ನೆಲಮಂಗಲ ಚಿನ್ನದಂಗಡಿ ಮಾಲೀಕನ ಮೇಲೆ ಗುಂಡಿನ ದಾಳಿ – ಗ್ರಾಹಕರ ಸೋಗಿನಲ್ಲಿ ಬಂದು ದರೋಡೆಗೆ ಯತ್ನ
– `ಪಬ್ಲಿಕ್ ಟಿವಿ’ಗೆ ಗುಂಡಿನ ದಾಳಿ ವಿಡಿಯೋ ಲಭ್ಯ ನೆಲಮಂಗಲ: ಗ್ರಾಹಕರ ಸೋಗಿನಲ್ಲಿ ಬಂದು ದರೋಡೆಗೆ ಯತ್ನಿಸಿ ಚಿನ್ನದಂಗಡಿ ಮಾಲೀಕನ ಮೇಲೆ ಗುಂಡು ಹಾರಿಸಿರುವ (Firing) ಘಟನೆ ನೆಲಮಂಗಲ ತಾಲೂಕಿನ ಡಾಬಸ್ಪೇಟೆಯಲ್ಲಿರುವ (Dabbaspete) ಪ್ರೇಮ್ ಶಿವ ಜ್ಯುವೆಲರಿ ಅಂಗಡಿಯಲ್ಲಿ ನಡೆದಿದೆ. ಮಾಹಿತಿಯ ಪ್ರಕಾರ, ಬುಲೆರೋ ಕಾರಿನಲ್ಲಿ ಬಂದಿದ್ದ ಐದಾರು ಮಂದಿ ದುಷ್ಕರ್ಮಿಗಳು ಮೊ

– `ಪಬ್ಲಿಕ್ ಟಿವಿ’ಗೆ ಗುಂಡಿನ ದಾಳಿ ವಿಡಿಯೋ ಲಭ್ಯ ನೆಲಮಂಗಲ: ಗ್ರಾಹಕರ ಸೋಗಿನಲ್ಲಿ ಬಂದು ದರೋಡೆಗೆ ಯತ್ನಿಸಿ ಚಿನ್ನದಂಗಡಿ ಮಾಲೀಕನ ಮೇಲೆ ಗುಂಡು ಹಾರಿಸಿರುವ (Firing) ಘಟನೆ ನೆಲಮಂಗಲ ತಾಲೂಕಿನ ಡಾಬಸ್ಪೇಟೆಯಲ್ಲಿರುವ (Dabbaspete) ಪ್ರೇಮ್ ಶಿವ ಜ್ಯುವೆಲರಿ ಅಂಗಡಿಯಲ್ಲಿ ನಡೆದಿದೆ. ಮಾಹಿತಿಯ ಪ್ರಕಾರ, ಬುಲೆರೋ ಕಾರಿನಲ್ಲಿ ಬಂದಿದ್ದ ಐದಾರು ಮಂದಿ ದುಷ್ಕರ್ಮಿಗಳು ಮೊದಲು ಗ್ರಾಹಕರ ಸೋಗಿನಲ್ಲಿ ಅಂಗಡಿಗೆ (Jewelery Shop) ಎಂಟ್ರಿಕೊಟ್ಟಿದ್ದಾರೆ. ಚಿನ್ನಾಭರಣಗಳನ್ನ ತೋರಿಸುವಂತೆ ಮಾತುಕತೆ ನಡೆಸಿದ ಬಳಿಕ, ಅಂಗಡಿಯೊಳಗೆ ಇದ್ದ ಇಬ್ಬರು ಅಪರಿಚಿತರು ಏಕಾಏಕಿ ಗನ್ಗಳನ್ನ ಹೊರತೆಗೆದು ದಾಳಿ ನಡೆಸಿದ್ದಾರೆ. ದರೋಡೆ ಯತ್ನವನ್ನು ಅಂಗಡಿ ಮಾಲೀಕ ಪುನ್ನಾರಾಮ್ (ಕುನ್ನಾರಾಮ್) ಪ್ರತಿರೋಧಿಸಿದ ವೇಳೆ ಆರೋಪಿಗಳು ಗುಂಡು ಹಾರಿಸಿದ್ದಾರೆ. ಗುಂಡೇಟಿನಿಂದ ಗಾಯಗೊಂಡ ಅವರನ್ನ ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ಡಾಬಸ್ಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಎರಡು ಜೀವಂತ ಗುಂಡುಗಳು ಪತ್ತೆಯಾಗಿದ್ದು, ಅವುಗಳನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ. ಆರೋಪಿಗಳ ಪತ್ತೆಗೆ ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಗುಂಡಿನ ದಾಳಿ ವಿಡಿಯೋ ಲಭ್ಯ ಈ ಘಟನೆಗೆ ಸಂಬಂಧಿಸಿದಂತೆ ಗುಂಡಿನ ದಾಳಿಯ ದೃಶ್ಯಾವಳಿ ʻಪಬ್ಲಿಕ್ ಟಿವಿʼಗೆ ಲಭ್ಯವಾಗಿದ್ದು, ಕ್ಷಣಾರ್ಧದಲ್ಲಿ ನಡೆದ ಭಯಾನಕ ದಾಳಿ ಸಿಸಿಟಿವಿ ದೃಶ್ಯಗಳಲ್ಲಿ ಸೆರೆಯಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ದಾಳಿಕೋರರ ಗುರುತು ಮತ್ತು ಪರಾರಿಯಾದ ಮಾರ್ಗಗಳ ಕುರಿತು ತನಿಖೆ ಮುಂದುವರಿಸಿದ್ದಾರೆ.