ಲೋಪ: ಫೇಸ್ಬುಕ್ ತಪ್ಪೊಪ್ಪಿಗೆ
ನವದೆಹಲಿ: ‘ಮಕ್ಕಳ ಮೇಲಿನ ಲೈಂಗಿಕ ಶೋಷಣೆಗೆ ಸಂಬಂಧಿಸಿದ ಕಂಟೆಂಟ್ಗಳು ಹಾಗೂ ಡೀಪ್ಫೇಕ್ ವಿಚಾರದಲ್ಲಿ ವೈಫಲ್ಯ ಉಂಟಾಗಿದೆ ಮತ್ತು ನಿರ್ದಿಷ್ಟ ಬಗೆಯ ವಿಷಯಗಳ (ಕಂಟೆಂಟ್) ಪ್ರಚಾರಕ್ಕಾಗಿ ದೊಡ್ಡ ಮೊತ್ತದ ಹಣ ಪಾವತಿಯಾಗಿದೆ’ ಎಂದು ಫೇಸ್ಬುಕ್, ಇನ್ಸ್ಟಾಗ್ರಾಮ್, ವಾಟ್ಸ್ಆ್ಯಪ್ ಸಾಮಾಜಿಕ ಜಾಲತಾಣಗಳ ಮಾಲೀಕತ್ವ ಹೊಂದಿರುವ ಮೆಟಾ ಕಂಪನಿ ಕೇಂದ್ರ ಸರ್ಕಾರದ ಮುಂದೆ

ನವದೆಹಲಿ: ‘ಮಕ್ಕಳ ಮೇಲಿನ ಲೈಂಗಿಕ ಶೋಷಣೆಗೆ ಸಂಬಂಧಿಸಿದ ಕಂಟೆಂಟ್ಗಳು ಹಾಗೂ ಡೀಪ್ಫೇಕ್ ವಿಚಾರದಲ್ಲಿ ವೈಫಲ್ಯ ಉಂಟಾಗಿದೆ ಮತ್ತು ನಿರ್ದಿಷ್ಟ ಬಗೆಯ ವಿಷಯಗಳ (ಕಂಟೆಂಟ್) ಪ್ರಚಾರಕ್ಕಾಗಿ ದೊಡ್ಡ ಮೊತ್ತದ ಹಣ ಪಾವತಿಯಾಗಿದೆ’ ಎಂದು ಫೇಸ್ಬುಕ್, ಇನ್ಸ್ಟಾಗ್ರಾಮ್, ವಾಟ್ಸ್ಆ್ಯಪ್ ಸಾಮಾಜಿಕ ಜಾಲತಾಣಗಳ ಮಾಲೀಕತ್ವ ಹೊಂದಿರುವ ಮೆಟಾ ಕಂಪನಿ ಕೇಂದ್ರ ಸರ್ಕಾರದ ಮುಂದೆ ಬುಧವಾರ ತಪ್ಪೊಪ್ಪಿಕೊಂಡಿದೆ.ಕಂಪನಿಯ ಒಡೆತನದಲ್ಲಿನ ಸಾಮಾಜಿಕ ಮಾಧ್ಯಮಗಳಲ್ಲಿನ ಲೋಪಗಳ ಕುರಿತು ಸಂಸತ್ತಿನ ಸ್ಥಾಯಿ ಸಮಿತಿಯು ವಿಚಾರಣೆ ನಡೆಸುತ್ತಿದೆ. ಅದರ ಜೊತೆಯಲ್ಲೇ, ಪ್ರತಿಭಟನೆನಿರತ ವಿದ್ಯಾರ್ಥಿಗಳನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಬಿಡುಗಡೆ ಮಾಡಿದ್ದ ವಿಡಿಯೊ ಹೇಳಿಕೆಯನ್ನು ಫೇಸ್ಬುಕ್ನಿಂದ ಕೆಲಕಾಲ ತೆಗೆದುಹಾಕಿದ್ದ ಕುರಿತೂ ಪರಿಶೀಲನೆ ನಡೆಸಿದ್ದ ಸಮಿತಿ, ಕಂಪನಿಯ ಮುಖ್ಯಸ್ಥರಿಂದ ಕ್ಷಮೆ ಯಾಚನೆಗೆ ತಾಕೀತು ಮಾಡಿತ್ತು.ಅದರ ಬೆನ್ನಲ್ಲೇ ಅಮೆರಿಕದಿಂದ ದೌಡಾಯಿಸಿ ಬಂದ ಮೆಟಾ ಸಂಸ್ಥೆಯ ಜಾಗತಿಕ ವ್ಯವಹಾರಗಳ ಮುಖ್ಯಸ್ಥ ಜೋಯೆಲ್ ಕಪ್ಲಾನ್ ನೇತೃತ್ವದ ತಂಡವು, ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿಮಾಡಿ ತಪ್ಪೊಪ್ಪಿಕೊಂಡಿದೆ. ‘ಸಂಸ್ಥೆಯ ಅಧೀನದ ಜಾಲತಾಣ ವೇದಿಕೆಗಳ ಕಾರ್ಯಾಚರಣೆಯಲ್ಲಿ ಲೋಪಗಳು ಆಗಿವೆ ಎಂದು ತಂಡವು ಒಪ್ಪಿಕೊಂಡಿದೆ’ ಎಂದು ಕೇಂದ್ರ ಸರ್ಕಾರದ ಮೂಲಗಳು ಮಾಹಿತಿ ನೀಡಿವೆ.‘ಕಾನೂನು ಬಾಹಿರವಾದ ಅನೇಕ ಅಂಶಗಳನ್ನು ಪ್ರಚುರಪಡಿಸಲಾಗಿದೆ. ಮಕ್ಕಳ ಮೇಲಿನ ಲೈಂಗಿಕ ಶೋಷಣೆಗೆ ಸಂಬಂಧಿಸಿದ ಕಂಟೆಂಟ್ಗಳನ್ನು ನಿರ್ದಿಷ್ಟ ಗ್ರಾಹಕರಿಗೆ ತಲುಪಿಸಲು ಹಣ ಪಡೆಯಲಾಗಿದೆ ಎಂಬುದನ್ನೂ ಸಂಸ್ಥೆ ಒಪ್ಪಿಕೊಂಡಿದೆ’ ಎಂದು ಹೇಳಿವೆ.ಇದಕ್ಕೂ ಮುನ್ನ ಮೆಟಾ ತಂಡವು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಕಾರ್ಯದರ್ಶಿ ಎಸ್. ಕೃಷ್ಣನ್ ಅವರೊಂದಿಗೆ ಪ್ರತ್ಯೇಕ ಸಭೆ ನಡೆಸಿತು.ರಾಷ್ಟ್ರೀಯ ಭದ್ರತೆಗೆ ಅಪಾಯ: ‘ಕೇವಲ ತಾಂತ್ರಿಕ ಲೋಪಗಳ ಕಾರಣದಿಂದಾಗಿಯೇ ಸಮಸ್ಯೆಗಳಾಗಿವೆ ಎಂಬ ಮೆಟಾ ವಾದವನ್ನು ಕೇಂದ್ರ ಸರ್ಕಾರವು ತಿರಸ್ಕರಿಸಿದೆ. ಇಂತಹ ನಡೆಯಿಂದ ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಅಪಾಯವಿದೆ ಎಂಬುದಾಗಿ ಕೇಂದ್ರವು ಅಭಿಪ್ರಾಯಪಟ್ಟಿದೆ’ ಎಂದು ಮೂಲಗಳು ತಿಳಿಸಿವೆ.ಮಕ್ಕಳ ಮೇಲಿನ ಲೈಂಗಿಕ ಶೋಷಣೆಯ ಕಂಟೆಂಟ್, ಇನ್ಸ್ಟಾಗ್ರಾಂನಲ್ಲಿ ಪಾವತಿ ಆಧಾರಿತ ಜಾಹೀರಾತುಗಳನ್ನು ಪ್ರಕಟಿಸುತ್ತಿರುವ ಕುರಿತು ಕಳೆದ ತಿಂಗಳು ಮೆಟಾ ಕಂಪನಿಗೆ ಕೇಂದ್ರ ಸರ್ಕಾರವು ನೋಟಿಸ್ ಜಾರಿ ಮಾಡಿತ್ತು. ಆ ಬಳಿಕ ವ್ಯಾಪಕ ಪರಿಶೀಲನೆ ಕೈಗೆತ್ತಿಕೊಳ್ಳಲಾಗಿತ್ತು.ವಿಡಿಯೊ ತೆಗೆದಿದ್ದಕ್ಕೆ ಕ್ಷಮೆಯಾಚನೆ ಪ್ರಧಾನಿ ನರೇಂದ್ರ ಮೋದಿ ಅವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ವಿಡಿಯೊವನ್ನು ಫೇಸ್ಬುಕ್ನಿಂದ ತಾತ್ಕಾಲಿಕವಾಗಿ ತೆಗೆದಿದ್ದಕ್ಕೆ ಮೆಟಾ ಸಂಸ್ಥೆ ಕೇಂದ್ರ ಸರ್ಕಾರದ ಕ್ಷಮೆಯಾಚಿಸಿದೆ. ಮೆಟಾದ ಜಾಗತಿಕ ವ್ಯವಹಾರಗಳ ಮುಖ್ಯಸ್ಥ ಜೋಯೆಲ್ ಕಪ್ಲಾನ್ ನೇತೃತ್ವದ ತಂಡವು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಕ್ಷಮಾಪಣೆ ಪತ್ರವನ್ನು ಹಸ್ತಾಂತರಿಸಿದೆ. ‘ಪ್ರಧಾನಿ ನರೇಂದ್ರ ಮೋದಿಯವರ ಪೋಸ್ಟ್ ಅನ್ನು ತಡೆಹಿಡಿದ ಪ್ರಮಾದಕ್ಕಾಗಿ ಮೆಟಾ ಪರವಾಗಿ ಜೋಯಲ್ ಕಪ್ಲಾನ್ ಅವರು ಸಚಿವರ ಬಳಿ ಕ್ಷಮೆ ಯಾಚಿದ್ದಾರೆ. ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಾರ್ಕ್ ಜುಕರ್ಬರ್ಗ್ ಅವರಿಂದಲೇ ಕ್ಷಮಾಪಣೆ ಪತ್ರ ಬಂದಿದೆ’ ಎಂದು ಕೇಂದ್ರ ಸರ್ಕಾರದ ಗುರುತು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ ಕೇಂದ್ರ ಸರ್ಕಾರದ ಬಳಿ ಕ್ಷಮೆ ಯಾಚಿಸಿರುವುದಕ್ಕೆ ಸಂಬಂಧಿಸಿದಂತೆ ಜೋಯೆಲ್ ಕಪ್ಲಾನ್ ಅವರಾಗಲೀ ಅಥವಾ ಮೆಟಾದ ಇತರ ಪ್ರತಿನಿಧಿಗಳಾಗಲೀ ಅಧಿಕೃತವಾಗಿ ಏನನ್ನೂ ಹೇಳಿಲ್ಲ. ‘ಮೂರು ದಿನಗಳಲ್ಲಿ ಕ್ಷಮೆ ಕೇಳದಿದ್ದರೆ ಮಾರ್ಕ್ ಅವರಿಗೆ ಇರುವ ಭದ್ರತೆ ಮತ್ತು ವಿನಾಯಿತಿಗಳನ್ನು ಹಿಂಪಡೆಯಬಹುದು’ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಕಾರ್ಯದರ್ಶಿಗೆ ಬುಧವಾರ ಬರೆದ ಪತ್ರದಲ್ಲಿ ಲೋಕಸಭಾ ಸಚಿವಾಲಯದ ನಿರ್ದೇಶಕಿ ಎ. ಜ್ಯೋತಿರ್ಮಯಿ ಅವರು ತಿಳಿಸಿದ್ದರು. ಪರೀಕ್ಷಾ ವಿವಾದಗಳು ಮತ್ತು ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಕೈಗೊಂಡ ಕಠಿಣ ಕ್ರಮಗಳ ಬಗ್ಗೆ ಜೆನ್ ಝೀ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಪ್ರಧಾನಿ ಅವರು ವಿಡಿಯೊದಲ್ಲಿ ಮಾತನಾಡಿದ್ದರು. ಜುಲೈ 23ರಂದು ಈ ವಿಡಿಯೊ ಫೇಸ್ಬುಕ್ನಿಂದ ಕಣ್ಮರೆಯಾಗಿತ್ತು. ‘ಇದು ತಾಂತ್ರಿಕ ದೋಷದಿಂದ ಉಂಟಾದ ಲೋಪ’ ಎಂದು ಮೆಟಾ ತಿಳಿಸಿತ್ತು. ಆದರೆ ಸರ್ಕಾರವು ಈ ವಿವರಣೆಯನ್ನು ಅಸಮರ್ಪಕ ಎಂದು ತಿರಸ್ಕರಿಸಿತ್ತು. ಗೂಗಲ್ ಇಂಡಿಯಾ ಮುಖ್ಯಸ್ಥರ ವಿರುದ್ಧವೂ ಕ್ರಮಕ್ಕೆ ಕೋರಿಕೆ: ನಕಲಿ ಆ್ಯಪ್ಗಳ ಮೂಲಕ ಹೂಡಿಕೆದಾರರು ₹48 ಲಕ್ಷ ಕಳೆದುಕೊಂಡ ಪ್ರಕರಣದಲ್ಲಿ ‘ಗೂಗಲ್ ಇಂಡಿಯಾ’ ಸಂಸ್ಥೆಯ ಮುಖ್ಯಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಸಮಿತಿ ಕೋರಿದೆ. ‘ಹಣ ಕಳೆದುಕೊಂಡ ಪ್ರಕರಣವೊಂದರಲ್ಲಿ ಹೈದರಾಬಾದ್ ಸೈಬರ್ ಅಪರಾಧ ವಿಭಾಗದ ಪೊಲೀಸರು ಗೂಗಲ್ ಇಂಡಿಯಾ ಮುಖ್ಯಸ್ಥರನ್ನು ಸಹ–ಆರೋಪಿಯನ್ನಾಗಿ ಮಾಡಿದ್ದಾರೆ. ಭಾರತ ಸರ್ಕಾರ ಕೂಡ ಇಂಥದ್ದೇ ಕ್ರಮವನ್ನು ಕೈಗೊಳ್ಳಬೇಕು ಎಂದು’ ಸಮಿತಿಯು ಪತ್ರದಲ್ಲಿ ತಿಳಿಸಿದೆ. ‘ತಟಸ್ಥ ಎನ್ನಲು ಸಾಧ್ಯವಿಲ್ಲ’ ‘ಸಂಸ್ಥೆಯ ‘ಅಲ್ಗಾರಿದಮ್’ಗಳು ಗ್ರಾಹಕರು ನೋಡುವ ಕಂಟೆಂಟ್ಗಳನ್ನು ಸಕ್ರಿಯವಾಗಿ ನಿರ್ವಹಿಸುತ್ತವೆ ಶಿಫಾರಸು ಮಾಡುತ್ತವೆ ಮತ್ತು ನಿರ್ಧರಿಸುತ್ತವೆ. ಹೀಗಾಗಿ ತಾನು ತಟಸ್ಥ ಮಧ್ಯವರ್ತಿ ಎಂದು ಮೆಟಾ ಹೇಳಿಕೊಳ್ಳಲಾಗದು. ಆದ್ದರಿಂದ ತಟಸ್ಥ ಮಧ್ಯವರ್ತಿ ವೇದಿಕೆಗಳಿಗೆ ಸಿಗಬಹುದಾದ ರಕ್ಷಣೆ ಪಡೆಯುವುದು ಬಳಕೆದಾರರು ಸೃಜಿಸುವ ಕಂಟೆಂಟ್ಗಳಿಗೆ ತಾನು ಹೊಣೆಗಾರ ಅಲ್ಲ ಎಂದು ಹೇಳುವುದಕ್ಕೆ ಅವಕಾಶವಿಲ್ಲ’ ಎಂಬ ವಾದವನ್ನು ಸರ್ಕಾರವು ಮುಂದಿಟ್ಟಿತು ಎಂದೂ ಮೂಲಗಳು ತಿಳಿಸಿವೆ.ಗೂಗಲ್ ಇಂಡಿಯಾ ಮುಖ್ಯಸ್ಥರ ವಿರುದ್ಧವೂ ಕ್ರಮಕ್ಕೆ ಕೋರಿಕೆನಕಲಿ ಆ್ಯಪ್ಗಳ ಮೂಲಕ ಹೂಡಿಕೆದಾರರು ₹48 ಲಕ್ಷ ಕಳೆದುಕೊಂಡ ಪ್ರಕರಣದಲ್ಲಿ ‘ಗೂಗಲ್ ಇಂಡಿಯಾ’ ಸಂಸ್ಥೆಯ ಮುಖ್ಯಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಸಮಿತಿ ಕೋರಿದೆ.‘ಹಣ ಕಳೆದುಕೊಂಡ ಪ್ರಕರಣವೊಂದರಲ್ಲಿ ಹೈದರಾಬಾದ್ ಸೈಬರ್ ಅಪರಾಧ ವಿಭಾಗದ ಪೊಲೀಸರು ಗೂಗಲ್ ಇಂಡಿಯಾ ಮುಖ್ಯಸ್ಥರನ್ನು ಸಹ–ಆರೋಪಿಯನ್ನಾಗಿ ಮಾಡಿದ್ದಾರೆ. ಭಾರತ ಸರ್ಕಾರ ಕೂಡ ಇಂಥದ್ದೇ ಕ್ರಮವನ್ನು ಕೈಗೊಳ್ಳಬೇಕು’ ಎಂದು ಸಮಿತಿಯು ಪತ್ರದಲ್ಲಿ ತಿಳಿಸಿದೆ.