2030ರ ವೇಳೆಗೆ ಭಾರತ-ರಷ್ಯಾ ನಡುವೆ 100 ಬಿಲಿಯನ್ ಡಾಲರ್ ವ್ಯಾಪಾರ ಗುರಿ: ರಾಯಭಾರಿ
ಮಾಸ್ಕೊ: '2030ರ ವೇಳೆಗೆ ಭಾರತ ಮತ್ತು ರಷ್ಯಾ ನಡುವಿನ ದ್ವಿಪಕ್ಷೀಯ ವ್ಯಾಪಾರ ವಹಿವಾಟನ್ನು 100 ಬಿಲಿಯನ್ ಅಮೆರಿಕನ್ ಡಾಲರ್ಗೆ (ಸುಮಾರು ₹10 ಲಕ್ಷ ಕೋಟಿ) ವೃದ್ಧಿಸುವ ಗುರಿ ಹೊಂದಲಾಗಿದ್ದು, ಈ ನಿಟ್ಟಿನಲ್ಲಿ ಉಭಯ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ' ಎಂದು ರಷ್ಯಾದಲ್ಲಿನ ಭಾರತದ ರಾಯಭಾರಿ ವಿನಯ್ ಕುಮಾರ್ ತಿಳಿಸಿದ್ದಾರೆ.ಈ ಕುರಿತು ಸುದ್ದಿಸಂಸ್ಥೆ ‘ಎಎನ್ಐ’ ವರ

ಮಾಸ್ಕೊ: '2030ರ ವೇಳೆಗೆ ಭಾರತ ಮತ್ತು ರಷ್ಯಾ ನಡುವಿನ ದ್ವಿಪಕ್ಷೀಯ ವ್ಯಾಪಾರ ವಹಿವಾಟನ್ನು 100 ಬಿಲಿಯನ್ ಅಮೆರಿಕನ್ ಡಾಲರ್ಗೆ (ಸುಮಾರು ₹10 ಲಕ್ಷ ಕೋಟಿ) ವೃದ್ಧಿಸುವ ಗುರಿ ಹೊಂದಲಾಗಿದ್ದು, ಈ ನಿಟ್ಟಿನಲ್ಲಿ ಉಭಯ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ' ಎಂದು ರಷ್ಯಾದಲ್ಲಿನ ಭಾರತದ ರಾಯಭಾರಿ ವಿನಯ್ ಕುಮಾರ್ ತಿಳಿಸಿದ್ದಾರೆ.ಈ ಕುರಿತು ಸುದ್ದಿಸಂಸ್ಥೆ ‘ಎಎನ್ಐ’ ವರದಿ ಮಾಡಿದೆ.'ಪ್ರಧಾನಿ ನರೇಂದ್ರ ಮೋದಿ ಹಾಗೂ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ನಿಗದಿಪಡಿಸಿರುವ ವ್ಯಾಪಾರ ಗುರಿಯನ್ನು ತಲುಪಲು ಹಾಲಿ ಇರುವ ಕ್ಷೇತ್ರಗಳ ವಹಿವಾಟು ಹೆಚ್ಚಿಸುವುದರ ಜೊತೆಗೆ ಹೊಸ ವಲಯಗಳನ್ನು ಗುರುತಿಸಲಾಗುತ್ತಿದೆ' ಎಂದು ಅವರು ತಿಳಿಸಿದ್ದಾರೆ. 'ಭಾರತ ಮತ್ತು ರಷ್ಯಾ ಕಾರ್ಯತಂತ್ರ ಪಾಲುದಾರಿಕೆಯಲ್ಲಿ ಇಂಧನವು ಪ್ರಮುಖ ಭಾಗವಾಗಿದೆ. ರಷ್ಯಾದ ಸರ್ಕಾರಿ ಅಣುಶಕ್ತಿ ಸಂಸ್ಥೆಯು (Rosatom) ಕೂಡಂಕುಳಂ ಅಣು ವಿದ್ಯುತ್ ಯೋಜನೆಯ 3 ಹಾಗೂ 4ನೇ ಘಟಕಗಳ ನಿರ್ಮಾಣ ಕಾರ್ಯದಲ್ಲಿ ಗಮನಾರ್ಹ ಪ್ರಗತಿ ಸಾಧಿಸುತ್ತಿದೆ' ಎಂದಿದ್ದಾರೆ. 'ರಷ್ಯಾದಲ್ಲಿ ಭಾರತೀಯ ನುರಿತ ಕಾರ್ಮಿಕರು ಮತ್ತು ವೃತ್ತಿಪರರ ಸಂಖ್ಯೆ ಗಮನಾರ್ಹವಾಗಿ ಏರಿಕೆಯಾಗಿದೆ. ಎರಡು–ಮೂರು ವರ್ಷಗಳ ಹಿಂದೆ 10,000ದಿಂದ 15,000ದಷ್ಟಿದ್ದ ಭಾರತೀಯ ಉದ್ಯೋಗಿಗಳ ಸಂಖ್ಯೆ ಪ್ರಸ್ತುತ 1 ಲಕ್ಷವನ್ನು ದಾಟಿದೆ' ಎಂದು ಅವರು ಉಲ್ಲೇಖಿಸಿದ್ದಾರೆ. 'ಉಭಯ ದೇಶಗಳ ನಡುವೆ ವರ್ಷಾಂತ್ಯದಲ್ಲಿ ಆರ್ಥಿಕ, ವಿಜ್ಞಾನ, ತಾಂತ್ರಿಕ ಮತ್ತು ಸಾಂಸ್ಕೃತಿಕ ಸಹಕಾರಕ್ಕೆ ಸಂಬಂಧಿಸಿದ ಮಾತುಕತೆಗಳು ನಡೆಯಲಿವೆ' ಎಂದು ತಿಳಿಸಿದ್ದಾರೆ. ಸೆಪ್ಟೆಂಬರ್ 12–13ರಂದು ದೆಹಲಿಯಲ್ಲಿ ನಡೆಯಲಿರುವ 18ನೇ ಬ್ರಿಕ್ಸ್ ಶೃಂಗಸಭೆಯ ಅಧ್ಯಕ್ಷತೆಯನ್ನು ಭಾರತ ವಹಿಸಲಿದ್ದು, ರಷ್ಯಾಗೆ ಅಧಿಕೃತ ಆಹ್ವಾನ ನೀಡಲಾಗಿದೆ.#WATCH | Moscow, Russia | On India-Russia Trade And Energy Cooperation, India’s Ambassador to Russia Vinay Kumar says, "Trade is growing. We have targets set by the Prime Minister of India and President of the Russian Federation to reach the trade of $100 billion by 2030. The… pic.twitter.com/DzaeIoei3Z— ANI (@ANI) August 5, 2026 ಗುರಿ ಬದಲಿಸುವ ಟ್ರಂಪ್, ನಿಲುವು ಸಡಿಲಿಸದ ಪುಟಿನ್: ಯುದ್ಧ ಸಾರಿ ಗೆಲ್ಲದ ನಾಯಕರುಡ್ರೋನ್ ದಾಳಿ–ಪ್ರತಿದಾಳಿ: ರಷ್ಯಾ, ಉಕ್ರೇನ್ನಲ್ಲಿ 10 ಸಾವು