11 ಭಾರತೀಯ ಮೀನುಗಾರರ ರಕ್ಷಣೆ
ಕೊಲಂಬೊ: ಪಾಕ್ ಜಲಸಂಧಿಯಲ್ಲಿ ಅಪಘಾತಕ್ಕೀಡಾದ ಬೋಟ್ನಲ್ಲಿದ್ದ 11 ಭಾರತೀಯ ಮೀನುಗಾರರನ್ನು ಶ್ರೀಲಂಕಾದ ನೌಕಾಪಡೆ ಗುರುವಾರ ರಕ್ಷಿಸಿದೆ. ಭಾರತದ ಮೀನುಗಾರರಿದ್ದ ಬೋಟ್ ಉತ್ತರ ಶ್ರೀಲಂಕಾ ಕರಾವಳಿಯ ನೆಡುಂತೀವು ದ್ವೀಪದ ಸಮೀಪ ಅಪಘಾತಕ್ಕೀಡಾಗಿತ್ತು. ಭಾರತೀಯ ಮೀನುಗಾರರಿದ್ದ ಬೋಟ್ ಅಂತರರಾಷ್ಟ್ರೀಯ ಜಲಗಡಿ ಉಲ್ಲಂಘಿಸಿ, ಉತ್ತರ ಶ್ರೀಲಂಕಾ ಕರಾವಳಿಯಲ್ಲಿ ಅಕ್ರ

ಕೊಲಂಬೊ: ಪಾಕ್ ಜಲಸಂಧಿಯಲ್ಲಿ ಅಪಘಾತಕ್ಕೀಡಾದ ಬೋಟ್ನಲ್ಲಿದ್ದ 11 ಭಾರತೀಯ ಮೀನುಗಾರರನ್ನು ಶ್ರೀಲಂಕಾದ ನೌಕಾಪಡೆ ಗುರುವಾರ ರಕ್ಷಿಸಿದೆ. ಭಾರತದ ಮೀನುಗಾರರಿದ್ದ ಬೋಟ್ ಉತ್ತರ ಶ್ರೀಲಂಕಾ ಕರಾವಳಿಯ ನೆಡುಂತೀವು ದ್ವೀಪದ ಸಮೀಪ ಅಪಘಾತಕ್ಕೀಡಾಗಿತ್ತು. ಭಾರತೀಯ ಮೀನುಗಾರರಿದ್ದ ಬೋಟ್ ಅಂತರರಾಷ್ಟ್ರೀಯ ಜಲಗಡಿ ಉಲ್ಲಂಘಿಸಿ, ಉತ್ತರ ಶ್ರೀಲಂಕಾ ಕರಾವಳಿಯಲ್ಲಿ ಅಕ್ರಮವಾಗಿ ಮೀನುಗಾರಿಕೆಯಲ್ಲಿ ತೊಡಗಿತ್ತು. ಬಾಟಮ್ ಟ್ರಾಲಿಂಗ್ನಲ್ಲಿ ತೊಡಗಿದ್ದಾಗ ಈ ಅವಘಡ ಸಂಭವಿಸಿದೆ ಎಂದು ಶ್ರೀಲಂಕಾದ ನೌಕಾಪಡೆಯ ವಕ್ತಾರ ಚಮಿಂಡ ವಲಕುಲುಗೆ ಹೇಳಿದ್ದಾರೆ. ರಕ್ಷಣಾ ಕಾರ್ಯಾಚರಣೆ ಭಾಗವಾಗಿ ಬೋಟ್ನಲ್ಲಿದ್ದವರನ್ನು ನೆಡುಂತೀವು ದ್ವೀಪಕ್ಕೆ ತರಲಾಗಿದೆ. ಬೋಟ್ಗೆ ಸ್ವಲ್ಪ ಮಟ್ಟಿಗಿನ ಹಾನಿಯಾಗಿದೆ ಎಂದು ಮೂಲಗಳು ಹೇಳಿವೆ.ಶ್ರೀಲಂಕಾ ಪ್ರವಾಸದಲ್ಲಿರುವ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ ಅವರು, ಭಾರತದ ಮೀನುಗಾರರನ್ನು ಬಿಡುಗಡೆ ಮಾಡುವಂತೆ ಅಲ್ಲಿನ ಮುಖಂಡರಿಗೆ ಮನವಿ ಮಾಡಿದ್ದಾರೆ.
Read the complete story at Prajavani