ರಾಜ್ಯದಲ್ಲಿ 1.11 ಕೋಟಿ ಜನರು ಮತದಾರರ ಪಟ್ಟಿಯಿಂದ ಔಟ್?
– ನಮೂನೆ ವಾಪಾಸಿಗೆ ಇನ್ನೆರಡು ದಿನ ಮಾತ್ರ ಬಾಕಿ – ಬೆಂಗಳೂರಿನಲ್ಲಿ ಅತಿಹೆಚ್ಚು ಮತದಾರರು ASDDO ಪಟ್ಟಿಗೆ ಬೆಂಗಳೂರು: ರಾಜ್ಯದಲ್ಲಿ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (Special Intensive Revision – SIR) ಪ್ರಕ್ರಿಯೆ ಮುಕ್ತಾಯ ಹಂತ ತಲುಪಿದ್ದು 1.11 ಕೋಟಿ ಜನರ ಹೆಸರು ಮತದಾರರ ಪಟ್ಟಿಯಿಂದ ಕೈ ಬಿಡುವ ಸಾಧ್ಯತೆಯಿದೆ. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರ

– ನಮೂನೆ ವಾಪಾಸಿಗೆ ಇನ್ನೆರಡು ದಿನ ಮಾತ್ರ ಬಾಕಿ – ಬೆಂಗಳೂರಿನಲ್ಲಿ ಅತಿಹೆಚ್ಚು ಮತದಾರರು ASDDO ಪಟ್ಟಿಗೆ ಬೆಂಗಳೂರು: ರಾಜ್ಯದಲ್ಲಿ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (Special Intensive Revision – SIR) ಪ್ರಕ್ರಿಯೆ ಮುಕ್ತಾಯ ಹಂತ ತಲುಪಿದ್ದು 1.11 ಕೋಟಿ ಜನರ ಹೆಸರು ಮತದಾರರ ಪಟ್ಟಿಯಿಂದ ಕೈ ಬಿಡುವ ಸಾಧ್ಯತೆಯಿದೆ. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್, ಶೇ. 80ರಷ್ಟು ಎನ್ಯುಮರೇಷನ್ ಫಾರ್ಮ್ಗಳ ಡಿಜಿಟಲೀಕರಣ ಪೂರ್ಣಗೊಂಡಿದೆ. ರಾಜ್ಯದಲ್ಲಿ 1.11 ಕೋಟಿ ಮತದಾರರು ASDDO (Absentee, Shifted, Dead, Duplicate, and Others) ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಹೆಸರು ಕೈಬಿಡದಿರಲು ಮತದಾರರು ಫಾರ್ಮ್-6 ಸಲ್ಲಿಸಬೇಕೆಂದು ಮನವಿ ಮಾಡಿದ್ದಾರೆ. ರಾಜ್ಯದಲ್ಲಿ 5.54 ಕೋಟಿ ಮತದಾರರಿದ್ದು ಈ ಪೈಕಿ 4.43 ಕೋಟಿ ಜನರು ಗಣತಿ ನಮೂನೆ ಭರ್ತಿ ಮಾಡಿದ್ದಾರೆ. ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಶೇಕಡಾವಾರು ಅತಿ ಹೆಚ್ಚು ಮತದಾರರು ‘ASDDO’ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ ಎಂದು ತಿಳಿಸಿದರು. ಆಗಸ್ಟ್ 8 ರಂದು ಎಸ್ಐಆರ್ ಗಣತಿ ಪ್ರಕ್ರಿಯೆಯ ಒಂದು ಹಂತ ಮುಕ್ತಾಯಗೊಳ್ಳಲಿದೆ. ಗಣತಿ ನಮೂನೆ ಸಿಗದೇ ಇದ್ದವರು ಅಥವಾ ಸ್ಥಳಾಂತರಗೊಂಡ 80 ಲಕ್ಷಕ್ಕೂ ಹೆಚ್ಚು ಮತದಾರರು ಹೆದರುವ ಅಗತ್ಯವಿಲ್ಲ. ನೀವು ಕರ್ನಾಟಕದ ಯಾವುದೇ ಭಾಗದಲ್ಲಿದ್ದರೂ ಫಾರ್ಮ್ – 6 (Form 6) ಭರ್ತಿ ಮಾಡುವ ಮೂಲಕ ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ಸೇರಿಸಬಹುದು. ಒಟ್ಟು 57,787 ಮತಗಟ್ಟೆಗಳಲ್ಲಿ ಶೇ.100ರಷ್ಟು ಡಿಜಿಟಲೀಕರಣ ಕಾರ್ಯ ಪೂರ್ಣಗೊಂಡಿದೆ. ರಾಜ್ಯದ 175 ವಿಧಾನಸಭಾ ಕ್ಷೇತ್ರಗಳಲ್ಲಿ ಶೇ.100ರಷ್ಟು ಮತ್ತು 49 ಕ್ಷೇತ್ರಗಳಲ್ಲಿ ಶೇ.90ರಿಂದ ಶೇ.100ರಷ್ಟು ಕೆಲಸಗಳು ಪೂರ್ಣಗೊಂಡಿವೆ. 19 ಜಿಲ್ಲೆಗಳು ಶೇ.100ರಷ್ಟು ಮತ್ತು 15 ಜಿಲ್ಲೆಗಳು ಶೇ. 90ರಿಂದ ಶೇ. 100ರಷ್ಟು ಕಾರ್ಯ ಮುಕ್ತಾಯವಾಗಿದೆ. ಅಂಕಿ ಸಂಖ್ಯೆಯಲ್ಲಿ ಎಸ್ಐಆರ್ ಒಟ್ಟು ಗಣತಿ ನಮೂನೆ ಹಂಚಿಕೆ: 5,54,32,314 ಸ್ವೀಕೃತ ನಮೂನೆಗಳು: 4,43,04,632 ASDDO ಎಂದು ಗುರುತಿಸಲಾದ ಮತದಾರರು:1,11,04,705 (ಶೇ.20.03) ASDDO ಪಟ್ಟಿಯಲ್ಲಿ ಯಾರಿದ್ದಾರೆ? ಶಾಶ್ವತವಾಗಿ ಸ್ಥಳಾಂತರಗೊಂಡವರು – 66,64,943 ಪತ್ತೆಯಾಗದವರು – 16,30,012 ಮೃತಪಟ್ಟವರು – 16,30,872 ಎರಡು ಕಡೆ ಹೆಸರು ಹೊಂದಿರುವವರು – 6,89,904 ಮಾಹಿತಿ ನೀಡಲು ನಿರಾಕರಿಸಿದವರು- 4,88,974 ASDDO ಪಟ್ಟಿ ಬೆಂಗಳೂರಿನಲ್ಲಿ ಹೆಚ್ಚು ಆವರಣದ ಒಳಗಡೆ ಇರುವುದು ಒಟ್ಟು ಮತದಾರರ ಸಂಖ್ಯೆ ಬೆಂಗಳೂರು ದಕ್ಷಿಣ – 11,07,678(21,44,784) ಬೆಂಗಳೂರು ಉತ್ತರ – 11,07,027(23,32,621) ಬೆಂಗಳೂರು ಕೇಂದ್ರ – 9,15,035(18,89,919)