ಕೇಂದ್ರದ ಗ್ರೀನ್ ಸಿಗ್ನಲ್ ಮಧ್ಯೆ ಮೇಕೆದಾಟು ಯೋಜನೆಗೆ ಮತ್ತೆ ತಮಿಳುನಾಡು ಸರ್ಕಾರ ವಿರೋಧ
ಚೆನ್ನೈ: ಕೇಂದ್ರ ಸರ್ಕಾರದ (Central govt) ಗ್ರೀನ್ ಸಿಗ್ನಲ್ ಮಧ್ಯೆಯೂ ಮೇಕೆದಾಟು ಯೋಜನೆಗೆ ಮತ್ತೆ ತಮಿಳುನಾಡು ಸರ್ಕಾರ (Tamilnadu Govt) ವಿರೋಧಿಸಿದೆ. ಬುಧವಾರ (ಜು.5) ಮುಖ್ಯಮಂತ್ರಿ ಟಿವಿಕೆ (TVK) ಸರ್ಕಾರದ ಮೊದಲ ಬಜೆಟ್ ಮಂಡನೆಯಾಗಿದ್ದು, ಮೇಕೆದಾಟು ಹಾಗೂ ನೀಟ್ ಪರೀಕ್ಷೆಯನ್ನು ವಿರೋಧಿಸಲಾಗಿದೆ. ಅಲ್ಲದೇ, ಹೊಸೂರಿನಿಂದ ಕರ್ನಾಟಕ ಬೊಮ್ಮಸಂದ್ರದವರೆಗೆ ಮೆಟ್ರೋ

ಚೆನ್ನೈ: ಕೇಂದ್ರ ಸರ್ಕಾರದ (Central govt) ಗ್ರೀನ್ ಸಿಗ್ನಲ್ ಮಧ್ಯೆಯೂ ಮೇಕೆದಾಟು ಯೋಜನೆಗೆ ಮತ್ತೆ ತಮಿಳುನಾಡು ಸರ್ಕಾರ (Tamilnadu Govt) ವಿರೋಧಿಸಿದೆ. ಬುಧವಾರ (ಜು.5) ಮುಖ್ಯಮಂತ್ರಿ ಟಿವಿಕೆ (TVK) ಸರ್ಕಾರದ ಮೊದಲ ಬಜೆಟ್ ಮಂಡನೆಯಾಗಿದ್ದು, ಮೇಕೆದಾಟು ಹಾಗೂ ನೀಟ್ ಪರೀಕ್ಷೆಯನ್ನು ವಿರೋಧಿಸಲಾಗಿದೆ. ಅಲ್ಲದೇ, ಹೊಸೂರಿನಿಂದ ಕರ್ನಾಟಕ ಬೊಮ್ಮಸಂದ್ರದವರೆಗೆ ಮೆಟ್ರೋ ಸಂಪರ್ಕ ಜಾಲದ ಬಗ್ಗೆ ಪ್ರಸ್ತಾಪಿಸಲಾಗಿದೆ. ಗೋದಾವರಿ-ಕಾವೇರಿ, ಕಾವೇರಿ-ವೈಗೈ-ಗುಂಡಾರ್ ನದಿ ಜೋಡಣೆ ಯೋಜನೆ ಈ ವರ್ಷ ಆರಂಭವಾಗಲಿದ್ದು, 150 ಕೋಟಿ ರೂ. ಮೀಸಲಿಡಲಾಗಿದೆ. ಜೊತೆಗೆ, ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಮದುಮಗಳಿಗೆ 8 ಗ್ರಾಂ ಚಿನ್ನ, ರೇಷ್ಮೆ ಸೀರೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಜನಿಸುವ ಶಿಶುಗಳಿಗೆ ಚಿನ್ನದ ಉಂಗುರ, ಕಾಲೇಜು ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ಘೋಷಿಸಿದ್ದಾರೆ. ಇದನ್ನೂ ಓದಿ:ಬಾಂ ಗ್ಲಾದಲ್ಲಿ ನಡೆದಿದ್ದು ವಿದ್ಯಾರ್ಥಿ ಚಳವಳಿಯಲ್ಲ, ಆಡಳಿತ ಬದಲಾವಣೆಗೆಂದೇ ನಡೆಸಿದ ಸಂಘಟಿತ ಹಿಂಸಾತ್ಮಕ ಅಸ್ತ್ರ: ಶೇಖ್ ಹಸೀನಾ ಈ ಮಧ್ಯೆ, ಮೇಕೆದಾಟು ಯೋಜನೆಗೆ (Mekdatu Project) ತಮಿಳುನಾಡು ಸರ್ಕಾರ ವಿರೋಧ ವ್ಯಕ್ತಪಡಿಸಿದ್ರೂ, ಆ.15ರೊಳಗೆ ಕೇಂದ್ರಕ್ಕೆ ಡಿಪಿಆರ್ ಸಲ್ಲಿಸುವುದಾಗಿ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಈ ಮಧ್ಯೆ, ತಂಜಾವೂರು ಕಾವೇರಿ ಪ್ರತಿಭಟನೆಯಲ್ಲಿ ಸಿಎಂ ವಿಜಯ್-ನಟಿ ತ್ರಿಷಾ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆಕೊಟ್ಟು ಬಂಧಿಸಲ್ಪಟ್ಟಿದ್ದ ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ ತಡರಾತ್ರಿ ರಿಲೀಸ್ ಆಗಿದ್ದಾರೆ. ಇವತ್ತು ತಂದೆ ಸ್ಟಾಲಿನ್ರನ್ನು ಭೇಟಿಯಾದ ಬಳಿಕ ಮಾತಾಡಿದ ಉದಯ್ನಿಧಿ ಮುಖ್ಯಮಂತ್ರಿ ವಿಜಯ್ ವಿರುದ್ಧ ಕಿಡಿಕಾರಿದ್ದಾರೆ. ನಾನು ಯಾರ ಹೆಸರನ್ನೂ ಪ್ರಸ್ತಾಪಿಸಿಲ್ಲ. ನನ್ನ ಮಾತು ಡಬಲ್ ಮೀನಿಂಗ್ ಅಲ್ಲ. ಆದರೆ, ಟಿವಿಕೆ ಸರ್ಕಾರ ನನ್ನನ್ನು ಭಯೋತ್ಪಾದಕನ ರೀತಿಯಲ್ಲಿ ನಡೆಸಿಕೊಂಡಿದೆ. ವಿಜಯ್ ಡಮ್ಮಿ ಸಿಎಂ ಮತ್ತು ರೀಲ್ಸ್ ಕ್ರಿಯೇಟರ್ ಎಂದು ಜರಿದಿದ್ದಾರೆ.ಇದನ್ನೂ ಓದಿ: ಬಿಎಂಟಿಸಿ ಬಸ್ಸುಗಳಲ್ಲಿ ಬರಲಿದೆ ಆಡಿಯೋ ಜಾಹೀರಾತು