ಆಭರಣ ಅಂಗಡಿಯಲ್ಲಿ ದರೋಡೆಗೆ ಯತ್ನ
ದಾಬಸ್ಪೇಟೆ: ಇಲ್ಲಿನ ಪ್ರೇಮ್ ಶಿವ ಚಿನ್ನದ ಅಂಗಡಿಗೆ ಗ್ರಾಹಕರ ಸೋಗಿನಲ್ಲಿ ಬಂದಿದ್ದ ಐವರು, ಮಾಲೀಕರ ಮೇಲೆ ಗುಂಡು ಹಾರಿಸಿ ದರೋಡೆಗೆ ಯತ್ನಿಸಿದ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.ಘಟನೆಯಲ್ಲಿ ಅಂಗಡಿ ಮಾಲೀಕ ಗುನ್ನರ್ ರಾಮ್ ಅವರ ಕಾಲಿಗೆ ಗುಂಡು ತಗುಲಿದೆ. ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಅಂಗಡಿಯಲ್ಲಿ ಎರಡು ಜೀವಂತ ಗುಂಡುಗಳು ದೊರೆತಿವೆ.ಬೆಂ

ದಾಬಸ್ಪೇಟೆ: ಇಲ್ಲಿನ ಪ್ರೇಮ್ ಶಿವ ಚಿನ್ನದ ಅಂಗಡಿಗೆ ಗ್ರಾಹಕರ ಸೋಗಿನಲ್ಲಿ ಬಂದಿದ್ದ ಐವರು, ಮಾಲೀಕರ ಮೇಲೆ ಗುಂಡು ಹಾರಿಸಿ ದರೋಡೆಗೆ ಯತ್ನಿಸಿದ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.ಘಟನೆಯಲ್ಲಿ ಅಂಗಡಿ ಮಾಲೀಕ ಗುನ್ನರ್ ರಾಮ್ ಅವರ ಕಾಲಿಗೆ ಗುಂಡು ತಗುಲಿದೆ. ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಅಂಗಡಿಯಲ್ಲಿ ಎರಡು ಜೀವಂತ ಗುಂಡುಗಳು ದೊರೆತಿವೆ.ಬೆಂಗಳೂರು–ತುಮಕೂರು ರಸ್ತೆಯ ಜನನಿಬಿಡ ಪ್ರದೇಶದಲ್ಲಿ ಇರುವ ಚಿನ್ನದ ಅಂಗಡಿಯಲ್ಲಿ ಮಾಲೀಕ ಒಬ್ಬರೇ ಇರುವುದನ್ನು ಗಮನಿಸಿದ್ದ ದರೋಡೆಕೋರರು, ಗ್ರಾಹಕರಂತೆ ಬಂದು ಆಭರಣ ಕೊಡುವಂತೆ ಬೆದರಿಕೆ ಹಾಕಿದ್ದರು. ಅಂಗಡಿ ಮಾಲೀಕ ಪ್ರತಿರೋಧ ವ್ಯಕ್ತಪಡಿಸಿದರು. ಆಗ ಮಾಲೀಕರ ಮೇಲೆ ಕಾಲಿಗೆ ದುಷ್ಕರ್ಮಿಗಳು ಗುಂಡು ಹಾರಿಸಿ, ಕಾರಿನಲ್ಲಿ ಪರಾರಿ ಆಗಿದ್ದಾರೆ.ಘಟನಾ ಸ್ಥಳಕ್ಕೆ ಹೆಚ್ಚುವರಿ ಎಸ್ಪಿ, ಡಿವೈಎಸ್ಪಿ ಮತ್ತು ದಾಬಸಪೇಟೆ ಪೊಲೀಸರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.ಆಭರಣ ಅಂಗಡಿಗೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು
Read the complete story at Prajavani