ಪುಷ್ಕರ್ ಕನಸಿನ `ವಿಜಯನಗರ ಸಾಮ್ರಾಜ್ಯ’ – ಭಾರೀ ಬಜೆಟ್ನಲ್ಲಿ ನಿರ್ಮಾಣ
ಸ್ಯಾಂಡಲ್ವುಡ್ನಲ್ಲಿ ಅಚ್ಚರಿಯ ಸಿನಿಮಾವೊಂದು ನಿರ್ಮಾಣಗೊಳುತ್ತಿದೆ. ಕಿರಿಕ್ ಪಾರ್ಟಿ, ಅವನೇ ಶ್ರೀಮನ್ನಾರಾಯಣ, ಅವತಾರ ಪುರುಷ ಸೇರಿದಂತೆ ಸಾಕಷ್ಟು ಬಿಗ್ ಬಜೆಟ್ ಸಿನಿಮಾಗಳನ್ನು ನಿರ್ಮಿಸಿರುವ ಪುಷ್ಕರ್ ಮಲ್ಲಿಕಾರ್ಜುನಯ್ಯ ಇದೀಗ ಹೊಸ ಸಾಹಸಕ್ಕೆ ಮುಂದಾಗಿದ್ದಾರೆ. ವಿಜಯನಗರ ಸಾಮ್ರಾಜ್ಯವನ್ನು ಬೆಳ್ಳಿ ತೆರೆಗೆ ಪರಿಚಯಿಸೋಕೆ ರೆಡಿಯಾಗಿದ್ದಾರೆ. ಈ ಸಿನಿಮಾ ಅದ್ಧೂರಿ ಬಜ

ಸ್ಯಾಂಡಲ್ವುಡ್ನಲ್ಲಿ ಅಚ್ಚರಿಯ ಸಿನಿಮಾವೊಂದು ನಿರ್ಮಾಣಗೊಳುತ್ತಿದೆ. ಕಿರಿಕ್ ಪಾರ್ಟಿ, ಅವನೇ ಶ್ರೀಮನ್ನಾರಾಯಣ, ಅವತಾರ ಪುರುಷ ಸೇರಿದಂತೆ ಸಾಕಷ್ಟು ಬಿಗ್ ಬಜೆಟ್ ಸಿನಿಮಾಗಳನ್ನು ನಿರ್ಮಿಸಿರುವ ಪುಷ್ಕರ್ ಮಲ್ಲಿಕಾರ್ಜುನಯ್ಯ ಇದೀಗ ಹೊಸ ಸಾಹಸಕ್ಕೆ ಮುಂದಾಗಿದ್ದಾರೆ. ವಿಜಯನಗರ ಸಾಮ್ರಾಜ್ಯವನ್ನು ಬೆಳ್ಳಿ ತೆರೆಗೆ ಪರಿಚಯಿಸೋಕೆ ರೆಡಿಯಾಗಿದ್ದಾರೆ. ಈ ಸಿನಿಮಾ ಅದ್ಧೂರಿ ಬಜೆಟ್ನಲ್ಲಿ ನಿರ್ಮಾಣ ಆಗುತ್ತಿರುವುದು ವಿಶೇಷ. ಚಿತ್ರದ ಮತ್ತೊಂದು ವಿಶೇಷ ಅಂದರೆ, ಈ ಸಿನಿಮಾವನ್ನು ಅವರೇ ನಿರ್ದೇಶನ ಮಾಡುವುದರ ಜೊತೆಗೆ ನಾಯಕನಾಗಿ ಪರಿಚಯ ಆಗುತ್ತಿದ್ದಾರೆ. ಇದು ದಿಢೀರ್ ಅಂತ ತಯಾರಾಗುತ್ತಿರುವ ಚಿತ್ರವಲ್ಲ. ಕಳೆದ ಮೂರ್ನಾಲ್ಕು ವರ್ಷಗಳಿಂದ ಅದಕ್ಕೆ ಬೇಕಾದ ಪೂರ್ವ ತಯಾರಿಯಲ್ಲಿ ತೊಡಗಿಸಿಕೊಂಡಿದ್ದ ಅವರು, ಇದೀಗ ಸಿನಿಮಾವನ್ನು ಶೇ.70ರಷ್ಟು ಪೂರ್ಣಗೊಳಿಸಿದ್ದಾರೆ. ಪಕ್ಕಾ ತಯಾರಿ ಮಾಡಿಕೊಂಡೇ ಅಖಾಡಕ್ಕೆ ಇಳಿದಿದ್ದಾರೆ. ಇದನ್ನೂ ಓದಿ: ನನ್ನ ಬಗ್ಗೆ ಎಐ, ಡೀಪ್ಫೇಕ್ ಮಾಡಿದ್ರೆ ಹುಷಾರ್- ವಾರ್ನಿಂಗ್ ಕೊಟ್ಟ ಮೃಣಾಲ್ ಠಾಕೂರ್ ಈವರೆಗೂ ಕನ್ನಡ ಚಿತ್ರೋದ್ಯಮದಲ್ಲಿ ಆಗದೇ ಇರುವಂಥ ಪ್ರಯೋಗವನ್ನು ಈ ಚಿತ್ರದಲ್ಲಿ ಮಾಡಿದ್ದಾರೆ ಪುಷ್ಕರ್ ಮಲ್ಲಿಕಾರ್ಜುನ್. ಈ ಚಿತ್ರವನ್ನು ವರ್ಚುವಲ್ ಪ್ರೊಡಕ್ಷನ್ (ಅನ್ ರಿಯಲ್ ಇಂಜಿನ್ ಬಳಸಿ) ಚಿತ್ರೀಕರಿಸಿರುವುದು ವಿಶೇಷ. ಈವರೆಗೆ ಕನ್ನಡ ಸಿನಿಮಾದಲ್ಲಿ ಬಳಕೆ ಆಗದ ತಂತ್ರಜ್ಞಾನ ಇದಾಗಿದ್ದು, ದುಬೈ ಮತ್ತು ಮುಂಬೈ ಮೂಲದ ತಂತ್ರಜ್ಞರು ಈ ಚಿತ್ರಕ್ಕೆ ಕಾರ್ಯನಿರ್ವಹಿಸಿದ್ದಾರೆ. ‘ತುಂಬಾ ಅಡ್ವಾನ್ಸ್ಡ್ ಟೆಕ್ನಾಲಜಿಯನ್ನು ಈ ಸಿನಿಮಾಕ್ಕೆ ಬಳಸಿರುವುದು ಔಟ್ ಪುಟ್ ನೋಡಿದಾಗ ತಿಳಿಯುತ್ತದೆ’ ಎಂಬುದು ಪುಷ್ಕರ್ ಅನಿಸಿಕೆ. ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಲಿದೆ. ಕಲಾವಿದರು, ತಾಂತ್ರಿಕ ವರ್ಗ ಸೇರಿದಂತೆ ಹಲವು ವಿಷಯಗಳನ್ನು ಸದ್ಯದಲ್ಲೇ ಬಿಡುಗಡೆ ಆಗುವ ಫಸ್ಟ್ ಲುಕ್ ಟೀಸರ್ ವೇಳೆ ಮಾಹಿತಿ ಹಂಚಿಕೊಳ್ಳಲು ನಿರ್ಧರಿಸಿದ್ದಾರೆ ಪುಷ್ಕರ್ ಮಲ್ಲಿಕಾರ್ಜುನಯ್ಯ. ಹತ್ತು ಹಲವಾರು ಅಚ್ಚರಿಗಳು ಈ ಸಿನಿಮಾದ ಹಿಂದಿವೆ. ಮೊದಲ ಸಿನಿಮಾದಲ್ಲೇ ಬೃಹತ್ ವೆಚ್ಚದ, ಕರುನಾಡ ಮಹಿಮೆ ಸಾರುವ ವಿಜಯನಗರ ಸಾಮ್ರಾಜ್ಯದ ವೈಭವವನ್ನು ತೆರೆಯ ಮೇಲೆ ಕಟ್ಟಿ ಕೊಡಲು ಮುಂದಾಗಿದ್ದಾರೆ ಪುಷ್ಕರ್ ಮಲ್ಲಿಕಾರ್ಜುನಯ್ಯ. ಎರಡು ಯುಗಗಳಲ್ಲಿ ನಡೆಯುವ ಕಥೆ ಇದಾಗಿದ್ದು, ಎರಡೂ ಕಾಲಘಟ್ಟದ ಅಸ್ಮಿತೆಯನ್ನು ತೆರೆದಿಡುವ ಪ್ರಯತ್ನಕ್ಕೆ ಅಡಿ ಇಟ್ಟಿದ್ದಾರೆ. ಹಂಪಿ ಸುತ್ತಮುತ್ತ ಹಾಗೂ ಬೃಹತ್ ಸೆಟ್ ನಿರ್ಮಿಸಿ ಚಿತ್ರೀಕರಿಸಲಾಗಿದೆ. ಹೀಗಾಗಿ ಈ ಸಿನಿಮಾಕ್ಕೆ ವಿಜಯನಗರ ಸಾಮ್ರಾಜ್ಯ ಎಂದು ಹೆಸರಿಡಲಾಗಿದೆ.ಇದನ್ನೂ ಓದಿ: ಹಲವು ದಿನಗಳ ವಿರಾಮದ ಬಳಿಕ ಕಮ್ಬ್ಯಾಕ್ ಆದ ವಿಕ್ರಂ ರವಿಚಂದ್ರನ್ ‘ಹಕ್ಕ ಬುಕ್ಕ ವಿದ್ಯಾರಣ್ಯರಿಂದ ಸ್ಥಾಪನೆಯಾದ ವಿಜಯನಗರ ಸಾಮ್ರಾಜ್ಯದ, 1565ರ ತಾಳಿಕೋಟೆ ಕದನದಲ್ಲಿ ಪತನವಾಗುವವರೆಗೂ ಸುಮಾರು 250 ವರ್ಷ ನಡೆದ ಕೆಲವು ಮಹತ್ತರ ಘಟನೆಗಳನ್ನು ಈ ಚಿತ್ರದಲ್ಲಿ ಬಿಂಬಿಸಲಿದ್ದೇನೆ. ಕನ್ನಡಿಗರ ಹೆಮ್ಮೆಯ ತಾಯಿ ಭುವನೇಶ್ವರಿ ನೆಲೆ ಹಂಪಿ, ದಕ್ಷಿಣ ಭಾರತವನ್ನು 250 ವರ್ಷ ಒಂದು ಸಾಮ್ರಾಜ್ಯ ಹೇಗೆ ತನ್ನ ಅಸ್ತಿತ್ವ ಕಾಪಾಡಿಕೊಂಡು ಬಂತು ಎಂಬುದು ಒಂದು ಅಂಶವಾದರೆ, 1770ರಲ್ಲಿ ನಡೆಯುವ ಒಂದು ಘಟನೆ ಪ್ಲಾಶ್ ಬ್ಯಾಕ್ ನಲ್ಲಿ ಬರುತ್ತದೆ. ಒಟ್ಟಾರೆ ವಿಜಯನಗರ ಸಾಮ್ರಾಜ್ಯದ ಸಾರ್ವಭೌಮವನ್ನು ಪ್ರತಿಬಿಂಬಿಸುವ ಕಥೆಯೇ ಪ್ರಮುಖ ಅಂಶ’ ಎನ್ನುತ್ತಾರೆ ಪುಷ್ಕರ್ ಮಲ್ಲಿಕಾರ್ಜುನಯ್ಯ.ಇದನ್ನೂ ಓದಿ: ನಟ ಕಾರ್ತಿ ಜೊತೆಯಾದ ನಿರ್ದೇಶಕ ಮೋಹನ್ ರಾಜ: ಪ್ರಿನ್ಸ್ ಪಿಕ್ಚರ್ಸ್ ನಿರ್ಮಾಣದಲ್ಲಿ ಬಿಗ್ ಬಜೆಟ್ ಚಿತ್ರ