾನಸೌಧ ಠಾಣೆಯಲ್ಲಿ ದೂರು ನೀಡಲಾಗಿದೆ. ಕೆಎಎಸ್ 384 ಹುದ್ದೆಗೆ ಕಾಸು ಕೊಟ್ಟ ಅಭ್ಯರ್ಥಿ ಹೆಸರು ಸಮೇತ ದೂರು ಕೊಡಲಾಗಿದೆ. ಕಾಂತಕುಮಾರ್ ಎಂಬವರು ಒಬ್ಬ ಅಭ್ಯ

ಬೆಂಗಳೂರು: ಕೆಎಎಸ್ ಪರೀಕ್ಷೆಯಲ್ಲೂ (KAS Exam) ಅಕ್ರಮದ ಆರೋಪ ಕೇಳಿಬಂದಿದೆ. 25 ಮಾರ್ಕ್ಸ್ಗೆ ಒಂದೂವರೆ ಕೋಟಿ ಹಣಕ್ಕೆ ಡಿಮ್ಯಾಂಡ್ ಮಾಡಿದ್ದ ಬಗ್ಗೆ ಗಂಭೀರ ಆರೋಪ ಹೊರಿಸಲಾಗಿದೆ. ಕೆಎಎಸ್ ಅಕ್ರಮ ವಿಚಾರವಾಗಿ ವಿಧಾನಸೌಧ ಠಾಣೆಯಲ್ಲಿ ದೂರು ನೀಡಲಾಗಿದೆ. ಕೆಎಎಸ್ 384 ಹುದ್ದೆಗೆ ಕಾಸು ಕೊಟ್ಟ ಅಭ್ಯರ್ಥಿ ಹೆಸರು ಸಮೇತ ದೂರು ಕೊಡಲಾಗಿದೆ. ಕಾಂತಕುಮಾರ್ ಎಂಬವರು ಒಬ್ಬ ಅಭ್ಯರ್ಥಿ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಅಭ್ಯರ್ಥಿ ಕೆಪಿಎಸ್ಸಿ ಸದಸ್ಯರೊಬ್ಬರ ಜೊತೆ ಸಂಪರ್ಕದಲ್ಲಿದ್ದ ಎಂದು ಆರೋಪಿಸಿದ್ದಾರೆ. ಪ್ರಾಥಮಿಕ ವಿಚಾರಣೆಗಾಗಿ ಪೊಲೀಸರು ದೂರನ್ನು ಕಾಯ್ದಿರಿಸಿದ್ದಾರೆ. ಇದನ್ನೂ ಓದಿ: ಪಶುವೈದ್ಯಾಧಿಕಾರಿ ನೇಮಕಾತಿ ಹಗರಣ; FSLಗೆ OMR ಶೀಟ್ ಸಂದರ್ಶನದಲ್ಲಿ 25 ಮಾರ್ಕ್ಸ್ಗೆ ಕೆಪಿಎಸ್ಸಿ ಸದಸ್ಯರೊಬ್ಬರಿಗೆ ಒಂದೂವರೆ ಕೋಟಿ ನೀಡಲಾಗಿದೆ ಎಂದು ಕಾಂತಕುಮಾರ್ ಆರೋಪಿಸಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಸಿಡಿಆರ್ ಸಿಕ್ಕಿದೆ. ಎಷ್ಟು ಸಲ ಅಭ್ಯರ್ಥಿ ಹಾಗೂ ಮೆಂಬರ್ ಮಾತನಾಡಿದ್ದಾರೆ ಅನ್ನೋದು ಸಿಡಿಆರ್ನಲ್ಲಿ ಸಿಕ್ಕಿದೆ. ಮೆಂಬರ್ ಹೇಗೆ ಸಂದರ್ಶನದ ಅಭ್ಯರ್ಥಿಗಳ ಜೊತೆಗೆ ಮಾತುಕತೆ ಮಾಡ್ತಾರೆ ಎಂಬ ಪ್ರಶ್ನೆ ವ್ಯಕ್ತವಾಗಿದೆ. ಎರಡು ತಿಂಗಳ ಹಿಂದೆ ನಡೆದಿದ್ದ ಸಂದರ್ಶನದಲ್ಲಿ ನಾಲ್ಕು ಜನ ಪ್ಯಾನಲ್ನಲ್ಲಿ ಇದ್ದರು. ಅವರ ಪೈಕಿ ಓರ್ವ ಸದಸ್ಯೆಯಿಂದ ಕೋಟಿ ಕೋಟಿ ಹಣಕ್ಕೆ ಡಿಮ್ಯಾಂಡ್ ಮಾಡಲಾಗಿತ್ತು ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಬೆಂಗಳೂರಿನ ವಾಹನ ಸವಾರರಿಗೆ ಬಿಗ್ ಶಾಕ್ – 3 ತಿಂಗಳು ಕೆ.ಆರ್. ಮಾರ್ಕೆಟ್ ಮೇಲ್ಸೇತುವೆ ರಸ್ತೆ ಬಂದ್