ದಕ್ಷಿಣ ಆಫ್ರಿಕಾ ಪ್ರವಾಸ: ಟಿ20 ಸರಣಿ ಆಡಲಿರುವ ಭಾರತ ಮಹಿಳಾ ತಂಡ
ಜೊಹಾನೆಸ್ಬರ್ಗ್: ಪ್ರವಾಸಿ ಭಾರತ ಮಹಿಳಾ ಕ್ರಿಕೆಟ್ ತಂಡದ ವೇಳಾಪಟ್ಟಿಯನ್ನು ಪರಿಷ್ಕರಿಸಿರುವ ಕ್ರಿಕೆಟ್ ಸೌತ್ ಆಫ್ರಿಕಾ (ಸಿಎಸ್ಎ), ಈ ಪ್ರವಾಸದಲ್ಲಿ ಮೂರು ಪಂದ್ಯಗಳ ಟಿ20 ಸರಣಿಗೂ ಅವಕಾಶ ಕಲ್ಪಿಸಿದೆ. ಈ ಮೊದಲು ಪ್ರವಾಸದಲ್ಲಿ ಒಂದು ಟೆಸ್ಟ್ ಮತ್ತು ಮೂರು ಏಕದಿನ ಪಂದ್ಯಗಳನ್ನು ಮಾತ್ರ ನಿಗದಿಮಾಡಲಾಗಿತ್ತು.ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ ಈ ವರ್ಷದ

ಜೊಹಾನೆಸ್ಬರ್ಗ್: ಪ್ರವಾಸಿ ಭಾರತ ಮಹಿಳಾ ಕ್ರಿಕೆಟ್ ತಂಡದ ವೇಳಾಪಟ್ಟಿಯನ್ನು ಪರಿಷ್ಕರಿಸಿರುವ ಕ್ರಿಕೆಟ್ ಸೌತ್ ಆಫ್ರಿಕಾ (ಸಿಎಸ್ಎ), ಈ ಪ್ರವಾಸದಲ್ಲಿ ಮೂರು ಪಂದ್ಯಗಳ ಟಿ20 ಸರಣಿಗೂ ಅವಕಾಶ ಕಲ್ಪಿಸಿದೆ. ಈ ಮೊದಲು ಪ್ರವಾಸದಲ್ಲಿ ಒಂದು ಟೆಸ್ಟ್ ಮತ್ತು ಮೂರು ಏಕದಿನ ಪಂದ್ಯಗಳನ್ನು ಮಾತ್ರ ನಿಗದಿಮಾಡಲಾಗಿತ್ತು.ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ ಈ ವರ್ಷದ ಡಿಸೆಂಬರ್ 9 ರಿಂದ 12ರವರೆಗೆ ಏಕೈಕ ಟೆಸ್ಟ್ ಪಂದ್ಯ ನಡೆಯಲಿದೆ. ಏಕದಿನ ಪಂದ್ಯಗಳ ಸರಣಿ ಡಿಸೆಂಬರ್ 16 ರಿಂದ 22ರ ಅವಧಿಯಲ್ಲಿ ನಿಗದಿಯಾಗಿದೆ. ಭಾರತ ತಂಡ ಒಂದು ವಾರ ಹೆಚ್ಚು ಉಳಿದುಕೊಳ್ಳಲಿದ್ದು, ಡಿಸೆಂಬರ್ 26 ರಿಂದ 30ರ ನಡುವೆ ಮೂರು ಟಿ20 ಪಂದ್ಯಗಳನ್ನು ಆಡಲಿದೆ.ಟಿ20 ಪಂದ್ಯಗಳನ್ನು ಬೆನೋನಿ ಮತ್ತು ಪೊಚೆಫ್ಸ್ಟ್ರೂಮ್ನಲ್ಲಿ ಆಡಲಾಗುವುದು. ಟಿ20 ಸರಣಿಯಿಂದ ಎರಡೂ ತಂಡಗಳಿಗೆ ಶ್ರೀಲಂಕಾದಲ್ಲಿ ಫೆಬ್ರುವರಿಯಲ್ಲಿ ನಡೆಯಲಿರುವ ಚೊಚ್ಚಲ ಮಹಿಳಾ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಸಿದ್ಧತೆ ನಡೆಸಲು ಅನುಕೂಲವಾಗಲಿದೆ.‘ಭಾರತ ಮಹಿಳಾ ತಂಡದ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಟಿ20 ಸರಣಿ ಸೇರ್ಪಡೆ ಮಾಡಿರುವುದನ್ನು ಖಚಿತಪಡಿಸಲು ನಮಗೆ ಸಂಸತವಾಗುತ್ತಿದೆ. ಇದು ದಕ್ಷಿಣ ಆಫ್ರಿಕಾ ಮಹಿಳಾ ತಂಡಕ್ಕೆ ಚಾಂಪಿಯನ್ಸ್ ಟ್ರೋಫಿಗೆ ಸಿದ್ಧತೆ ನಡೆಸಲು ಅತ್ಯುತ್ತಮ ಅವಕಾಶ ಒದಗಿಸಲಿದೆ’ ಎಂದು ಸಿಎಸ್ಎ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಫೊಲೆಟ್ಸಿ ಮೊಸೆಕಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಭಾರತ ತಂಡ ಈ ವರ್ಷದ ಮಾರ್ಚ್– ಏಪ್ರಿಲ್ನಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದ್ದು, ಐದು ಪಂದ್ಯಗಳ ಟಿ20 ಸರಣಿ ಆಡಿತ್ತು. ದಕ್ಷಿಣ ಆಫ್ರಿಕಾ ತಂಡ 4–1 ರಿಂದ ಸರಣಿ ಗೆದ್ದಿತ್ತು.