ಈ ದಿನದ ಪ್ರಮುಖ 10 ಸುದ್ದಿಗಳು: ಗುರುವಾರ, 6 ಆಗಸ್ಟ್ 2026
ರಾಜ್ಯ, ರಾಷ್ಟ್ರೀಯ, ವಿದೇಶ ಸೇರಿದಂತೆ ಪ್ರಮುಖ ಸುದ್ದಿಗಳು ಇಲ್ಲಿವೆ....ಅಸಮಾಧಾನಿತರ ಮನೆಗೆ ಡಿಕೆಶಿ, ಸುರ್ಜೇವಾಲಾ, ಹರಿಪ್ರಸಾದ್ ದೌಡು: ಬೇಗುದಿ ಶಮನಶಾಸಕ ಕೃಷ್ಣಪ್ಪ ಅವರ ನಿವಾಸಕ್ಕೆ ಬುಧವಾರ ರಾತ್ರಿ ಭೇಟಿ ನೀಡಿ ಸಿಎಂ ಡಿ ಕೆ ಶಿವಕುಮಾರ್, ರಣದೀಪ್ ಸಿಂಗ್ ಸುರ್ಜೇವಾಲಾ ಸಮಾಲೋಚನೆ ನಡೆಸಿದರು. ಪ್ರದೀಪ್ ಕೃಷ್ಣ, ಶಾಸಕ ಪ್ರಿಯಕೃಷ್ಣ ಉಪಸ್ಥಿತರಿದ್ದರು ಬೆಂಗಳೂರು:

ರಾಜ್ಯ, ರಾಷ್ಟ್ರೀಯ, ವಿದೇಶ ಸೇರಿದಂತೆ ಪ್ರಮುಖ ಸುದ್ದಿಗಳು ಇಲ್ಲಿವೆ....ಅಸಮಾಧಾನಿತರ ಮನೆಗೆ ಡಿಕೆಶಿ, ಸುರ್ಜೇವಾಲಾ, ಹರಿಪ್ರಸಾದ್ ದೌಡು: ಬೇಗುದಿ ಶಮನಶಾಸಕ ಕೃಷ್ಣಪ್ಪ ಅವರ ನಿವಾಸಕ್ಕೆ ಬುಧವಾರ ರಾತ್ರಿ ಭೇಟಿ ನೀಡಿ ಸಿಎಂ ಡಿ ಕೆ ಶಿವಕುಮಾರ್, ರಣದೀಪ್ ಸಿಂಗ್ ಸುರ್ಜೇವಾಲಾ ಸಮಾಲೋಚನೆ ನಡೆಸಿದರು. ಪ್ರದೀಪ್ ಕೃಷ್ಣ, ಶಾಸಕ ಪ್ರಿಯಕೃಷ್ಣ ಉಪಸ್ಥಿತರಿದ್ದರು ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ತಮಗೆ ಮಂತ್ರಿಗಿರಿ ಸಿಕ್ಕಿಲ್ಲವೆಂದು ಬಂಡಾಯದ ಬಾವುಟ ಹಾರಿಸಿದ್ದ ಶಾಸಕರ ಮನವೊಲಿಸಲು ಸತತ ಯತ್ನ ಹಾಕಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಬೇಗುದಿ ಶಮನಗೊಳಿಸುವಲ್ಲಿ ಬಹುತೇಕ ಯಶಸ್ವಿಯಾಗಿದ್ದಾರೆ.ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್ಕಿಸಿನೀಟ್ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ: ಕನ್ನಡ ಭಾಷಾ ಪರೀಕ್ಷೆ ಆ.9ಕ್ಕೆ ಮುಂದೂಡಿಕೆಸಾಂದರ್ಭಿಕ ಚಿತ್ರ: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (UG-NEET) 2026 ಕೌನ್ಸೆಲಿಂಗ್ಗೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ತಾಂತ್ರಿಕ ಸಮಸ್ಯೆ ಎದುರಿಸುತ್ತಿರುವುದರಿಂದ, ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ನೀಟ್ ರೋಲ್ ನಂಬರ್ ಲಿಂಕ್ ಮಾಡಲು ಮತ್ತು ಅರ್ಜಿ ಸಲ್ಲಿಸಲು ನೀಡಿದ್ದ ಗಡುವು ವಿಸ್ತರಿಸಿದೆ.ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್ಕಿಸಿಎಸ್ಐಆರ್: ಹೊರಗುಳಿದವರ ಪಟ್ಟಿ ಲಭ್ಯಬೆಂಗಳೂರು: ಎಎಸ್ಡಿಡಿಒ (ಪತ್ತೆಯಾಗದವರು, ಸ್ಥಳಾಂತರ, ಮೃತ, ಹೆಚ್ಚು ಸ್ಥಳಗಳಲ್ಲಿ ನೋಂದಣಿ, ಇತರೆ) ಎಂದು ವರ್ಗೀಕರಿಸಲಾದ 1.11 ಕೋಟಿ ಮತದಾರರ ವಿವರಗಳನ್ನು ಚುನಾವಣಾ ಆಯೋಗ ಬಿಡುಗಡೆ ಮಾಡಿದೆ.ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್ಕಿಸಿIAS Transfer: ನಾಲ್ವರು ಐಎಎಸ್ ಅಧಿಕಾರಿಗಳ ವರ್ಗ, ಜಾಫರ್ ಬೆಂಗಳೂರು ಮೆಟ್ರೊ ಎಂಡಿಬೆಂಗಳೂರು: ಕರ್ನಾಟಕ ಸರ್ಕಾರವು ನಾಲ್ವರು ಐಎಎಸ್ ಅಧಿಕಾರಿಗಳನ್ನು ವರ್ಗ ಮಾಡಿ ಆದೇಶ ಹೊರಡಿಸಿದೆ.ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್ಕಿಸಿವೈಫಲ್ಯ ಉಂಟಾಗಿದೆ: ತಪ್ಪೊಪ್ಪಿಕೊಂಡ ಮೆಟಾ ಕಂಪನಿಮೆಟಾನವದೆಹಲಿ (ಪಿಟಿಐ): ‘ಮಕ್ಕಳ ಮೇಲಿನ ಲೈಂಗಿಕ ಶೋಷಣೆಗೆ ಸಂಬಂಧಿಸಿದ ಕಂಟೆಂಟ್ಗಳು ಹಾಗೂ ಡೀಪ್ಫೇಕ್ ವಿಚಾರದಲ್ಲಿ ವೈಫಲ್ಯ ಉಂಟಾಗಿದೆ ಮತ್ತು ನಿರ್ದಿಷ್ಟ ಬಗೆಯ ಕಂಟೆಂಟ್ಗಳ ಪ್ರಚಾರಕ್ಕಾಗಿ ದೊಡ್ಡ ಮೊತ್ತದ ಹಣ ಪಾವತಿಯಾಗಿದೆ’ ಎಂದು ಫೇಸ್ಬುಕ್, ಇನ್ಸ್ಟಾಗ್ರಾಮ್, ವಾಟ್ಸ್ಆ್ಯಪ್ಜಾಲತಾಣಗಳ ಮಾಲೀಕತ್ವ ಹೊಂದಿರುವ ಮೆಟಾ ಕಂಪನಿ ಕೇಂದ್ರ ಸರ್ಕಾರದ ಮುಂದೆ ತಪ್ಪೊಪ್ಪಿಕೊಂಡಿದೆ.ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್ಕಿಸಿಪರಿಶಿಷ್ಟರ ವಿದ್ಯಾರ್ಥಿ ವೇತನ: ಕೇಂದ್ರದ ಪಾಲು ಕಡಿತನವದೆಹಲಿ: ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ನೀಡುವ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನದಲ್ಲಿ ಕೇಂದ್ರ ಸರ್ಕಾರದ ಪಾಲು ಗಣನೀಯವಾಗಿ ಕಡಿಮೆ ಆಗಿದೆ.ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್ಕಿಸಿಕ್ಷೇತ್ರ ಮರುವಿಂಗಡಣೆ: ಮಹಿಳಾ ಮೀಸಲಾತಿ ಈ ಬಾರಿಯೇ ಮಂಡನೆ?ಮಹಿಳಾ ಮೀಸಲಾತಿನವದೆಹಲಿ: ಕ್ಷೇತ್ರ ಮರುವಿಂಗಡಣೆಯ ಸಾಂವಿಧಾನಿಕ ತಿದ್ದುಪಡಿಯ ಮಸೂದೆ ಹಾಗೂ ಮಹಿಳಾ ಮೀಸಲಾತಿ ಮಸೂದೆಯನ್ನು ಮಳೆಗಾಲದ ಸಂಸತ್ ಅಧಿವೇಶನದಲ್ಲೇ ಮಂಡಿಸಲು ಕೇಂದ್ರ ಸರ್ಕಾರ ತಯಾರಿ ನಡೆಸಿದೆ.ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್ಕಿಸಿಸಂಪಾದಕೀಯ | ಹಾಕಿ ಅಂಗಳದಲ್ಲಿ ವಿವಾದದ ಬಣ್ಣ: ಶಂಕೆಗೆ ಕಾರಣವಾದ ಬದಲಾವಣೆ_ಬೆಲ್ಜಿಯಂ ಮತ್ತು ನೆದರ್ಲೆಂಡ್ಸ್ನಲ್ಲಿ ನಡೆಯಲಿರುವ ವಿಶ್ವಕಪ್ ಹಾಕಿ ಟೂರ್ನಿಯಲ್ಲಿ ಆಡಲಿರುವ ಭಾರತ ತಂಡದ ಜೆರ್ಸಿಯ ಬಣ್ಣವನ್ನು ನೀಲಿಯಿಂದ ಕೇಸರಿ ಬಣ್ಣಕ್ಕೆ ‘ಹಾಕಿ ಇಂಡಿಯಾ’ (ಎಚ್ಐ) ಬದಲಿಸಿದೆ. ಕೇಸರಿ ಬಣ್ಣವು ಆಡಳಿತದಲ್ಲಿರುವ ಪಕ್ಷದ ರಾಜಕೀಯ ಸಂಕೇತ ಎನ್ನುವುದನ್ನು ಹೊರತುಪಡಿಸಿದರೆ, ಬಣ್ಣ ಬದಲಾವಣೆಗೆ ಯಾವುದೇ ಸಮಂಜಸ ಕಾರಣ ಕಾಣಿಸುತ್ತಿಲ್ಲ.ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್ಕಿಸಿವಿಶ್ಲೇಷಣೆ | ಭರವಸೆಯ ಗೆಲುವು: ಮುಂದೇನು?_ಜಂತರ್ ಮಂತರ್ ಪ್ರತಿಭಟನೆ ತಂದಿತ್ತ ಗೆಲುವಿನ ನಂತರದ ಹರ್ಷೋತ್ಕರ್ಷ ಅಸಂಖ್ಯ ಭಾರತೀಯರಲ್ಲಿ ಭರವಸೆ ಮೂಡಿಸಿದೆ. ಅದರ ನಡುವೆಯೇ, ಪ್ರತಿಭಟನೆಯಲ್ಲಿ ಏನೆಲ್ಲ ಕೊರತೆಗಳಿದ್ದವು ಹಾಗೂ ಅದರಿಂದ ಮುಂದೇನು ಆಗಲಿದೆ ಎನ್ನುವುದನ್ನು ಯೋಚಿಸಬೇಕಿದೆ.ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್ಕಿಸಿಹಾಕಿ ವಿಶ್ವಕಪ್ ಅಂಗಳದಲ್ಲಿ ಕನ್ನಡಿಗ ಮೋಹಿತ್ ಗೋಲ್ಕೀಪರ್ಬೆಂಗಳೂರು: ಬಾಲ್ಯದಿಂದಲೂ ಕ್ರಿಕೆಟ್ ಆಡುವ ಕನಸು ಕಾಣುತ್ತಿದ್ದ ಎಚ್.ಎಸ್. ಮೋಹಿತ್, ಹಾಕಿ ಗೋಲ್ಕೀಪರ್ ಆಗಿ ರೂಪುಗೊಂಡಿದ್ದು ಆಕಸ್ಮಿಕ. ಆದರೆ ಅವರೀಗ ಬೆಲ್ಜಿಯಂ–ನೆದರ್ಲೆಂಡ್ಸ್ ಆತಿಥ್ಯದಲ್ಲಿ ನಡೆಯಲಿರುವ ವಿಶ್ವಕಪ್ ಹಾಕಿ ಟೂರ್ನಿಯಲ್ಲಿ ಭಾರತ ತಂಡದ ಗೋಲ್ಕೀಪರ್ ಆಗಿ ಆಡಲಿದ್ದಾರೆ. ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್ಕಿಸಿ