ಮುಳ್ಳಯ್ಯನಗಿರಿ ಬಳಿ ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ – ಕೂದಲೆಳೆ ಅಂತರದಲ್ಲಿ ಪ್ರವಾಸಿಗ ಬಚಾವ್
ಚಿಕ್ಕಮಗಳೂರು: ಇಲ್ಲಿನ ಮುಳ್ಳಯ್ಯನಗಿರಿ (Mullayanagiri) ಮಾರ್ಗದಲ್ಲಿ ಚಲಿಸುತ್ತಿದ್ದ ಬೈಕ್ (Bike) ಮೇಲೆ ಬೃಹತ್ ಮರ ಬಿದ್ದಿದ್ದು, ಕೂದಲೆಳೆ ಅಂತರದಲ್ಲಿ ಪ್ರವಾಸಿಗ ಪಾರಾಗಿದ್ದಾನೆ. ಚಿಕ್ಕಮಗಳೂರು (Chikkamagaluru) ತಾಲೂಕಿನ ಚನ್ನಗೋಡನಹಳ್ಳಿ ಬಳಿ ಈ ಅವಘಡ ನಡೆದಿದೆ. ಬೈಕ್ ಬರುತ್ತಿದ್ದಾಗಲೇ ಮರ ಬುಡ ಸಮೇತ ರಸ್ತೆಗೆ ಬಿದ್ದಿದೆ. ಮರದ ತುದಿ ಭಾಗ ಮಾತ್ರ ಬೈಕ್

ಚಿಕ್ಕಮಗಳೂರು: ಇಲ್ಲಿನ ಮುಳ್ಳಯ್ಯನಗಿರಿ (Mullayanagiri) ಮಾರ್ಗದಲ್ಲಿ ಚಲಿಸುತ್ತಿದ್ದ ಬೈಕ್ (Bike) ಮೇಲೆ ಬೃಹತ್ ಮರ ಬಿದ್ದಿದ್ದು, ಕೂದಲೆಳೆ ಅಂತರದಲ್ಲಿ ಪ್ರವಾಸಿಗ ಪಾರಾಗಿದ್ದಾನೆ. ಚಿಕ್ಕಮಗಳೂರು (Chikkamagaluru) ತಾಲೂಕಿನ ಚನ್ನಗೋಡನಹಳ್ಳಿ ಬಳಿ ಈ ಅವಘಡ ನಡೆದಿದೆ. ಬೈಕ್ ಬರುತ್ತಿದ್ದಾಗಲೇ ಮರ ಬುಡ ಸಮೇತ ರಸ್ತೆಗೆ ಬಿದ್ದಿದೆ. ಮರದ ತುದಿ ಭಾಗ ಮಾತ್ರ ಬೈಕ್ ಮೇಲೆ ಬಿದ್ದಿದ್ದರಿಂದ ಸವಾರ ಪಾರಾಗಿದ್ದಾನೆ. ಅಕಸ್ಮಾತ್ ಮರದ ಮಧ್ಯ ಭಾಗದಲ್ಲಿ ಬೈಕ್ ಸಿಲುಕಿದ್ದರೆ ಪ್ರಾಣಾಪಾಯ ಆಗುವ ಸಂಭವವಿತ್ತು. ಇದನ್ನೂ ಓದಿ: ಕರಾವಳಿ, ಮಲೆನಾಡಿಗೆ ಆರೆಂಜ್ ಅಲರ್ಟ್ – ಎಲ್ಲಿ ಎಷ್ಟು ಮಳೆಯಾಗಿದೆ? ಮುಳ್ಳಯ್ಯನಗಿರಿ – ದತ್ತಪೀಠ (Dattapeeta) ಭಾಗದಲ್ಲಿ ಭಾರೀ ಗಾಳಿ, (Rain) ಮಳೆಯಾಗುತ್ತಿದೆ. ಈ ಭಾಗದಲ್ಲಿ ತೇವಾಂಶ ಹೆಚ್ಚಾಗಿ ಕೆಲವೆಡೆ ಧರೆ ಕುಸಿಯುತ್ತಿದೆ. ವಾಹನ ಸವಾರರು, ಪ್ರವಾಸಿಗರು ಎಚ್ಚರಿಕೆಯಿಂದ ಈ ಮಾರ್ಗದಲ್ಲಿ ಓಡಾಡುವಂತೆ ಜಿಲ್ಲಾಡಳಿತ ಮನವಿ ಮಾಡಿದೆ. ಇದನ್ನೂ ಓದಿ: Typhoon Dolphin | ಕೇರಳಕ್ಕೆ ಆರೆಂಜ್ ಅಲರ್ಟ್ ಘೋಷಣೆ, ದಕ್ಷಿಣ ಕರ್ನಾಟಕದಲ್ಲೂ ಭಾರೀ ಮಳೆ
Read the complete story at Public TV Kannada