ಬಾಂಗ್ಲಾ ಮಾಜಿ ಕ್ರಿಕೆಟಿಗ ಶಕೀಬ್ ನಿವಾಸದ ಮೇಲೆ ಪೆಟ್ರೋಲ್ ಬಾಂಬ್ ದಾಳಿ
ಢಾಕಾ: ದೇಶಕ್ಕೆ ಹಿಂದಿರುಗುವುದಾಗಿ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಘೋಷಿಸಿದ ಬೆನ್ನಲ್ಲೇ ಅವಾಮಿ ಲೀಗ್ ನಾಯಕರ ಮೇಲೆ ದಾಳಿ ಆರಂಭವಾಗಿದೆ. ಮಾಜಿ ಕ್ರಿಕೆಟಿಗ ಮತ್ತು ಅವಾಮಿ ಲೀಗ್ ಪಕ್ಷದ ಮಾಜಿ ಸಂಸದ ಶಕೀಬ್ ಅಲ್ ಹಸನ್ ಅವರ ಮನೆ ಮೇಲೆ ಬುಧವಾರ ರಾತ್ರಿ ಪೆಟ್ರೋಲ್ ಬಾಂಬ್ ದಾಳಿ ನಡೆಸಲಾಗಿದೆ.ಭಾರತದಲ್ಲಿರುವ ಹಸೀನಾ, ಬುಧವಾರ ವರ್ಚುವಲ್ ಪತ್ರಿಕಾಗೋಷ್ಠಿ ನಡೆಸಿ
ಢಾಕಾ: ದೇಶಕ್ಕೆ ಹಿಂದಿರುಗುವುದಾಗಿ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಘೋಷಿಸಿದ ಬೆನ್ನಲ್ಲೇ ಅವಾಮಿ ಲೀಗ್ ನಾಯಕರ ಮೇಲೆ ದಾಳಿ ಆರಂಭವಾಗಿದೆ. ಮಾಜಿ ಕ್ರಿಕೆಟಿಗ ಮತ್ತು ಅವಾಮಿ ಲೀಗ್ ಪಕ್ಷದ ಮಾಜಿ ಸಂಸದ ಶಕೀಬ್ ಅಲ್ ಹಸನ್ ಅವರ ಮನೆ ಮೇಲೆ ಬುಧವಾರ ರಾತ್ರಿ ಪೆಟ್ರೋಲ್ ಬಾಂಬ್ ದಾಳಿ ನಡೆಸಲಾಗಿದೆ.ಭಾರತದಲ್ಲಿರುವ ಹಸೀನಾ, ಬುಧವಾರ ವರ್ಚುವಲ್ ಪತ್ರಿಕಾಗೋಷ್ಠಿ ನಡೆಸಿ, ಡಿಸೆಂಬರ್ನಲ್ಲಿ ದೇಶಕ್ಕೆ ಮರಳುವುದಾಗಿ ಘೋಷಿಸಿದ್ದರು. ನ್ಯಾಯ ಮತ್ತು ಪ್ರಜಾಪ್ರಭುತ್ವದ ಮರುಸ್ಥಾಪನೆಗಾಗಿ ಬರುತ್ತಿದ್ದೇನೆ. ಮರಣದಂಡನೆ ಮತ್ತು ಶಿಕ್ಷೆ ಯಾವುದಕ್ಕೂ ಜಗ್ಗುವುದಿಲ್ಲ ಎಂದು ಗುಟುರು ಹಾಕಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ಹಸೀನಾ ಕಟ್ಟಾ ಬೆಂಬಲಿಗ ಶಕೀಬ್ ಅಲ್ ಹಸನ್ ಮನೆ ಮೇಲೆ ದಾಳಿ ನಡೆದಿದೆ.ಬುಧವಾರ ರಾತ್ರಿ 8.45ರ ಸುಮಾರಿಗೆ ಮಗುರಾ ಪಟ್ಟಣದ ಕೇಶಬ್ಮೋರ್ ಪ್ರದೇಶದಲ್ಲಿರುವ ಶಕೀಬ್ ಪೂರ್ವಜರ ನಿವಾಸದ ಮೇಲೆ ಪೆಟ್ರೋಲ್ ಬಾಂಬ್ ದಾಳಿ ನಡೆದಿದೆ.'ಮನೆಗೆ ಬೆಂಕಿ ಹಚ್ಚಿರುವುದು ಅವಾಮಿ ಲೀಗ್ ಪತ್ರಿಕಾಗೋಷ್ಠಿಗೆ ತೆತ್ತ ಬೆಲೆಯಾಗಿದೆ. ಹೊಸ ಫ್ಯಾಸಿಸಂ ಬಾಂಗ್ಲಾದೇಶವನ್ನು ಆವರಿಸಿದೆ ’ಎಂದು ಅವಾಮಿ ಲೀಗ್ ಹೇಳಿಕೆಯಲ್ಲಿ ತಿಳಿಸಿದೆ.‘ಬಾಂಗ್ಲಾದೇಶದ ಪ್ರಸಿದ್ಧ ಕ್ರಿಕೆಟ್ ಐಕಾನ್ ಶಕೀಬ್ ಅಲ್ ಹಸನ್ ಅವರ ನಿವಾಸದ ಮೇಲೆ ಭೀಕರ ಪೆಟ್ರೋಲ್ ಬಾಂಬ್ ದಾಳಿ ನಡೆದಿದೆ. ಪಕ್ಷದ ಅಧ್ಯಕ್ಷೆ ಶೇಖ್ ಹಸೀನಾ ಅವರೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ಕಾಣಿಸಿಕೊಂಡ ಕೆಲವೇ ಗಂಟೆಗಳ ನಂತರ ಈ ದಾಳಿ ನಡೆದಿದೆ. ಪತ್ರಿಕಾಗೋಷ್ಠಿಯನ್ನು ಪ್ರಸಾರ ಮಾಡಿದರೆ ಮೊಕದ್ದಮೆ ಹೂಡುವುದಾಗಿ ಬಿಎನ್ಪಿ, ಇಸ್ಲಾಮಿಸ್ಟ್ ಜಮಾತ್ ಮತ್ತು ಎನ್ಸಿಪಿ ಪಕ್ಷಗಳು ರಾಷ್ಟ್ರೀಯ ಮಾಧ್ಯಮ ಸಂಸ್ಥೆಗಳಿಗೆ ಬೆದರಿಕೆ ಹಾಕಿದ್ದವು. ಈ ಯೋಜಿತ ದಾಳಿಯು ಫ್ಯಾಸಿಸಂ ಮನಸ್ಥಿತಿಯವರು ಪ್ರಜಾಪ್ರಭುತ್ವ ನಿರ್ಮಾಣ ಯೋಜನೆಯ ಹೆಸರಿನಲ್ಲಿ ಅವಾಮಿ ಲೀಗ್ ಕಾರ್ಯಕರ್ತರ ವಿರುದ್ಧ ನಡೆಸುತ್ತಿರುವ ನರಮೇಧದ ಅಭಿಯಾನಕ್ಕೆ ಮತ್ತೊಂದು ಸಾಕ್ಷಿಯಾಗಿದೆ’ ಎಂದು ಹೇಳಿಕೆಯಲ್ಲಿ ತಿಳಿಸಿದೆ. ಜೈಲಿಗಟ್ಟಲಿ, ಹತ್ಯೆ ಮಾಡಲಿ.. ಬಾಂಗ್ಲಾಕ್ಕೆ ಹಿಂದಿರುಗುವುದು ನಿಶ್ಚಿತ: ಹಸೀನಾ