ಗಂಟೆಗೆ 8,700 ಕಿ.ಮೀ ವೇಗದಲ್ಲಿ ಚಂದ್ರನಿಗೆ ಸ್ಪೇಸ್ಎಕ್ಸ್ ರಾಕೆಟ್ ಡಿಕ್ಕಿ
ವಾಷಿಂಗ್ಟನ್: ಎಲಾನ್ ಮಸ್ಕ್ ಒಡೆತನದ ಸ್ಪೇಸ್ಎಕ್ಸ್ (SpaceX) ಸಂಸ್ಥೆ 2015 ರಲ್ಲಿ ಉಡಾಯಿಸಿದ್ದ ಫಾಲ್ಕನ್-9 ರಾಕೆಟ್ನ ಮೇಲ್ಭಾಗದ ಅವಶೇಷವು ಚಂದ್ರನ ಮೇಲ್ಮೈಗೆ ಅಪ್ಪಳಿಸಿದೆ. ಶಾಲಾ ಬಸ್ನಷ್ಟಿರುವ ಸುಮಾರು 4 ಟನ್ (4,000 ಕೆ.ಜಿ.) ತೂಕದ ಈ ಅವಶೇಷವು ಗಂಟೆಗೆ ಭಾರಿ ವೇಗದಲ್ಲಿ (ಸುಮಾರು 8,700 ಕಿ.ಮೀ/ಗಂ) ಚಂದ್ರನ ಹಿಂಭಾಗದಲ್ಲಿರುವ ಐನ್ಸ್ಟೀನ್ ಕುಳಿಯ (Einstei

ವಾಷಿಂಗ್ಟನ್: ಎಲಾನ್ ಮಸ್ಕ್ ಒಡೆತನದ ಸ್ಪೇಸ್ಎಕ್ಸ್ (SpaceX) ಸಂಸ್ಥೆ 2015 ರಲ್ಲಿ ಉಡಾಯಿಸಿದ್ದ ಫಾಲ್ಕನ್-9 ರಾಕೆಟ್ನ ಮೇಲ್ಭಾಗದ ಅವಶೇಷವು ಚಂದ್ರನ ಮೇಲ್ಮೈಗೆ ಅಪ್ಪಳಿಸಿದೆ. ಶಾಲಾ ಬಸ್ನಷ್ಟಿರುವ ಸುಮಾರು 4 ಟನ್ (4,000 ಕೆ.ಜಿ.) ತೂಕದ ಈ ಅವಶೇಷವು ಗಂಟೆಗೆ ಭಾರಿ ವೇಗದಲ್ಲಿ (ಸುಮಾರು 8,700 ಕಿ.ಮೀ/ಗಂ) ಚಂದ್ರನ ಹಿಂಭಾಗದಲ್ಲಿರುವ ಐನ್ಸ್ಟೀನ್ ಕುಳಿಯ (Einstein Crater) ಸಮೀಪ ಡಿಕ್ಕಿಯಾಗಿದೆ. ಈ ಪ್ರಬಲ ಘರ್ಷಣೆಯಿಂದ ಚಂದ್ರನ ಮೇಲ್ಮೈಯಲ್ಲಿ ಉಂಟಾಗಿರುವ ಹೊಸ ಕುಳಿ (Crater) ಹಾಗೂ ಬಾಹ್ಯಾಕಾಶಕ್ಕೆ ಚಿಮ್ಮಿದ ಧೂಳಿನ ಕಣಗಳ ಆಳವಾದ ಅಧ್ಯಯನವನ್ನು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ (NASA) ತನ್ನ ಲೂನಾರ್ ರಿಕಾನಸನ್ಸ್ ಆರ್ಬಿಟರ್ (LRO) ಸಹಾಯದಿಂದ ನಡೆಸುತ್ತಿದೆ. ಚಂದ್ರನ ಮೇಲೆ ಮಾನವ ನಿರ್ಮಿತ ವಸ್ತುವೊಂದು ಅಪ್ಪಳಿಸುತ್ತಿರುವುದು ಇದೇ ಮೊದಲೇನಲ್ಲ. ಹಿಂದೆ ಸಂಶೋಧನೆ ಮತ್ತು ತಾಂತ್ರಿಕ ಕಾರಣಗಳಿಗಾಗಿ ಹಲವು ನೌಕೆಗಳು ಚಂದ್ರನಿಗೆ ಡಿಕ್ಕಿಯಾಗಿವೆ: ನಾಸಾದ ಅಪೋಲೋ ಮಿಷನ್ (Apollo Missions): ಚಂದ್ರನ ಅಂತರಾಳದ ರಚನೆ ಮತ್ತು ಚಂದ್ರಕಂಪನಗಳನ್ನು (Moonquakes) ಸೆಿಸ್ಮೋಮೀಟರ್ ಮೂಲಕ ಅಧ್ಯಯನ ಮಾಡಲು ನಾಸಾ ತನ್ನ ಸ್ಯಾಟರ್ನ್-V ರಾಕೆಟ್ನ ಬೂಸ್ಟರ್ ಭಾಗಗಳನ್ನು ಉದ್ದೇಶಪೂರ್ವಕವಾಗಿ ಚಂದ್ರನಿಗೆ ಅಪ್ಪಳಿಸುವಂತೆ ಮಾಡಿತ್ತು. SpaceX rocket crashes into Moon, carving 100‑foot crater A Falcon 9 stage slammed into the lunar surface at seven times the speed of sound, releasing energy equivalent to three tons of TNT Still, the crater is too small to see from Earth with the naked eye pic.twitter.com/ZRxFO8ETIh — RT (@RT_com) August 5, 2026 ಎಲ್ಸಿಆರ್ಒಎಸ್ಎಸ್ ಯೋಜನೆ (LCROSS – 2009): ಚಂದ್ರನ ಧ್ರುವ ಪ್ರದೇಶಗಳ ಕತ್ತಲ ಕುಳಿಗಳಲ್ಲಿ ನೀರಿನ ಮಂಜುಗಡ್ಡೆಯ (Water Ice) ಉಪಸ್ಥಿತಿಯನ್ನು ಹುಡುಕಲು ನಾಸಾ 2009ರಲ್ಲಿ ತನ್ನ ರಾಕೆಟ್ ಭಾಗವನ್ನು ಚಂದ್ರನಿಗೆ ಡಿಕ್ಕಿ ಹೊಡೆಸಿ, ಅದರಿಂದ ಎದ್ದ ಧೂಳನ್ನು ವಿಶ್ಲೇಷಿಸಿತ್ತು. ಭಾರತದ ಚಂದ್ರಯಾನ-1 ಮತ್ತು ಮೂನ್ ಇಂಪ್ಯಾಕ್ಟ್ ಪ್ರೋಬ್ (2008): ಇಸ್ರೋ (ISRO) 2008ರಲ್ಲಿ ಉಡಾವಣೆ ಮಾಡಿದ ಚಂದ್ರಯಾನ-1 ಆರ್ಬಿಟರ್ನಿಂದ 29-32 ಕೆ.ಜಿ ತೂಕದ ಮೂನ್ ಇಂಪ್ಯಾಕ್ಟ್ ಪ್ರೋಬ್ (MIP) ಅನ್ನು ಚಂದ್ರನ ದಕ್ಷಿಣ ಧ್ರುವಕ್ಕೆ ಅಪ್ಪಳಿಸಲಾಯಿತು. ಈ ಮೂಲಕ ಚಂದ್ರನ ಮೇಲ್ಮೈಯಲ್ಲಿ ನೀರಿನ ಅಣುಗಳಿರುವುದನ್ನು ಭಾರತ ಜಗತ್ತಿಗೆ ಮೊದಲು ಸಾಬೀತುಪಡಿಸಿತು. ವಿಕ್ರಮ್ ಲ್ಯಾಂಡರ್ ಕ್ರ್ಯಾಶ್ (2019) ಭಾರತದ ಚಂದ್ರಯಾನ-2 ಮಿಷನ್ನ ಭಾಗವಾಗಿದ್ದ ವಿಕ್ರಮ್ ಲ್ಯಾಂಡರ್ 2019ರಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡುವ ಕೊನೆಯ ಕ್ಷಣದಲ್ಲಿ ತಾಂತ್ರಿಕ ಲೋಪದಿಂದಾಗಿ ಚಂದ್ರನ ಮೇಲ್ಮೈಗೆ ವೇಗವಾಗಿ ಅಪ್ಪಳಿಸಿತ್ತು (Hard Landing). ಬಾಹ್ಯಾಕಾಶ ತ್ಯಾಜ್ಯಗಳು (Space Debris) ಚಂದ್ರನಿಗೆ ಅಪ್ಪಳಿಸುವುದು ಒಂದು ಕಡೆ ಕಳವಳಕಾರಿ ವಿಚಾರವಾದರೂ, ವಿಜ್ಞಾನಿಗಳಿಗೆ ಚಂದ್ರನ ಮಣ್ಣಿನ ಪದರಗಳು ಮತ್ತು ಕುಳಿಗಳ ರಚನೆಯನ್ನು ಹತ್ತಿರದಿಂದ ಅಧ್ಯಯನ ಮಾಡಲು ಇದು ಅಪರೂಪದ ಅವಕಾಶವನ್ನು ಒದಗಿಸುತ್ತದೆ.