ಹೊಸಬರಗಿಂತ ಹಳಬರಿಗೆ ಸಾಲ ನೀಡಲು ಬ್ಯಾಂಕ್ಗಳ ಒಲವು
ಹೊಸಬರಿಗೆ ಸಾಲ ನೀಡುವ ಬದಲು ಈಗಾಗಲೇ ಸಾಲ ತೆಗೆದುಕೊಂಡಿರುವ ಹಳೆಯ ಗ್ರಾಹಕರಿಗೆ ಮತ್ತೆ ಸಾಲ ನೀಡಲು ಬ್ಯಾಂಕ್ಗಳು ಒಲವು ತೋರುತ್ತಿವೆ. 2017ರ ಮಾರ್ಚ್ನಲ್ಲಿ ಬ್ಯಾಂಕ್ಗಳು ಹೊಸಬರಿಗೆ ಸಾಲ ನೀಡುವ ಪ್ರಮಾಣ ಶೇ 32ರಷ್ಟಿತ್ತು. ಅದು 2026ರ ಮಾರ್ಚ್ ವೇಳೆಗೆ ಶೇ 13ಕ್ಕೆ ಇಳಿದಿದೆ. ಆದರೆ, ದೇಶದಲ್ಲಿ ಸಾಲ ಪಡೆಯಲು ಅರ್ಹವಾದ ಜನಸಂಖ್ಯೆ ಇದೇ ಅವಧಿಯಲ್ಲಿ 79 ಕೋಟಿಯಿಂದ 89 ಕ

ಹೊಸಬರಿಗೆ ಸಾಲ ನೀಡುವ ಬದಲು ಈಗಾಗಲೇ ಸಾಲ ತೆಗೆದುಕೊಂಡಿರುವ ಹಳೆಯ ಗ್ರಾಹಕರಿಗೆ ಮತ್ತೆ ಸಾಲ ನೀಡಲು ಬ್ಯಾಂಕ್ಗಳು ಒಲವು ತೋರುತ್ತಿವೆ. 2017ರ ಮಾರ್ಚ್ನಲ್ಲಿ ಬ್ಯಾಂಕ್ಗಳು ಹೊಸಬರಿಗೆ ಸಾಲ ನೀಡುವ ಪ್ರಮಾಣ ಶೇ 32ರಷ್ಟಿತ್ತು. ಅದು 2026ರ ಮಾರ್ಚ್ ವೇಳೆಗೆ ಶೇ 13ಕ್ಕೆ ಇಳಿದಿದೆ. ಆದರೆ, ದೇಶದಲ್ಲಿ ಸಾಲ ಪಡೆಯಲು ಅರ್ಹವಾದ ಜನಸಂಖ್ಯೆ ಇದೇ ಅವಧಿಯಲ್ಲಿ 79 ಕೋಟಿಯಿಂದ 89 ಕೋಟಿಗೆ ಏರಿಕೆಯಾಗಿದೆ.ಇವರಲ್ಲಿ ಕನಿಷ್ಠ ಒಂದು ಬಾರಿ ಆದರೂ ರಿಟೇಲ್ ಸಾಲ ಪಡೆದಿರುವವರ ಪ್ರಮಾಣ ಈ ಅವಧಿಯಲ್ಲಿ ಶೇ 35ರಿಂದ ಶೇ 74ಕ್ಕೆ ಹೆಚ್ಚಳವಾಗಿದೆ. ಸಕ್ರಿಯ ಸಾಲಗಾರರ ಪ್ರಮಾಣ ಶೇ 11ರಿಂದ ಶೇ 28ಕ್ಕೆ ತಲುಪಿದೆ. ಕಳೆದ ಒಂದು ದಶಕವು ದೇಶದಲ್ಲಿನ ಸಾಲ ವ್ಯವಸ್ಥೆಯ ಬೆಳವಣಿಗೆಯಲ್ಲಿನ ಮಹತ್ವದ ಅವಧಿಯಾಗಿದೆ. ನೋಟು ರದ್ದತಿ, ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಜಾರಿ ಹಾಗೂ ಏಕೀಕೃತ ಪಾವತಿ ವ್ಯವಸ್ಥೆಯ (ಯುಪಿಐ) ತ್ವರಿತ ಅಳವಡಿಕೆಯು ದೇಶದ ಹಣಕಾಸು ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಳಿಗೆ ನಾಂದಿ ಹಾಡಿವೆ ಎಂದು ಟ್ರಾನ್ಸ್ಯೂನಿಯನ್ ಸಿಬಿಲ್ ಸಂಸ್ಥೆ ಬಿಡುಗಡೆ ಮಾಡಿರುವ ‘ಅನ್ಲಾಕಿಂಗ್ ಆ್ಯಕ್ಸೆಸ್: ಜರ್ನಿ ಆಫ್ ಕ್ರೆಡಿಟ್ ಎಕ್ಸ್ಪ್ಯಾನ್ಷನ್ ಇನ್ ಇಂಡಿಯಾ’ ವರದಿ ತಿಳಿಸಿದೆ.ಇದೇ ಅವಧಿಯಲ್ಲಿ ಬ್ಯಾಂಕ್ಗಳು, ಬ್ಯಾಂಕೇತರ ಹಣಕಾಸು ಕಂಪನಿಗಳು (ಎನ್ಬಿಎಫ್ಸಿ), ಹಣಕಾಸು ತಂತ್ರಜ್ಞಾನ ಸಂಸ್ಥೆಗಳು, ಸಾಲ ಮಾಹಿತಿ ಸಂಸ್ಥೆಗಳ ತಾಂತ್ರಿಕ ಪ್ರಗತಿ ಹಾಗೂ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯಗಳು ಒಟ್ಟಾಗಿ ಸಾಲದ ಲಭ್ಯತೆಯನ್ನು ವಿಸ್ತರಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿವೆ.ಕೋವಿಡ್ ಸಾಂಕ್ರಾಮಿಕವು ಡಿಜಿಟಲ್ ತಂತ್ರಜ್ಞಾನದ ಬಳಕೆಗೆ ಇನ್ನಷ್ಟು ವೇಗ ನೀಡಿತು. ಈ ಬೆಳವಣಿಗೆಗಳು ಒಟ್ಟಾಗಿ ದೇಶದಲ್ಲಿ ಸಾಲದ ಲಭ್ಯತೆ ಹೆಚ್ಚಿಸುವುದರ ಜೊತೆಗೆ, ಸಾಲದಾತರು ಹೆಚ್ಚು ನಿಖರ ಹಾಗೂ ಸಮಯೋಚಿತ ಸಾಲ ನಿರ್ಧಾರಗಳನ್ನು ಕೈಗೊಳ್ಳಲು ನೆರವಾಗಿವೆ.ಸಾಲ ಪಡೆಯುವವರಲ್ಲಿನ ಆದ್ಯತೆಗಳಲ್ಲಿನ ಬದಲಾವಣೆ (ಶೇಕಡವಾರು)ಸಾಲದ ಮಾದರಿ;2017ರ ಮಾರ್ಚ್;2026ರ ಮಾರ್ಚ್ಗೃಹ ಬಳಕೆ;34;51ವಾಹನ;17;18ಚಿನ್ನ;19;22ಮನೆ ದುರಸ್ತಿ;10;10ವ್ಯವಹಾರ ಉದ್ದೇಶ;3;9ಶೇ 39;ಸಾಲ ಪಡೆಯುವವರಲ್ಲಿ ಯುವಜನರ ಪಾಲುಶೇ 30;ಸಾಲ ಪಡೆಯುವವರಲ್ಲಿ ಮಹಿಳೆಯರ ಪಾಲುಶೇ 63;ಅರೆನಗರ, ಗ್ರಾಮೀಣ ಪ್ರದೇಶದಲ್ಲಿ ಸಾಲ ಪಡೆಯುವವರ ಪ್ರಮಾಣಶೇ 11;ಉತ್ತರ ಪ್ರದೇಶದಲ್ಲಿ ಸಾಲ ಹೊಂದಿರುವವರ ಪ್ರಮಾಣ, ಇದು ದೇಶದಲ್ಲಿ ಗರಿಷ್ಠಶೇ 7;ಕರ್ನಾಟಕದಲ್ಲಿ ಸಕ್ರಿಯ ಸಾಲ ಹೊಂದಿರುವವರ ಪ್ರಮಾಣ