ಬೈಕ್ ಸವಾರನ ಮೇಲೆ ದರ್ಪ ಆರೋಪ – ಮಾಲೂರು ಜೆಎಂಎಫ್ಸಿ ನ್ಯಾಯಾಧೀಶೆ ವರ್ಗಾವಣೆ
ಬೆಂಗಳೂರು: ಕೋಲಾರ (Kolar) ಜಿಲ್ಲೆಯ ಮಾಲೂರು ಜಿಎಂಎಫ್ಸಿ ನ್ಯಾಯಾದೀಶೆ ಗಾಯತ್ರಿ (Judge Gayatri ಅವರನ್ನು ಬೀದರ್ ಹುಮನಾಬಾದ್ನ ಜಿಎಂಎಫ್ಸಿ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಿ ಆದೇಶ ನೀಡಲಾಗಿದೆ. ಹೈಕೋರ್ಟ್ ರಿಜಿಸ್ಟರ್ ಚಂದ್ರಶೇಖರ ರೆಡ್ಡಿ ಅವರು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ. ಮಾಲೂರು ಜೆಎಂಎಫ್ಸಿ ನ್ಯಾಯಾಧೀಶೆ ಗಾಯತ್ರಿ ಅವರು ತನ್ನ ಇನ್ನೋವಾ ಕಾರಿನಲ

ಬೆಂಗಳೂರು: ಕೋಲಾರ (Kolar) ಜಿಲ್ಲೆಯ ಮಾಲೂರು ಜಿಎಂಎಫ್ಸಿ ನ್ಯಾಯಾದೀಶೆ ಗಾಯತ್ರಿ (Judge Gayatri ಅವರನ್ನು ಬೀದರ್ ಹುಮನಾಬಾದ್ನ ಜಿಎಂಎಫ್ಸಿ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಿ ಆದೇಶ ನೀಡಲಾಗಿದೆ. ಹೈಕೋರ್ಟ್ ರಿಜಿಸ್ಟರ್ ಚಂದ್ರಶೇಖರ ರೆಡ್ಡಿ ಅವರು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ. ಮಾಲೂರು ಜೆಎಂಎಫ್ಸಿ ನ್ಯಾಯಾಧೀಶೆ ಗಾಯತ್ರಿ ಅವರು ತನ್ನ ಇನ್ನೋವಾ ಕಾರಿನಲ್ಲಿ ಹೋಗುವಾಗ, ಬೈಕ್ ಸವಾರ ವಿನಯ್ ಎಂಬಾತ ಅತಿವೇಗವಾಗಿ ಬಂದು ಕಾರನ್ನು ಓವರ್ಟೇಕ್ ಮಾಡಿ, ಕೈ ತೋರಿಸಿ ಹೋಗಿದ್ದ ಅನ್ನೋ ಆರೋಪ ಕೇಳಿಬಂದಿತ್ತು. ಅಷ್ಟಕ್ಕೆ ಕೋಪಗೊಂಡ ನ್ಯಾಯಾಧೀಶರು, ಬೈಕನ್ನು ಬೆನ್ನತ್ತಿ ಸವಾರ ವಿನಯ್ ಮೇಲೆ ದರ್ಪ ತೋರಿಸಿ ರಂಪಾಟ ನಡೆಸಿದ್ದ ವಿಡಿಯೋ ವೈರಲ್ ಆಗಿತ್ತು. ಇದನ್ನೂ ಓದಿ: ನ್ಯಾಯಾಧೀಶೆ ಕಾರು ತಡೆದು ಗಲಾಟೆ – ಮೂವರು ಅರೆಸ್ಟ್ ನಂತರ ಬೈಕ್ ಸವಾರನ ಮೇಲೆ ನ್ಯಾಯಾಧೀಶೆ ಗಾಯತ್ರಿ ಅವರು ಎಫ್ಐಆರ್ ಕೂಡ ದಾಖಲು ಮಾಡಿದ್ದರು. ಈ ಎಫ್ಐಅರ್ ರದ್ದು ಮಾಡುವಂತೆ ಬೈಕ್ ಸವಾರ ವಿನಯ್ ಹೈಕೋರ್ಟ್ ಮೊರೆ ಹೋಗಿದ್ದ. ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾ. ನಾಗಪ್ರಸನ್ನ ಪೀಠ ಅಸಮಾಧಾನ ವ್ಯಕ್ತಪಡಿಸಿ, ನ್ಯಾಯಾಧೀಶೆ ಗಾಯತ್ರಿ ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ರಿಜಿಸ್ಟರ್ಗೆ ಸೂಚಿಸಿದ್ದರು. ಪರಿಶೀಲನೆ ನಡೆಸಿದ ರಿಜಿಸ್ಟರ್ ಚಂದ್ರಶೇಖರ ರೆಡ್ಡಿ ಅವರು ನ್ಯಾಯಾಧೀಶೆ ಗಾಯತ್ರಿ ಅವರನ್ನು ಬೀದರ್ಗೆ ವರ್ಗಾವಣೆ ಮಾಡಿದ್ದಾರೆ. ಇದನ್ನೂ ಓದಿ: ನೀತಿ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ಬಿ.ಆರ್.ಪಾಟೀಲ್ ರಾಜೀನಾಮೆ