ನಕಲಿ ಬಂಗಾರ ನೀಡಿ ವಂಚನೆ: ಆರೋಪಿ ಬಂಧನ
ತ್ಯಾಗರ್ತಿ: ಆನಂದಪುರ ಸಮೀಪದ ಜೋಗಿನಗದ್ದೆ ಗ್ರಾಮದಲ್ಲಿ ನಕಲಿ ಬಂಗಾರ ನೀಡಿ ₹9.60 ಲಕ್ಷ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸುವಲ್ಲಿ ಆನಂದಪುರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಯಲ್ಲಾಪುರ ಗ್ರಾಮದ ನಿವಾಸಿ ಮಂಜುನಾಥ ವಿ. (30) ಬಂಧಿತ ಆರೋಪಿ. ಆತನಿಂದ ₹7.10 ಲಕ್ಷ ನಗದು ವಶಪಡಿಸಿಕೊಳ್ಳಲಾಗ

ತ್ಯಾಗರ್ತಿ: ಆನಂದಪುರ ಸಮೀಪದ ಜೋಗಿನಗದ್ದೆ ಗ್ರಾಮದಲ್ಲಿ ನಕಲಿ ಬಂಗಾರ ನೀಡಿ ₹9.60 ಲಕ್ಷ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸುವಲ್ಲಿ ಆನಂದಪುರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಯಲ್ಲಾಪುರ ಗ್ರಾಮದ ನಿವಾಸಿ ಮಂಜುನಾಥ ವಿ. (30) ಬಂಧಿತ ಆರೋಪಿ. ಆತನಿಂದ ₹7.10 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ.ಘಟನೆಯ ವಿವರ: ಮೈಸೂರು ಮೂಲದ ಜಗದೀಶ್ ಅವರಿಗೆ ಆರೋಪಿ ಮಂಜುನಾಥ ಹಾಗೂ ಇತರ ಐವರು, ನಿಧಿ ಸಿಕ್ಕಿದೆ ಎಂದು ನಂಬಿಸಿ ಕಡಿಮೆ ಬೆಲೆಗೆ ಚಿನ್ನದ ನಾಣ್ಯಗಳನ್ನು ನೀಡುವುದಾಗಿ ಹೇಳಿದ್ದರು. ಅದರಂತೆ ಜೂನ್ 4ರಂದು ಸಾಗರ ತಾಲ್ಲೂಕಿನ ಜೋಗಿನಗದ್ದೆ ಗ್ರಾಮಕ್ಕೆ ಕರೆಯಿಸಿಕೊಂಡು, ₹9.60 ಲಕ್ಷ ನಗದು ಪಡೆದು ನಕಲಿ ಆಭರಣಗಳನ್ನು ನೀಡಿ ವಂಚಿಸಿದ್ದರು. ಈ ಬಗ್ಗೆ ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಬೆನ್ನತ್ತಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಲೆಮರೆಸಿಕೊಂಡಿರುವ ಇನ್ನೂ ಐವರು ಆರೋಪಿಗಳ ಪತ್ತೆಗೆ ತನಿಖೆ ಮುಂದುವರಿದಿದೆ. ಠಾಣೆ ಪಿಎಸ್ಐ ಪ್ರವೀಣ್ ನೇತೃತ್ವದಲ್ಲಿ ಸಿಬ್ಬಂದಿ ಪ್ರಶಾಂತ್, ನಿರಂಜನ್, ಜಗದೀಶ್ ಕಾರ್ಯಾಚರಣೆಯಲ್ಲಿ ತೊಡಗಿದ್ದರು.