ಯುಪಿಐಗೆ ಶುಲ್ಕ ತೀರ್ಮಾನ ಆಗಿಲ್ಲ: ನಿರ್ಮಲಾ
ಬೆಂಗಳೂರು: ಯುಪಿಐ ಪಾವತಿಗಳಿಗೆ ಎಂಡಿಆರ್ ಶುಲ್ಕ ವಿಧಿಸುವ ಬಗ್ಗೆ ‘ಯುಪಿಐ ಸೇವೆಗಳ ಕುರಿತ ಸಮಿತಿ’ಯು ಇನ್ನೂ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.ತೆರಿಗೆ ಮತ್ತು ಇತರ ಕಾನೂನುಗಳ (ತಿದ್ದುಪಡಿ) ಮಸೂದೆ – 2026ಕ್ಕೆ ಸಂಸತ್ತು ಒಪ್ಪಿಗೆ ಸೂಚಿಸಿದ ನಂತರ ಎಂಡಿಆರ್ ಶುಲ್ಕದ ಬಗ್ಗೆ ತೀರ್ಮಾನ ಆಗುತ್ತದೆ ಎಂದು ಅವ

ಬೆಂಗಳೂರು: ಯುಪಿಐ ಪಾವತಿಗಳಿಗೆ ಎಂಡಿಆರ್ ಶುಲ್ಕ ವಿಧಿಸುವ ಬಗ್ಗೆ ‘ಯುಪಿಐ ಸೇವೆಗಳ ಕುರಿತ ಸಮಿತಿ’ಯು ಇನ್ನೂ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.ತೆರಿಗೆ ಮತ್ತು ಇತರ ಕಾನೂನುಗಳ (ತಿದ್ದುಪಡಿ) ಮಸೂದೆ – 2026ಕ್ಕೆ ಸಂಸತ್ತು ಒಪ್ಪಿಗೆ ಸೂಚಿಸಿದ ನಂತರ ಎಂಡಿಆರ್ ಶುಲ್ಕದ ಬಗ್ಗೆ ತೀರ್ಮಾನ ಆಗುತ್ತದೆ ಎಂದು ಅವರು ಕಾಂಗ್ರೆಸ್ ಮುಖಂಡ ಜೈರಾಂ ರಮೇಶ್ ಅವರ ಎಕ್ಸ್ ಬರಹಕ್ಕೆ ಪ್ರತಿಕ್ರಿಯೆಯ ರೂಪದಲ್ಲಿ ಹೇಳಿದ್ದಾರೆ.ಎಂಡಿಆರ್ (ಮರ್ಚಂಟ್ ಡಿಸ್ಕೌಂಟ್ ರೇಟ್) ಅನ್ವಯ ಆಗುವುದು ವರ್ತಕರಿಗೆ ಮಾತ್ರ. ಅದು ಗ್ರಾಹಕರಿಗೆ ಅನ್ವಯಿಸುವುದಿಲ್ಲ. ಈ ಶುಲ್ಕವು ಬ್ಯಾಂಕುಗಳು ಹಾಗೂ ಫಿನ್ಟೆಕ್ (ಹಣಕಾಸು ತಂತ್ರಜ್ಞಾನ) ವಲಯದ ಕಂಪನಿಗಳಿಗೆ ಮೂಲಸೌಕರ್ಯ, ಸಂಶೋಧನೆ ಮತ್ತು ಸುರಕ್ಷತೆಯ ಮೇಲೆ ಹೆಚ್ಚು ಹೂಡಿಕೆ ಮಾಡಲು ನೆರವು ನೀಡುತ್ತದೆ. ಇದರ ಪ್ರಯೋಜನವನ್ನು ಯುಪಿಐ ಬಳಸುವ ಎಲ್ಲರೂ ಪಡೆಯಬಹುದು ಎಂದು ನಿರ್ಮಲಾ ಹೇಳಿದ್ದಾರೆ.ಯುಪಿಐ ಪಾವತಿಗಳಿಗೆ ಶುಲ್ಕ ವಿಧಿಸಲು ಅವಕಾಶ ಕಲ್ಪಿಸುವ ಮಸೂದೆಗೆ ಲೋಕಸಭೆಯು ಗುರುವಾರ ಒಪ್ಪಿಗೆ ನೀಡಿದೆ.
Read the complete story at Prajavani