114 ರಫೇಲ್ ಜೆಟ್ ಖರೀದಿಗೆ ಭಾರತ ವಿನಂತಿ – 3.25 ಲಕ್ಷ ಕೋಟಿ ಪ್ರಸ್ತಾವನೆ ಸಲ್ಲಿಸಿದ ಫ್ರಾನ್ಸ್
ನವದೆಹಲಿ: ಭಾರತೀಯ ವಾಯುಪಡೆಗೆ (IAF) 114 ರಫೇಲ್ (Rafale) ಬಹುಪಯೋಗಿ ಯುದ್ಧವಿಮಾನಗಳ ಖರೀದಿಗಾಗಿ ಫ್ರಾನ್ಸ್ ತನ್ನ ಸಮಗ್ರ ತಾಂತ್ರಿಕ ಹಾಗೂ ವಾಣಿಜ್ಯ ಪ್ರಸ್ತಾವನೆಯನ್ನ ಭಾರತ ಸರ್ಕಾರಕ್ಕೆ ಸಲ್ಲಿಸಿದೆ. ಈ ಪ್ರಸ್ತಾವನೆಯಲ್ಲಿ, ಭಾರತದಲ್ಲೇ ದೊಡ್ಡ ಪ್ರಮಾಣದಲ್ಲಿ ರಫೇಲ್ ಯುದ್ಧವಿಮಾನಗಳ ಉತ್ಪಾದನೆ ಹಾಗೂ ತಯಾರಿಕೆ ನಡೆಸುವ ಯೋಜನೆಯೂ ಸೇರಿದೆ. ಭವಿಷ್ಯದಲ್ಲಿ ಭಾರತೀಯ ವಾಯ

ನವದೆಹಲಿ: ಭಾರತೀಯ ವಾಯುಪಡೆಗೆ (IAF) 114 ರಫೇಲ್ (Rafale) ಬಹುಪಯೋಗಿ ಯುದ್ಧವಿಮಾನಗಳ ಖರೀದಿಗಾಗಿ ಫ್ರಾನ್ಸ್ ತನ್ನ ಸಮಗ್ರ ತಾಂತ್ರಿಕ ಹಾಗೂ ವಾಣಿಜ್ಯ ಪ್ರಸ್ತಾವನೆಯನ್ನ ಭಾರತ ಸರ್ಕಾರಕ್ಕೆ ಸಲ್ಲಿಸಿದೆ. ಈ ಪ್ರಸ್ತಾವನೆಯಲ್ಲಿ, ಭಾರತದಲ್ಲೇ ದೊಡ್ಡ ಪ್ರಮಾಣದಲ್ಲಿ ರಫೇಲ್ ಯುದ್ಧವಿಮಾನಗಳ ಉತ್ಪಾದನೆ ಹಾಗೂ ತಯಾರಿಕೆ ನಡೆಸುವ ಯೋಜನೆಯೂ ಸೇರಿದೆ. ಭವಿಷ್ಯದಲ್ಲಿ ಭಾರತೀಯ ವಾಯುಪಡೆಯ ಪ್ರಮುಖ ಯುದ್ಧವಿಮಾನಗಳ ಪೈಕಿ ರಫೇಲ್ ಪ್ರಮುಖ ಸ್ಥಾನವನ್ನು ಪಡೆಯುವ ನಿರೀಕ್ಷೆಯಿದೆ. ದೀರ್ಘಕಾಲದ ಜಾಗತಿಕ ಸ್ಪರ್ಧಾತ್ಮಕ ಮೌಲ್ಯಮಾಪನದ ಬಳಿಕ, 2012ರಲ್ಲಿ ರಕ್ಷಣಾ ಸಚಿವಾಲಯ ರಫೇಲ್ ಯುದ್ಧವಿಮಾನವನ್ನ ಆಯ್ಕೆ ಮಾಡಿತ್ತು. ರಕ್ಷಣಾ ಮೂಲಗಳ ಪ್ರಕಾರ, 114 ಬಹುಪಯೋಗಿ ರಫೇಲ್ ಯುದ್ಧವಿಮಾನಗಳ ಖರೀದಿಗೆ ಸಂಬಂಧಿಸಿದಂತೆ ಭಾರತ ನೀಡಿದ್ದ ಲೆಟರ್ ಆಫ್ ರಿಕ್ವೆಸ್ಟ್ಗೆ (ವಿನಂತಿ ಪತ್ರ) ಪ್ರತಿಕ್ರಿಯೆಯಾಗಿ ಫ್ರಾನ್ಸ್ ತನ್ನ ಅಧಿಕೃತ ಪ್ರಸ್ತಾವನೆ ಸಲ್ಲಿಸಿದೆ. ಪ್ರಸ್ತುತ ಈ ಪ್ರಸ್ತಾವನೆಯನ್ನು ರಕ್ಷಣಾ ಸಚಿವಾಲಯದ ಅಕ್ವಿಸಿಷನ್ ವಿಂಗ್ ಹಾಗೂ ಭಾರತೀಯ ವಾಯುಪಡೆ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಭಾರತದ ಬೇಡಿಕೆಯಂತೆ, ರಫೇಲ್ ಯುದ್ಧವಿಮಾನಗಳಲ್ಲಿ ಸ್ವದೇಶಿ ಅಸ್ತ್ರ (Astra) ಸರಣಿಯ ಗಾಳಿಯಿಂದ-ಗಾಳಿಗೆ ಕ್ಷಿಪಣಿಗಳ (Air-to-Air Missiles) ಏಕೀಕರಣ ಹಾಗೂ ಹೆಚ್ಚಿನ ಪ್ರಮಾಣದ ಸ್ವದೇಶಿ ತಂತ್ರಜ್ಞಾನ ಮತ್ತು ಘಟಕಗಳ (Indigenous Content) ಬಳಕೆಗೆ ಫ್ರಾನ್ಸ್ ನೀಡಿರುವ ಪ್ರತಿಕ್ರಿಯೆಯನ್ನ ಭಾರತೀಯ ಅಧಿಕಾರಿಗಳು ಸೂಕ್ಷ್ಮವಾಗಿ ಪರಿಶೀಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಏನಿದು ಡೀಲ್? ಈ ವರ್ಷ ಮೇ ತಿಂಗಳ ಆರಂಭದಲ್ಲಿ ಭಾರತವು ವಾಯುಪಡೆಗಳ (IAF) ಸಾಮರ್ಥ್ಯ ಹೆಚ್ಚಿಸಲು 114 ರಫೇಲ್ ಜೆಟ್ಗಳ ಖರೀದಿಸುವ ಒಪ್ಪಂದ ಸಂಬಂಧ ಮಾತುಕತೆ ನಡೆಸಲು ವಿನಂತಿ ಪತ್ರ ಕಳುಹಿಸಿತ್ತು. ಈ 114 ಜೆಟ್ಗಳ ಪೈಕಿ 94 ರಫೇಲ್ ಜೆಟ್ಗಳನ್ನು ಡಸಾಲ್ಟ್ ಏವಿಯೇಷನ್ ಮತ್ತು ಭಾರತೀಯ ಕಂಪನಿಯ ಸಹಯೋಗದಲ್ಲಿ ಭಾರತದಲ್ಲೇ ತಯಾರಿಸಲಿದೆ. ಇದು ದೇಶೀಯ ಏರೋಸ್ಪೇಸ್ ಉತ್ಪಾದನೆಗೆ ಗಮನಾರ್ಹ ಉತ್ತೇಜನ ನೀಡುತ್ತದೆ. ಭಾರತೀಯ ವಾಯುಪಡೆಯು ಈ ಹಿಂದೆ 6 ಸ್ಕ್ಯಾಡ್ರನ್ಗಳಿಗೆ ಮಿಗ್ ಯುದ್ಧವಿಮಾನಗಳ ಬದಲು ಮಧ್ಯಮ ಹಾಗೂ ಬಹುಕಾರ್ಯ ಯುದ್ಧವಿಮಾನಗಳನ್ನು (MMRA) ಸೇರ್ಪಡೆ ಮಾಡುವುದಕ್ಕೆ 25 ವರ್ಷಗಳ ಹಿಂದೆ ಪ್ರಕ್ರಿಯೆ ಆರಂಭಿಸಿತ್ತು. ರಾಜಕೀಯ ಜಟಾಪಟಿಯಿಂದಾಗಿ ಇದು ಕಾರ್ಯಗತವಾಗಿರಲಿಲ್ಲ. ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರವು ತನ್ನ 10 ವರ್ಷಗಳ ಅಧಿಕಾರಾವಧಿಯಲ್ಲಿ ವಿವಿಧ ಸಾಮರ್ಥ್ಯದ ಯುದ್ಧವಿಮಾನಗಳ ಖರೀದಿಯನ್ನು ಅಂತಿಮಗೊಳಿಸಿರಲಿಲ್ಲ. ಆದರೆ, ಜಾಗತಿಕ ಟೆಂಡರ್ ಮೂಲಕ ರಫೇಲ್ ಯುದ್ಧವಿಮಾನಗಳ ಖರೀದಿ ಪ್ರಕ್ರಿಯೆಗೆ ಚಾಲನೆ ನೀಡಿತ್ತು. 2015ರಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರವು ಎಂಎಂಆರ್ಸಿಎ ಖರೀದಿಗೆ ಕರೆದಿದ್ದ ಟೆಂಡರ್ಅನ್ನು ರದ್ದು ಮಾಡಿತ್ತು. 2016 ರಲ್ಲಿ 36 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸಿತ್ತು.