ಕೀವ್ನಲ್ಲಿ ಡ್ರೋನ್–ಕ್ಷಿಪಣಿ ದಾಳಿ: 17 ಮಂದಿ ಸಾವು
ಕೀವ್: ಉಕ್ರೇನ್ ರಾಜಧಾನಿ ಕೀವ್ ಹಾಗೂ ಸುತ್ತಲಿನ ಪ್ರದೇಶಗಳ ಮೇಲೆ ಡ್ರೋನ್ ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿಗಳಿಂದ ರಷ್ಯಾ ನಡೆಸಿದ ದಾಳಿಯಲ್ಲಿ 17 ಮಂದಿ ಸಾವಿಗೀಡಾಗಿದ್ದು, 44ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ‘ನಮ್ಮ ಬಳಿ ಪೇಟ್ರಿಯಾಟ್ ಪ್ರತಿಬಂಧಕ ಕ್ಷಿಪಣಿಗಳ ಕೊರತೆ ಇರುವುದರಿಂದ ರಷ್ಯಾದ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹೊಡೆದುರುಳಿಸಲು ಸಾಧ್ಯವಾಗ

ಕೀವ್: ಉಕ್ರೇನ್ ರಾಜಧಾನಿ ಕೀವ್ ಹಾಗೂ ಸುತ್ತಲಿನ ಪ್ರದೇಶಗಳ ಮೇಲೆ ಡ್ರೋನ್ ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿಗಳಿಂದ ರಷ್ಯಾ ನಡೆಸಿದ ದಾಳಿಯಲ್ಲಿ 17 ಮಂದಿ ಸಾವಿಗೀಡಾಗಿದ್ದು, 44ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ‘ನಮ್ಮ ಬಳಿ ಪೇಟ್ರಿಯಾಟ್ ಪ್ರತಿಬಂಧಕ ಕ್ಷಿಪಣಿಗಳ ಕೊರತೆ ಇರುವುದರಿಂದ ರಷ್ಯಾದ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹೊಡೆದುರುಳಿಸಲು ಸಾಧ್ಯವಾಗುತ್ತಿಲ್ಲ’ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ. ‘ಮಿತ್ರರಾಷ್ಟ್ರಗಳು ಸಾಧ್ಯವಾದಷ್ಟು ಬೇಗ ವಾಯು ರಕ್ಷಣಾ ನೆರವನ್ನು ಒದಗಿಸಬೇಕು. ಈಗ ಸಾವಿಗೀಡಾಗಿರುವ ಜೀವಗಳನ್ನು ಬ್ಯಾಲಿಸ್ಟಿಕ್ ಇಂಟರ್ಸೆಪ್ಟರ್ಗಳಿಂದ ಮಾತ್ರವೇ ಬದುಕುಳಿಸಬಹುದಿತ್ತು. ವಾಯು ರಕ್ಷಣಾ ಸಾಮಗ್ರಿಗಳ ಪೂರೈಕೆಯಲ್ಲಿ ವಿಳಂಬ ಮಾಡುವುದು ಅಥವಾ ಅವುಗಳನ್ನು ಹಸ್ತಾಂತರಿಸಲು ಹಿಂಜರಿಯುವುದು ಭಾರಿ ಸಾವು–ನೋವು ಮತ್ತು ವಿನಾಶಕ್ಕೆ ಕಾರಣವಾಗುತ್ತದೆ ಎಂಬುದನ್ನು ನಮ್ಮ ಮಿತ್ರರಾಷ್ಟ್ರಗಳು ಅರ್ಥಮಾಡಿಕೊಳ್ಳಬೇಕು’ ಎಂದು ಝೆಲೆನ್ಸ್ಕಿ ಸಾಮಾಜಿಕ ಮಾಧ್ಯಮದಲ್ಲಿ ಅಲವತ್ತುಕೊಂಡಿದ್ದಾರೆ.
Read the complete story at Prajavani