ಜೂನಿಯರ್ ಹಾಕಿ: ಎಂಟರ ಘಟ್ಟದಲ್ಲಿ ಕರ್ನಾಟಕ ನಿರ್ಗಮನ
ಬೆಂಗಳೂರು: ಕರ್ನಾಟಕ ತಂಡ, ಕೊಯಮತ್ತೂರಿನಲ್ಲಿ ನಡೆಯುತ್ತಿರುವ 16ನೇ ಹಾಕಿ ಇಂಡಿಯಾ ಜೂನಿಯರ್ ಪುರುಷರ ರಾಷ್ಟ್ರೀಯ ಚಾಂಪಿಯನ್ಷಿಪ್ನ ಎ ಡಿವಿಷನ್ ಕ್ವಾರ್ಟರ್ಫೈನಲ್ನಲ್ಲಿ ಪ್ರಬಲ ಪಂಜಾಬ್ ಎದುರು ಬುಧವಾರ 2–5 ಗೋಲುಗಳಿಂದ ಸೋಲನುಭವಿಸಿತು.ಪ್ರಶಸ್ತಿಗೆ ನೆಚ್ಚಿನ ತಂಡವಾಗಿರುವ ಪಂಜಾಬ್ ಪರ ಅಜಯ್ಪಾಲ್ ಸಿಂಗ್ (22ನೇ ನಿಮಿಷ), ಜರ್ಮನ್ ಸಿಂಗ್ (24ನೇ ನಿಮಿಷ), ಸನ್ನಿ (3

ಬೆಂಗಳೂರು: ಕರ್ನಾಟಕ ತಂಡ, ಕೊಯಮತ್ತೂರಿನಲ್ಲಿ ನಡೆಯುತ್ತಿರುವ 16ನೇ ಹಾಕಿ ಇಂಡಿಯಾ ಜೂನಿಯರ್ ಪುರುಷರ ರಾಷ್ಟ್ರೀಯ ಚಾಂಪಿಯನ್ಷಿಪ್ನ ಎ ಡಿವಿಷನ್ ಕ್ವಾರ್ಟರ್ಫೈನಲ್ನಲ್ಲಿ ಪ್ರಬಲ ಪಂಜಾಬ್ ಎದುರು ಬುಧವಾರ 2–5 ಗೋಲುಗಳಿಂದ ಸೋಲನುಭವಿಸಿತು.ಪ್ರಶಸ್ತಿಗೆ ನೆಚ್ಚಿನ ತಂಡವಾಗಿರುವ ಪಂಜಾಬ್ ಪರ ಅಜಯ್ಪಾಲ್ ಸಿಂಗ್ (22ನೇ ನಿಮಿಷ), ಜರ್ಮನ್ ಸಿಂಗ್ (24ನೇ ನಿಮಿಷ), ಸನ್ನಿ (32ನೇ ನಿಮಿಷ), ಅಮನ್ದೀಪ್ (35ನೇ) ಮತ್ತು ಗುರ್ವಿಂದರ್ ಸಿಂಗ್ (60ನೇ ನಿಮಿಷ) ಗೋಲು ಗಳಿಸಿದರು. ಕರ್ನಾಟಕ ತಂಡದ ಎರಡೂ ಗೋಲುಗಳನ್ನು ಕಿರಣ್ ರೆಡ್ಡಿ (21 ಮತ್ತು 28ನೇ ನಿಮಿಷ) ಗಳಿಸಿದರು.ಪಂಜಾಬ್ ತಂಡ ಗುರುವಾರ ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಒಡಿಶಾ ತಂಡವನ್ನು ಎದುರಿಸಲಿದೆ.ಒಡಿಶಾ ತಂಡ ಇನ್ನೊಂದು ಕ್ವಾರ್ಟರ್ಫೈನಲ್ನಲ್ಲಿ ಹರಿಯಾಣ ಎದುರು 5–1 ಗೋಲುಗಳ ಸುಲಭ ಜಯ ಪಡೆಯಿತು. ಲೆಲ್ಸನ್ ಮಿಂಝ್ ಅವರ ಹ್ಯಾಟ್ರಿಕ್ ಒಡಿಶಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು. ಅವರು 15, 20 ಮತ್ತು 46ನೇ ನಿಮಿಷ ಗೋಲುಗಳನ್ನು ಗಳಿಸಿದರು. ಮನದೀಪ್ ಕರ್ಕೆಟ್ಟಾ (3ನೇ ನಿಮಿ) ಮತ್ತು ನಾಯಕ ದೀಪಕ್ ಪ್ರಧಾನ್ ಉಳಿದೆರಡು ಗೋಲು ಗಳಿಸಿದರೆ, ಹರಿಯಾಣ ಪರ ಪ್ರಿನ್ಸ್ (41ನೇ ನಿಮಿಷ) ಏಕೈಕ ಗೋಲು ಹೊಡೆದರು.ಇನ್ನೊಂದು ಸೆಮಿಫೈನಲ್ನಲ್ಲಿ ಜಾರ್ಖಂಡ್, ಮಧ್ಯಪ್ರದೇಶ ತಂಡವನ್ನು ಎದುರಿಸಲಿದೆ.