ಕಂಠಪೂರ್ತಿ ಕುಡಿದು ಏರ್ಗನ್ನಿಂದ 45 ನಿಮಿಷ ಮನಸೋಇಚ್ಛೆ ಫೈರ್ ಮಾಡಿದ ಟೆಕ್ಕಿ!
ಆನೇಕಲ್: ಕಂಠಪೂರ್ತಿ ಕುಡಿದ ಟೆಕ್ಕಿಯೊಬ್ಬ (Techie) ಸೆಕ್ಯುರಿಟಿ ಗಾರ್ಡ್ಗಳ ಮೇಲೆ ಏರ್ಗನ್ನಿಂದ ಫೈರ್ ಮಾಡಿದ ಘಟನೆ ಆನೇಕಲ್ (Anekal) ತಾಲೂಕಿನ ಬಂಡಾಪುರ ಬಳಿಯ ಸಿಪಾನಿ ಅಪಾರ್ಟ್ಮೆಂಟ್ನಲ್ಲಿ ನಡೆದಿದೆ. ಲಕ್ನೋ ಮೂಲದ ಅನುರಾಗ್ ತಿವಾರಿ (40) ಎಂಬಾತ ಕುಡಿದ ಮತ್ತಿನಲ್ಲಿ ಬಾಲ್ಕನಿಯಿಂದ ಫೈರ್ ಮಾಡಿದ್ದಾನೆ. ಈತ ವೈಟ್ಫೀಲ್ಡ್ನ ಖಾಸಗಿ ಕಂಪನಿಯಲ್ಲಿ ಐಟಿ ಉದ್ಯ

ಆನೇಕಲ್: ಕಂಠಪೂರ್ತಿ ಕುಡಿದ ಟೆಕ್ಕಿಯೊಬ್ಬ (Techie) ಸೆಕ್ಯುರಿಟಿ ಗಾರ್ಡ್ಗಳ ಮೇಲೆ ಏರ್ಗನ್ನಿಂದ ಫೈರ್ ಮಾಡಿದ ಘಟನೆ ಆನೇಕಲ್ (Anekal) ತಾಲೂಕಿನ ಬಂಡಾಪುರ ಬಳಿಯ ಸಿಪಾನಿ ಅಪಾರ್ಟ್ಮೆಂಟ್ನಲ್ಲಿ ನಡೆದಿದೆ. ಲಕ್ನೋ ಮೂಲದ ಅನುರಾಗ್ ತಿವಾರಿ (40) ಎಂಬಾತ ಕುಡಿದ ಮತ್ತಿನಲ್ಲಿ ಬಾಲ್ಕನಿಯಿಂದ ಫೈರ್ ಮಾಡಿದ್ದಾನೆ. ಈತ ವೈಟ್ಫೀಲ್ಡ್ನ ಖಾಸಗಿ ಕಂಪನಿಯಲ್ಲಿ ಐಟಿ ಉದ್ಯೋಗಿಯಾಗಿದ್ದ. ಕಳೆದ ಎಂಟು ತಿಂಗಳಿನಿಂದ ಪ್ಲಾಟ್ ಬಾಡಿಗೆಗೆ ಪಡೆದು ವಾಸ ಮಾಡುತ್ತಿದ್ದ. ಕಳೆದ ರಾತ್ರಿ ಕಂಠ ಪೂರ್ತಿ ಕುಡಿದು, ಪ್ಲಾಟ್ ಒಳಗೆ ಪೋನ್ನಲ್ಲಿ ಮಾತನಾಡುತ್ತ ಕೂಗಾಡುತ್ತಿದ್ದ. ಬಳಿಕ ಬಾಲ್ಕನಿಯಿಂದ ಏರ್ಗನ್ ಮೂಲಕ 45 ನಿಮಿಷಗಳ ಕಾಲ ಫೈರ್ ಮಾಡಿದ್ದಾನೆ. ಇದನ್ನೂ ಓದಿ: ನೆಲಮಂಗಲ ಚಿನ್ನದಂಗಡಿ ಮಾಲೀಕನ ಮೇಲೆ ಗುಂಡಿನ ದಾಳಿ – ಗ್ರಾಹಕರ ಸೋಗಿನಲ್ಲಿ ಬಂದು ದರೋಡೆಗೆ ಯತ್ನ ಕಾರು ಮತ್ತು ಪಾರ್ಕಿಂಗ್ ಶೇಡ್ ಶೀಟ್ಗಳ ಮೇಲೆ ಫೈರ್ ಮಾಡಿದ್ದಾನೆ. ಶಬ್ದ ಕೇಳಿಸಿಕೊಂಡು ಅಲ್ಲಿಗೆ ಬಂದಿದ್ದ ಸೆಕ್ಯುರಿಟಿ ಗಾರ್ಡ್ಗಳ ಮೇಲೂ ದಾಳಿ ಮಾಡಿದ್ದಾನೆ. ಬಳಿಕ ಸೂರ್ಯನಗರ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಸ್ಥಳಕ್ಕೆ ಬಂದ ಪೊಲೀಸರು ಆರೋಪಿ ಅನುರಾಗ್ ತಿವಾರಿ ವಶಕ್ಕೆ ಪಡೆದಿದ್ದಾರೆ. ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿ ಬಳಿ ಇದ್ದ ಏರ್ಗನ್ ಮತ್ತು ಬಾಲ್ಸ್ ಗಳನ್ನ ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಡೆಲಿವರಿ ಬಾಯ್ನಿಂದ ಕಿರುಕುಳ ಆರೋಪ – ಮೊಬೈಲ್ ನಂಬರ್ ಕೊಡುವಂತೆ ಒತ್ತಾಯ, ವಿಡಿಯೋ ಹಂಚಿಕೊಂಡ ಯುವತಿ