ದೆಹಲಿ ಟು ಜಪಾನ್ ಪ್ರವಾಸ ಆಯೋಜಿಸಿದ IRCTC: ಟಿಕೆಟ್ ದರ ಸೇರಿ ಪ್ರಮುಖ ಮಾಹಿತಿ
ಭಾರತೀಯ ರೈಲ್ವೆ ಕೇಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮವು (IRCTC) ದೆಹಲಿಯಿಂದ ಜಪಾನ್ಗೆ ವಿಶೇಷ ವಿಮಾನ ಪ್ರವಾಸ ಪ್ಯಾಕೇಜ್ ಒಂದನ್ನು ಘೋಷಿಸಿದೆ.ಸೆಪ್ಟೆಂಬರ್ 6ರಂದು ದೆಹಲಿಯ ವಿಮಾನ ನಿಲ್ದಾಣದಿಂದ ಆರಂಭವಾಗುವ ಈ ಪ್ರವಾಸವು ಸೆಪ್ಟೆಂಬರ್ 15ರಂದು ದೆಹಲಿಗೆ ವಾಪಾಸ್ ಬಂದಿಳಿಯುವ ಮೂಲಕ ಮುಕ್ತಾಯಗೊಳ್ಳಲಿದೆ. 10 ಹಗಲು, 9 ರಾತ್ರಿಗಳನ್ನು ಈ ಪ್ಯಾಕೇಜ್ ಒಳಗೊಂಡಿದೆ. ಪ್ರ
ಭಾರತೀಯ ರೈಲ್ವೆ ಕೇಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮವು (IRCTC) ದೆಹಲಿಯಿಂದ ಜಪಾನ್ಗೆ ವಿಶೇಷ ವಿಮಾನ ಪ್ರವಾಸ ಪ್ಯಾಕೇಜ್ ಒಂದನ್ನು ಘೋಷಿಸಿದೆ.ಸೆಪ್ಟೆಂಬರ್ 6ರಂದು ದೆಹಲಿಯ ವಿಮಾನ ನಿಲ್ದಾಣದಿಂದ ಆರಂಭವಾಗುವ ಈ ಪ್ರವಾಸವು ಸೆಪ್ಟೆಂಬರ್ 15ರಂದು ದೆಹಲಿಗೆ ವಾಪಾಸ್ ಬಂದಿಳಿಯುವ ಮೂಲಕ ಮುಕ್ತಾಯಗೊಳ್ಳಲಿದೆ. 10 ಹಗಲು, 9 ರಾತ್ರಿಗಳನ್ನು ಈ ಪ್ಯಾಕೇಜ್ ಒಳಗೊಂಡಿದೆ. ಪ್ರತೀ ವ್ಯಕ್ತಿಗೆ ₹3,46 ಲಕ್ಷದಿಂದ ಈ ಪ್ಯಾಕೇಜ್ ಆರಂಭವಾಗುತ್ತದೆ.ಪ್ರವಾಸ ಕಥನ: ಲೂಬ್ ಲಿಯಾನದ ನಿಧಾನ.. ನಾದವಾರಾಂತ್ಯದ ಪ್ರವಾಸ ಹೋಗಬೇಕಾ? ಬೆಂಗಳೂರಿನ ಸಮೀಪದ ಈ ಸ್ಥಳಗಳು ಸೂಕ್ತ...ಇಸ್ರೇಲ್ ಪ್ರವಾಸ ಕಥನ: ಅಲ್ಲಿ ಅಲ್ಲಾ ಇದ್ದಾನೆ, ಯೇಸು ಇದ್ದಾನೆ. . .ಸಂಗತ | ಪರಿಸರ ಪ್ರವಾಸ: ಮೈಮರೆವಿನಿಂದ ತ್ರಾಸ! ಈ ಪ್ರವಾಸದ ಸಂದರ್ಭದಲ್ಲಿ, ಜಪಾನ್ನ ಪ್ರಮುಖ ನಗರಗಳಾದ ಟೋಕಿಯೊ, ಹಕೋನೆ, ಹಮಾಮಟ್ಸು, ಕ್ಯೋಟೋ, ಒಸಾಕಾ, ನಾರಾ ಮತ್ತು ಹಿರೋಷಿಮಾಗೆ ಭೇಟಿ ನೀಡಲಾಗುತ್ತದೆ. ಜೊತೆಗೆ ಬುಲೆಟ್ ರೈಲಿನಲ್ಲೂ ಪ್ರಯಾಣ ಮಾಡಬಹುದು. ಮೂವರು ಶೇರಿಂಗ್ನ (ಸಿಂಗಲ್ ಆಕ್ಯುಪೆನ್ಸಿ) ಪ್ಯಾಕೆಜ್ ಪ್ರತೀ ವ್ಯಕ್ತಿಗೆ ₹3,45,999 ಒಳಗೊಂಡಿದ್ದರೆ, ಎರಡು ಶೇರಿಂಗ್ ಪ್ರವಾಸವು ತಲಾ ₹3,49,999 ಒಳಗೊಂಡರೆ, ಒಬ್ಬ ವ್ಯಕ್ತಿಯ ಪ್ಯಾಕೆಜ್ ದರವು 4,73,999 ಆಗಿದೆ. 5 ರಿಂದ 11 ವರ್ಷ ಮಕ್ಕಳ ಹಾಸಿಗೆ ಸಹಿತ ಪ್ರವಾಸದ ದರ, ₹2,92,499 ಆದರೆ, ಇದೇ ವಯಸ್ಸಿನ ಮಕ್ಕಳ ಹಾಸಿಗೆ ರಹಿತ ಪ್ಯಾಕೇಜ್ ₹2,63,999 ಆಗಿದೆ. ಪ್ಯಾಕೇಜ್ನಲ್ಲಿ ಏನೆಲ್ಲಾ ಇದೆ? ಐಆರ್ಸಿಟಿಸಿ ಪ್ರಕಾರ, ಪ್ಯಾಕೇಜ್ನಲ್ಲಿ ಪ್ರವಾಸ ಮುಗಿಸಿ ಮರಳಲು ಎಕಾನಮಿ-ಕ್ಲಾಸ್ನ ವಿಮಾನ ಟಿಕೆಟ್ ಸೇರಿದಂತೆ, ಪಂಚತಾರಾ ಹೋಟೆಲ್ಗಳಲ್ಲಿ ವಸತಿ ಸೌಲಭ್ಯ, ಜಪಾನ್ ಪ್ರವಾಸಿ ವೀಸಾ ಶುಲ್ಕ, ದೈನಂದಿನ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟ, ವಿಮಾನ ನಿಲ್ದಾಣದ ವರ್ಗಾವಣೆಯ ಖರ್ಚು, 70 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪ್ರಯಾಣಿಕರಿಗೆ ಪ್ರಯಾಣ ವಿಮೆ ಹಾಗೂ ಇಂಗ್ಲಿಷ್ ಮಾತನಾಡುವ ಪ್ರವಾಸ ಮಾರ್ಗದರ್ಶಕರನ್ನು ಒಳಗೊಂಡಿದೆ. ಸೆಪ್ಟೆಂಬರ್ 6ರಂದು ಸಂಜೆ 6 ಗಂಟೆಗೆ ದೆಹಲಿಯಿಂದ ವಿಮಾನದಲ್ಲಿ ಹೊರಟು ಮರುದಿನ ಬೆಳಿಗ್ಗೆ 5:55ಕ್ಕೆ ಟೋಕಿಯೊದ ಹನೆಡಾ ವಿಮಾನ ನಿಲ್ದಾಣವನ್ನು ತಲುಪಲಿದೆ. ಪ್ರವಾಸ ಮುಗಿಸಿಕೊಂಡು ಸೆಪ್ಟೆಂಬರ್ 15ರಂದು ಬೆಳಿಗ್ಗೆ 11:10ಕ್ಕೆ ಹನೆಡಾದಿಂದ ಹೊರಟು ಸಂಜೆ 4:30ಕ್ಕೆ ದೆಹಲಿಯನ್ನು ತಲುಪಲಿದೆ. ಆದಾಗ್ಯೂ ಹವಾಮಾನ ವೈಪರೀತ್ಯದಿಂದ ವಿಮಾನ ವ್ಯತ್ಯಯವಾಗಬಹುದು ಎಂದು ಐಆರ್ಸಿಟಿಸಿ ಹೇಳಿದೆ. ಪ್ರಮುಖ ಸ್ಥಳಗಳುಟೊಕಿಯೊದ ಪ್ರಮುಖ ದೇವಾಲಯ ಅಸಕುಸಾ ದೇವಸ್ಥಾನ, ನಕಮಿಸೆ ಡೋರಿ, ಉಯೆನೊ ಪಾರ್ಕ್, ಒಡೈಬಾ ಮತ್ತು ಟೀಮ್ಲ್ಯಾಬ್ ಪ್ಲಾನೆಟ್ಗಳಿಗೆ ಭೇಟಿ ನೀಡಬಹುದು. ಜತೆಗೆ ಟೊಯೋಟಾ ವಸ್ತುಸಂಗ್ರಹಾಲಯ, ರೈಲ್ವೆ ವಸ್ತುಸಂಗ್ರಹಾಲಯ, ಅರಶಿಯಾಮದ ಬಿದಿರು ಅರಣ್ಯ, ಕ್ಯೋಟೋದಲ್ಲಿರುವ ಕಿಂಕಾಕು-ಜಿ ದೇವಾಲಯ ಮತ್ತು ಫುಶಿಮಿ ಇನಾರಿ ತೈಶಾ, ಒಸಾಕಾ ಕೋಟೆ, ನಾರಾ ಜಿಂಕೆ ಉದ್ಯಾನ, ಟೊಡೈ-ಜಿ ದೇವಾಲಯ, ಹಿರೋಷಿಮಾ ಶಾಂತಿ ಸ್ಮಾರಕ ಉದ್ಯಾನ, ಮಿಯಾಜಿಮಾ ದ್ವೀಪ ಮತ್ತು ಇಟ್ಸುಕುಶಿಮಾ ದೇವಾಲಯ ಸೇರಿದೆ.ಬುಕ್ಕಿಂಗ್ ಷರತ್ತುಅರ್ಜಿದಾರರು ಹಿಂದಿರುಗಿದ ದಿನಾಂಕದಿಂದ ಕನಿಷ್ಠ ಆರು ತಿಂಗಳವರೆಗೆ ಮಾನ್ಯವಾಗಿರುವ ಪಾಸ್ಪೋರ್ಟ್ ಹೊಂದಿರಬೇಕು. ಬುಕಿಂಗ್ಗಾಗಿ ಪಾನ್ ಕಾರ್ಡ್ ಸೇರಿದಂತೆ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು. ಪ್ರಯಾಣಿಕರು ಹಣಕಾಸು ಮತ್ತು ಉದ್ಯೋಗ ಸಂಬಂಧಿತ ದಾಖಲೆಗಳನ್ನು ಒದಗಿಸುವ ಮೂಲಕ ಜಪಾನ್ನ ವೀಸಾ ನಿಯಗಳನ್ನು ಪೂರೈಸಬೇಕಾಗುತ್ತದೆ.ಈಗಾಗಲೇ ಬುಕ್ಕಿಂಗ್ ಆರಂಭವಾಗಿದ್ದು, ಟಿಕೆಟ್ ಬುಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ..