ಟೇಬಲ್ ಟೆನಿಸ್ | ಕೃಷ್ಣ, ನಿತಿಲಾಗೆ ಸಿಂಗಲ್ಸ್ ಪ್ರಶಸ್ತಿ
ಬೆಂಗಳೂರು: ಕೃಷ್ಣ ಮೌದ್ಗಲ್ಯ ಮತ್ತು ನಿತಿಲಾ ರಕ್ಷಿತಾ ಅವರು, ಬುಧವಾರ ಮಲ್ಲೇಶ್ವರಂ ಅಸೋಸಿಯೇಷನ್ ಆಶ್ರಯದಲ್ಲಿ ಆರಂಭವಾದ ರಾಜ್ಯ ರ್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ 11 ವರ್ಷದೊಳಗಿನ ಬಾಲಕರ ಮತ್ತು ಬಾಲಕಿಯರ ವಿಭಾಗದ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡರು.ಬೆಂಗಳೂರು ನಗರ ಜಿಲ್ಲಾ ಟೇಬಲ್ ಟೆನಿಸ್ ಸಂಸ್ಥ ಸಹಯೋಗದಲ್ಲಿ ಕ್ಲಬ್ ಕೋರ್ಟ್ಸ್ನಲ್ಲಿ ನಡ

ಬೆಂಗಳೂರು: ಕೃಷ್ಣ ಮೌದ್ಗಲ್ಯ ಮತ್ತು ನಿತಿಲಾ ರಕ್ಷಿತಾ ಅವರು, ಬುಧವಾರ ಮಲ್ಲೇಶ್ವರಂ ಅಸೋಸಿಯೇಷನ್ ಆಶ್ರಯದಲ್ಲಿ ಆರಂಭವಾದ ರಾಜ್ಯ ರ್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ 11 ವರ್ಷದೊಳಗಿನ ಬಾಲಕರ ಮತ್ತು ಬಾಲಕಿಯರ ವಿಭಾಗದ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡರು.ಬೆಂಗಳೂರು ನಗರ ಜಿಲ್ಲಾ ಟೇಬಲ್ ಟೆನಿಸ್ ಸಂಸ್ಥ ಸಹಯೋಗದಲ್ಲಿ ಕ್ಲಬ್ ಕೋರ್ಟ್ಸ್ನಲ್ಲಿ ನಡೆಯುತ್ತಿರುವ ಟೂರ್ನಿಯ ಬಾಲಕರ ಸಿಂಗಲ್ಸ್ನಲ್ಲಿ ಕೃಷ್ಣ 11–3, 11–7, 11–6 ರಲ್ಲಿ ನೇರ ಸೆಟ್ಗಳಿಂದ ಚಿರಾಯು ಬಿ.ಎನ್. ವಿರುದ್ಧ ಜಯಗಳಿಸಿದನು.ಸೆಮಿಫೈನಲ್ ಪಂದ್ಯಗಳಲ್ಲಿ ಕೃಷ್ಣ 11–5, 9–11, 11–6, 11–7 ರಿಂದ ರಿಹಾನ್ ಪಿ.ಶೆಟ್ಟಿ ವಿರುದ್ಧ, ಚಿರಾಯು 11–9, 11–7, 11–7 ರಿಂದ ಆರ್ಯನ್ ಮೆನನ್ ವಿರುದ್ಧ ಗೆಲುವು ಸಾಧಿಸಿದ್ದರು.ಬಾಲಕಿರಯ ಸಿಂಗಲ್ಸ್ ಫೈನಲ್ನಲ್ಲಿ ನಿತಿಲಾ 14–12, 9–11, 11–9, 11–3 ರಿಂದ ಇಳಾ ಹೆಗ್ಡೆ ವಿರುದ್ಧ ಜಯಗಳಿಸಿದಳು. ಸೆಮಿಫೈನಲ್ ಪಂದ್ಯಗಳಲ್ಲಿ ನಿತಿಲಾ 11–9, 8–11, 11–6, 11–7 ರಿಂದ ಸುಸ್ಮಿತಾ ಧರೆಣ್ಣವರ ವಿರುದ್ಧ, ಇಳಾ 11–3, 11–9, 11–4 ರಿಂದ ನೆಯ್ಸಾ ಆರ್ಯನಾ ಎ. ಸಂತೋಷ್ ವಿರುದ್ಧ ಗೆಲುವು ಸಾಧಿಸಿದ್ದರು.