ಗದಗ ಜಿಲ್ಲಾಡಳಿತ ಭವನಕ್ಕೆ ರೈತರ ಮುತ್ತಿಗೆ: ಡಿ.ಸಿ ಕ್ಷಮೆಯಾಚನೆಗೆ ಪಟ್ಟು
ಗದಗ: ಬೆಳೆ ವಿಮೆ ಪರಿಹಾರದ ಬಗ್ಗೆ ವಿಚಾರಿಸಲು ಬಂದ ರೈತರಿಗೆ ಅಗೌರವ ತೋರಿದ ಜಿಲ್ಲಾಧಿಕಾರಿ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿ ರೈತರು ನಗರದಲ್ಲಿನ ಜಿಲ್ಲಾಡಳಿತ ಭವನಕ್ಕೆ ಬುಧವಾರ ಮುತ್ತಿಗೆ ಹಾಕಿದರು.ಚಕ್ಕಡಿ, ಟ್ರ್ಯಾಕ್ಟರ್ ಸಮೇತ ಚನ್ನಮ್ಮ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ರೈತರು ಅಲ್ಲಲ್ಲಿ ರಸ್ತೆ ತಡೆ ನಡೆಸಿದರು. ಜಿಲ್ಲಾಡಳಿತ ಭವನದೊಳಗೆ ರೈತರು ಪ್ರವೇಶಿ

ಗದಗ: ಬೆಳೆ ವಿಮೆ ಪರಿಹಾರದ ಬಗ್ಗೆ ವಿಚಾರಿಸಲು ಬಂದ ರೈತರಿಗೆ ಅಗೌರವ ತೋರಿದ ಜಿಲ್ಲಾಧಿಕಾರಿ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿ ರೈತರು ನಗರದಲ್ಲಿನ ಜಿಲ್ಲಾಡಳಿತ ಭವನಕ್ಕೆ ಬುಧವಾರ ಮುತ್ತಿಗೆ ಹಾಕಿದರು.ಚಕ್ಕಡಿ, ಟ್ರ್ಯಾಕ್ಟರ್ ಸಮೇತ ಚನ್ನಮ್ಮ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ರೈತರು ಅಲ್ಲಲ್ಲಿ ರಸ್ತೆ ತಡೆ ನಡೆಸಿದರು. ಜಿಲ್ಲಾಡಳಿತ ಭವನದೊಳಗೆ ರೈತರು ಪ್ರವೇಶಿಸದಂತೆ ಪೊಲೀಸರು ಗೇಟ್ ಬಂದ್ ಮಾಡಿದರು. ಬ್ಯಾರಿಕೇಡ್ ಅಳವಡಿಸಿ, ರೈತರನ್ನು ತಡೆದರು. ಈ ವೇಳೆ ಮಳೆ ಸುರಿಯಿತು.ಕೆಲ ಸಮಯ ಪೊಲೀಸರೊಂದಿಗೆ ವಾಗ್ದಾನ ನಡೆಸಿದ ರೈತರು, ನಂತರ ಜಿಲ್ಲಾಡಳಿತ ಭವನ ಮುಂದಿನ ರಸ್ತೆಯಲ್ಲಿ ಧರಣಿ ಕುಳಿತರು. ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರೇ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಬೇಕು, ರೈತರ ಬಳಿ ಕ್ಷಮಾಪಣೆ ಕೇಳಬೇಕು ಎಂದು ಪಟ್ಟುಹಿಡಿದರು.ಬೈರನಹಟ್ಟಿ ಶ್ರೀಗಳು ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು.
Read the complete story at Prajavani