ಷಿಕಾಗೊದಲ್ಲಿ ವಿದ್ಯಾರಣ್ಯ ಕನ್ನಡ ಕೂಟದ ಜಾತ್ರೆ ಸಂಭ್ರಮ
ನಮ್ಮ ಎನ್ಆರ್ಐ ವಿಭಾಗಕ್ಕೆ ಭೇಟಿ ನೀಡಿಷಿಕಾಗೊ (ಅಮೆರಿಕ): ಅಮೆರಿಕದ ಷಿಕಾಗೊದಲ್ಲಿ ನೆಲೆಸಿರುವ ಕನ್ನಡಿಗರ ಸಂಘಟನೆಯಾದ ವಿದ್ಯಾರಣ್ಯ ಕನ್ನಡ ಕೂಟ (ವಿಕೆಕೆ) ಆಯೋಜಿಸಿದ್ದ 'ವಿಕೆಕೆ ಜಾತ್ರೆ' ಇತ್ತೀಚೆಗೆ ಸಂಭ್ರಮದಿಂದ ನಡೆಯಿತು.ಬಹರೇನ್: ಹಬೀಬ್ ಉಪ್ಪಿನಂಗಡಿಗೆ ಯುಕೆಯ ಅಡ್ವಾನ್ಸ್ ಎಚ್ಇ ಸೀನಿಯರ್ ಫೆಲೋ ಗೌರವಕಾರ್ಯಕ್ರಮದಲ್ಲಿ ಕರ್ನಾಟಕದ ವಿವಿಧ ಭಾಗಗಳ ಸಂಸ್ಕೃತಿ, ಸಂ

ನಮ್ಮ ಎನ್ಆರ್ಐ ವಿಭಾಗಕ್ಕೆ ಭೇಟಿ ನೀಡಿಷಿಕಾಗೊ (ಅಮೆರಿಕ): ಅಮೆರಿಕದ ಷಿಕಾಗೊದಲ್ಲಿ ನೆಲೆಸಿರುವ ಕನ್ನಡಿಗರ ಸಂಘಟನೆಯಾದ ವಿದ್ಯಾರಣ್ಯ ಕನ್ನಡ ಕೂಟ (ವಿಕೆಕೆ) ಆಯೋಜಿಸಿದ್ದ 'ವಿಕೆಕೆ ಜಾತ್ರೆ' ಇತ್ತೀಚೆಗೆ ಸಂಭ್ರಮದಿಂದ ನಡೆಯಿತು.ಬಹರೇನ್: ಹಬೀಬ್ ಉಪ್ಪಿನಂಗಡಿಗೆ ಯುಕೆಯ ಅಡ್ವಾನ್ಸ್ ಎಚ್ಇ ಸೀನಿಯರ್ ಫೆಲೋ ಗೌರವಕಾರ್ಯಕ್ರಮದಲ್ಲಿ ಕರ್ನಾಟಕದ ವಿವಿಧ ಭಾಗಗಳ ಸಂಸ್ಕೃತಿ, ಸಂಪ್ರದಾಯ, ಆಹಾರ ಹಾಗೂ ಕಲೆಯನ್ನು ಅನಾವರಣಗೊಳಿಸಲಾಯಿತು. ಕುಟುಂಬ ಸಮೇತರಾಗಿ ಆಗಮಿಸಿದ್ದ ಕನ್ನಡಿಗರು ದಿನವಿಡೀ ನಡೆದ ವಿವಿಧ ಚಟುವಟಿಕೆಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ಕರ್ನಾಟಕದ ವಿವಿಧ ಪ್ರಾದೇಶಿಕ ಸಂಘಟನೆಗಳ ಸದಸ್ಯರು ಪಾಲ್ಗೊಂಡಿದ್ದರು. ವಿವಿಧ ಸಮುದಾಯಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಉದ್ದೇಶದಿಂದ ಜಾತ್ರೆಯನ್ನು ಆಯೋಜಿಸಲಾಗಿತ್ತು.ಜಪಾನ್ ಕನ್ನಡ ಸಂಘದ ಪಾಡ್ಕಾಸ್ಟ್ನಲ್ಲಿ ಚುನಾವಣಾ ಪ್ರಕ್ರಿಯೆ ಕುರಿತು ಉಪನ್ಯಾಸಆಹಾರ ಮೇಳದಲ್ಲಿ ದೋಸೆ, ಜೋಳದ ರೊಟ್ಟಿ ಸೇರಿದಂತೆ ಉತ್ತರ ಕರ್ನಾಟಕದ ಸಾಂಪ್ರದಾಯಿಕ ತಿನಿಸುಗಳು, ವಿವಿಧ ಬಗೆಯ ತಿಂಡಿಗಳು ಇದ್ದವು. ಮಕ್ಕಳಿಗಾಗಿ ಫೇಸ್ ಪೇಂಟಿಂಗ್, ವಿವಿಧ ಕಲಾ ಚಟುವಟಿಕೆಗಳು ಆಯೋಜಿಸಲಾಗಿತ್ತು. ಸಮುದಾಯದ ಸದಸ್ಯರ ಕರೋಕೆ ಗಾಯನ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ಮಕ್ಕಳ ಪ್ರತಿಭೆ ಅನೇಕರು ಮೆಚ್ಚುಗೆಗೆ ಪಾತ್ರವಾಯಿತು.ವಿದ್ಯಾರಣ್ಯ ಕನ್ನಡ ಕೂಟದ ಅಧ್ಯಕ್ಷ ಗಿರೀಶ್ ರಾಮಮೂರ್ತಿ ಮಾತನಾಡಿ, ‘ಕರ್ನಾಟಕದ ವಿವಿಧ ಸಮುದಾಯಗಳು, ಸಂಸ್ಕೃತಿಗಳು ಮತ್ತು ಸಂಪ್ರದಾಯಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ, ಕನ್ನಡಿಗರ ನಡುವೆ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ಉದ್ದೇಶದಿಂದ ಜಾತ್ರೆಯನ್ನು ಆಯೋಜಿಸಲಾಗಿತ್ತು. ವಿವಿಧ ಸಂಘಟನೆಗಳು, ಸ್ವಯಂಸೇವಕರು, ಪ್ರಾಯೋಜಕರು ಹಾಗೂ ಭಾಗವಹಿಸಿದ ಎಲ್ಲರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿದೆ’ ಎಂದು ಹೇಳಿದರು.ಕೊರಿಯಾದಲ್ಲಿ ಕನ್ನಡದ ಕಂಪು: ಒಂದೂವರೆ ದಶಕದ ಕೊರಿಯಾ ಕನ್ನಡ ಕೂಟದ ಪಯಣ