ಮೆಟ್ರೋ ಪ್ರಯಾಣಿಕರೇ ಗಮನಿಸಿ – ಆ.7 ರಂದು ಹಸಿರು ಮಾರ್ಗದ ಸೇವೆಯಲ್ಲಿ ತಾತ್ಕಾಲಿಕ ಬದಲಾವಣೆ
ಬೆಂಗಳೂರು: ಮೆಟ್ರೋ ಸುರಕ್ಷತಾ ಆಯುಕ್ತರ (CMRS) ಪ್ರಾಯೋಗಿಕ ತಪಾಸಣೆಯ ಹಿನ್ನೆಲೆಯಲ್ಲಿ ನಾಳೆ (ಆಗಸ್ಟ್ 7) ರಾತ್ರಿ ಹಸಿರು ಮಾರ್ಗ (Green Line) ಮೆಟ್ರೋ ಸೇವೆಯಲ್ಲಿ ತಾತ್ಕಾಲಿಕ ಬದಲಾವಣೆ ಮಾಡಲಾಗಿದೆ. ರಾತ್ರಿ 10.30 ರಿಂದ 11 ಗಂಟೆಯವರೆಗೆ ಯಶವಂತಪುರದಿಂದ ಮಾದಾವರದವರೆಗಿನ ಮೆಟ್ರೋ ರೈಲುಗಳು ಪ್ರತಿ 10 ನಿಮಿಷಗಳ ಬದಲಿಗೆ 20 ನಿಮಿಷಗಳ ಅಂತರದಲ್ಲಿ ಸಂಚರಿಸಲಿವೆ ಎಂ

ಬೆಂಗಳೂರು: ಮೆಟ್ರೋ ಸುರಕ್ಷತಾ ಆಯುಕ್ತರ (CMRS) ಪ್ರಾಯೋಗಿಕ ತಪಾಸಣೆಯ ಹಿನ್ನೆಲೆಯಲ್ಲಿ ನಾಳೆ (ಆಗಸ್ಟ್ 7) ರಾತ್ರಿ ಹಸಿರು ಮಾರ್ಗ (Green Line) ಮೆಟ್ರೋ ಸೇವೆಯಲ್ಲಿ ತಾತ್ಕಾಲಿಕ ಬದಲಾವಣೆ ಮಾಡಲಾಗಿದೆ. ರಾತ್ರಿ 10.30 ರಿಂದ 11 ಗಂಟೆಯವರೆಗೆ ಯಶವಂತಪುರದಿಂದ ಮಾದಾವರದವರೆಗಿನ ಮೆಟ್ರೋ ರೈಲುಗಳು ಪ್ರತಿ 10 ನಿಮಿಷಗಳ ಬದಲಿಗೆ 20 ನಿಮಿಷಗಳ ಅಂತರದಲ್ಲಿ ಸಂಚರಿಸಲಿವೆ ಎಂದು ಬಿಎಂಆರ್ಸಿಎಲ್ ತಿಳಿಸಿದೆ. ಸಾಂದರ್ಭಿಕ ಚಿತ್ರ ಆದರೆ, ಮಾದಾವರದಿಂದ ರೇಷ್ಮೆ ಸಂಸ್ಥೆ (Silk Institute)ವರೆಗಿನ ಮೆಟ್ರೋ ಸೇವೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಈ ಮಾರ್ಗದಲ್ಲಿ ರೈಲುಗಳು ಎಂದಿನ ವೇಳಾಪಟ್ಟಿಯಂತೆ ಸಂಚರಿಸಲಿವೆ. ಪ್ರಯಾಣಿಕರು ತಮ್ಮ ಪ್ರಯಾಣವನ್ನು ಮುಂಚಿತವಾಗಿ ಯೋಜಿಸಿಕೊಳ್ಳುವಂತೆ ಬಿಎಂಆರ್ಸಿಎಲ್ ಮನವಿ ಮಾಡಿದೆ.
Read the complete story at Public TV Kannada