ಸೈದಾಪುರ | ಔಷಧಿ ತಯಾರಿಕಾ ಘಟಕದಲ್ಲಿ ರಾಸಾಯನಿಕ ಸೋರಿಕೆ: ಮೂವರು ಕಾರ್ಮಿಕರು ಸಾವು
ಸೈದಾಪುರ: ತಾಲ್ಲೂಕಿನ ಕಡೇಚೂರು–ಬಾಡಿಯಾಳ ಕೈಗಾರಿಕಾ ಪ್ರದೇಶದ ಔಷಧಿ ತಯಾರಿಸುವ ಸಿಲ್ ಲ್ಯಾಬೊರೇಟರಿ ಪ್ರೈವೆಟ್ ಲಿಮಿಟೆಡ್ ಕಂಪನಿಯಲ್ಲಿ ಬುಧವಾರ ರಾಸಾಯನಿಕ ಸೋರಿಕೆಯಾಗಿ ಮೂವರು ಕಾರ್ಮಿಕರು ಮೃತಪಟ್ಟಿದ್ದು, ಇಬ್ಬರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.ತೆಲಂಗಾಣದ ಕಟ್ಲ ಗಣೇಶ, ಮಧ್ಯಪ್ರದೇಶದ ವಿಕ್ರಂಸಿಂಗ್ ಹಾಗೂ ಸಂಜಯ್ಸಿಂಗ್ ಮೃತರು.ಆಂಧ್ರಪ್ರದೇಶದ ಮಂಚಾಲ ಹ

ಸೈದಾಪುರ: ತಾಲ್ಲೂಕಿನ ಕಡೇಚೂರು–ಬಾಡಿಯಾಳ ಕೈಗಾರಿಕಾ ಪ್ರದೇಶದ ಔಷಧಿ ತಯಾರಿಸುವ ಸಿಲ್ ಲ್ಯಾಬೊರೇಟರಿ ಪ್ರೈವೆಟ್ ಲಿಮಿಟೆಡ್ ಕಂಪನಿಯಲ್ಲಿ ಬುಧವಾರ ರಾಸಾಯನಿಕ ಸೋರಿಕೆಯಾಗಿ ಮೂವರು ಕಾರ್ಮಿಕರು ಮೃತಪಟ್ಟಿದ್ದು, ಇಬ್ಬರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.ತೆಲಂಗಾಣದ ಕಟ್ಲ ಗಣೇಶ, ಮಧ್ಯಪ್ರದೇಶದ ವಿಕ್ರಂಸಿಂಗ್ ಹಾಗೂ ಸಂಜಯ್ಸಿಂಗ್ ಮೃತರು.ಆಂಧ್ರಪ್ರದೇಶದ ಮಂಚಾಲ ಹೇಮಂತ್ ಹಾಗೂ ಮಂಚಾಲ ಶಿವಕುಮಾರ ಚಿಕಿತ್ಸೆ ಪಡೆಯುತ್ತಿದ್ದಾರೆ.ಕಂಪನಿಯ ಮ್ಯಾನೇಜರ್ ಕೆ.ವಿ. ಮೂರ್ತಿ, ಸೈಟ್ ಇನ್ಚಾರ್ಜ್ ಶಿವಕುಮಾರ ಹಾಗೂ ಮಾನವ ಸಂಪನ್ಮೂಲ ವಿಭಾಗದ ಅಧಿಕಾರಿ ಮಧು ವಿರುದ್ಧ ಸೈದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ರಾತ್ರಿ 1.30ರ ಸುಮಾರಿಗೆ ಅಪಾಯಕಾರಿಯಾದ ಸಲ್ಫ್ಯೂರಿಕ್ ಡೈ ಆಕ್ಸೈಡ್ ರಾಸಾಯನಿಕ ಸೋರಿಕೆಯಾಗಿದೆ. ಇದರಿಂದಾಗಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದ ಗಣೇಶ, ವಿಕ್ರಂಸಿಂಗ್ ಹಾಗೂ ಸಂಜಯ್ ಸಿಂಗ್ ಪ್ರಜ್ಞೆತಪ್ಪಿ ಬಿದ್ದು ಮೃತಪಟ್ಟಿದ್ದಾರೆ. ಕಂಪನಿಯಲ್ಲಿ ಸುರಕ್ಷಿತ ಕ್ರಮಗಳ ಬಗ್ಗೆ ನಿರ್ಲಕ್ಷ್ಯ ತೋರಿ, ಕಾರ್ಮಿಕರ ಸಾವಿಗೆ ಕಾರಣರಾದ ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಅರಳಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಖಾಲಿ ಕೊಡಗಳೊಂದಿಗೆ ಪ್ರತಿಭಟನೆ‘ಕೈಗಾರಿಕಾ ಘಟಕಗಳ ಪರಿಶೀಲನೆ ’‘ಅನಿಲ ಸೋರಿಕೆಗೆ ನಿಖರ ಕಾರಣವನ್ನು ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಗೃಹಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಸಿದ್ದಾರೆ.‘ಕಾರ್ಖಾನೆಗಳಲ್ಲಿ ಕಾರ್ಮಿಕರ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಅತ್ಯಗತ್ಯವಾಗಿದೆ. ಈ ಘಟನೆಯ ಹಿನ್ನೆಲೆಯಲ್ಲಿ ರಾಜ್ಯದ ಕೈಗಾರಿಕಾ ಘಟಕಗಳಲ್ಲಿ ಸುರಕ್ಷತಾ ಮಾನದಂಡಗಳ ಅನುಷ್ಠಾನದ ಕುರಿತು ಅಗತ್ಯ ಪರಿಶೀಲನೆ ನಡೆಸಲಾಗುವುದು’ ಎಂದು ಅವರು ತಿಳಿಸಿದ್ದಾರೆ.‘ಮೃತಪಟ್ಟ ಪ್ರತಿಯೊಬ್ಬ ಕಾರ್ಮಿಕರ ಕುಟುಂಬಕ್ಕೆ ಕಂಪನಿಯು ತಲಾ ₹20 ಲಕ್ಷ ಪರಿಹಾರ ನೀಡುವುದಾಗಿ ಭರವಸೆ ನೀಡಿದೆ. ಕಾರ್ಮಿಕರ ಹಕ್ಕುಗಳಿಗೆ ಅನುಗುಣವಾಗಿ ಇಎಸ್ಐಸಿ ಹಾಗೂ ಕಾರ್ಖಾನೆಗಳ ಕಾಯ್ದೆಯಡಿ ದೊರೆಯಬೇಕಾದ ಇತರೆ ಪರಿಹಾರ ಗಳನ್ನೂ ವಿಳಂಬವಿಲ್ಲದೆ ಒದಗಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಪ್ರಿಯಾಂಕ್ ಹೇಳಿದ್ದಾರೆ.