ನನಗಾಗಿರುವ ಹಾನಿ ಸರಿಪಡಿಸಲು ಯಾರಿಂದ ಸಾಧ್ಯ?: ಪ್ರಿಯಾಂಕ್ ಖರ್ಗೆ ಬೇಸರ
ಬೆಂಗಳೂರು: ‘ಈಗಾಗಲೇ ಸಾಕಷ್ಟು ಹಾನಿಯಾಗಿದೆ. ಈಗ ಕ್ಷಮೆ ಕೇಳಿದರೆ ಏನು ಪ್ರಯೋಜನ’ ಎಂದು ಸುದ್ದಿಸಂಸ್ಥೆ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾಗೆ(ಪಿಟಿಐ) ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ.ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡು ಪ್ರಕಟಿಸಿದ್ದಕ್ಕಾಗಿ ಸುದ್ದಿಸಂಸ್ಥೆ ಪಿಟಿಐ, ಪ್ರಿಯಾಂಕ್ ಖರ್ಗೆ ಅವರಲ್ಲಿ ಕ್ಷಮೆಯಾಚಿಸಿ ಹೇಳಿಕೆ ಬಿಡುಗಡೆ ಮಾಡಿತ್ತು

ಬೆಂಗಳೂರು: ‘ಈಗಾಗಲೇ ಸಾಕಷ್ಟು ಹಾನಿಯಾಗಿದೆ. ಈಗ ಕ್ಷಮೆ ಕೇಳಿದರೆ ಏನು ಪ್ರಯೋಜನ’ ಎಂದು ಸುದ್ದಿಸಂಸ್ಥೆ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾಗೆ(ಪಿಟಿಐ) ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ.ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡು ಪ್ರಕಟಿಸಿದ್ದಕ್ಕಾಗಿ ಸುದ್ದಿಸಂಸ್ಥೆ ಪಿಟಿಐ, ಪ್ರಿಯಾಂಕ್ ಖರ್ಗೆ ಅವರಲ್ಲಿ ಕ್ಷಮೆಯಾಚಿಸಿ ಹೇಳಿಕೆ ಬಿಡುಗಡೆ ಮಾಡಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಅವರು, ನನಗಾಗಿರುವ ಹಾನಿ ಸರಿಪಡಿಸಲು ಯಾರಿಂದ ಸಾಧ್ಯ? ಎಂದು ಕೇಳಿದ್ದಾರೆ.‘ಈ ತಪ್ಪು ಮಾಹಿತಿಯನ್ನು ಕೇವಲ ರಾಜಕೀಯ ಪಕ್ಷಗಳು ಮಾತ್ರ ಬಳಸಿಕೊಂಡಿಲ್ಲ. ಯುಟ್ಯೂಬರ್ಸ್ ಸೇರಿದಂತೆ ಹಲವಾರು ಕಂಟೆಂಟ್ ಕ್ರಿಯೆಟರ್ಸ್ಗಳು ಬಳಸಿಕೊಂಡು ಸುದ್ದಿ ಮಾಡಿವೆ’ ಎಂದು ಅವರು ಹೇಳಿದ್ದಾರೆ.‘ಈಗ ಆ ಹಾನಿಯನ್ನು ಯಾರು ಸರಿಪಡಿಸುತ್ತಾರೆ? ತಪ್ಪು ಮಾಹಿತಿಯನ್ನು ಹಂಚಿಕೊಂಡಿದ್ದಕ್ಕಾಗಿ ಯಾರನ್ನು ಹೊಣೆಗಾರರನ್ನಾಗಿ ಮಾಡುತ್ತಿರಿ?. ಜವಾಬ್ದಾರಿಯುತ ಪತ್ರಿಕೋದ್ಯಮವು ಭಾರತದಲ್ಲಿ ಇಂದು ಕಣ್ಮರೆಯಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.The damage has already been done, @PTI_News. What is the use of your apology?This misinformation wasn’t amplified only by political parties. It has also been picked up and spread by independent content creators across social media, including @lakhshya_speaks.Who is going to… https://t.co/G44subNb5B pic.twitter.com/6xWl6w3hl1— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) August 4, 2026 ವಿಜಯಪುರದ ತಿಕೋಟಾದಲ್ಲಿ ಪೊಲೀಸ್ ಕಾನ್ಸ್ಟೆಬಲ್ ನೇಮಕಾತಿ ಪರೀಕ್ಷೆಯಲ್ಲಿ ನಡೆದ ಗೊಂದಲಕ್ಕೆ ಸಂಬಂಧಿಸಿದಂತೆ ಪ್ರಿಯಾಂಕ್ ಖರ್ಗೆ ಅವರ ರಾಜೀನಾಮೆಗೆ ವಿರೋಧ ಪಕ್ಷದ ನಾಯಕರು ಆಗ್ರಹಿಸಿದ್ದರು.ಇದಕ್ಕೆ ಪ್ರತಿಕ್ರಿಯಿಸಿದ್ದ ಪ್ರಿಯಾಂಕ್, ಬಿಜೆಪಿ ನಾಯಕರು 25 ದಿನ ಉಪವಾಸ ಕುಳಿತರೇ ನಾನು ರಾಜೀನಾಮೆ ನೀಡುತ್ತೇನೆ ಎಂದಿದ್ದರು.ಆದರೆ, ಪಿಟಿಐ ಈ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿ, ಉದ್ಯೋಕಾಂಕ್ಷಿಗಳು ಉಪವಾಸ ಕುಳಿತರೆ ರಾಜೀನಾಮೆ ನೀಡುವುದಾಗಿ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ ಎಂಬರ್ಥದಲ್ಲಿ ವರದಿ ಮಾಡಿತ್ತು.ವಿವಾದದ ಬಳಿಕ ಆ ಪೋಸ್ಟ್ ಅನ್ನು ಸಾಮಾಜಿಕ ಜಾಲತಾಣದಿಂದ ತೆಗೆದು ಹಾಕಿ, ನಂತರ ಕ್ಷಮೆಯಾಚಿಸಿದೆ.