ಖಾತೆಗೆ ಮೆಟಾ ನಿರ್ಬಂಧ: ಪ್ರಧಾನಿಗೆ ಅಷ್ಟೊಂದು ತಲೆಬಾಗಬೇಡಿ ಎಂದ ಕೇಜ್ರಿವಾಲ್
ನವದೆಹಲಿ: 'ತಮ್ಮ ಸಾಮಾಜಿಕ ಮಾಧ್ಯಮ ಖಾತೆಯನ್ನು ಭಾರತದಲ್ಲಿ ನಿರ್ಬಂಧಿಸಲಾಗಿದೆ' ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಗುರುವಾರ ಆರೋಪಿಸಿದ್ದಾರೆ. ಅಲ್ಲದೆ ನಿರ್ಬಂಧದ ಹಿಂದಿನ ಕಾರಣವೇನು ಎಂದು ಮೆಟಾ ಸಂಸ್ಥೆಯನ್ನು ಪ್ರಶ್ನಿಸಿದ್ದಾರೆ.ಈ ಸಂಬಂಧ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಸ್ಕ್ರೀನ್ಶಾಟ್ ಪೋಸ್ಟ್ ಮಾಡಿರುವ ಕೇಜ್ರಿವಾಲ್,

ನವದೆಹಲಿ: 'ತಮ್ಮ ಸಾಮಾಜಿಕ ಮಾಧ್ಯಮ ಖಾತೆಯನ್ನು ಭಾರತದಲ್ಲಿ ನಿರ್ಬಂಧಿಸಲಾಗಿದೆ' ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಗುರುವಾರ ಆರೋಪಿಸಿದ್ದಾರೆ. ಅಲ್ಲದೆ ನಿರ್ಬಂಧದ ಹಿಂದಿನ ಕಾರಣವೇನು ಎಂದು ಮೆಟಾ ಸಂಸ್ಥೆಯನ್ನು ಪ್ರಶ್ನಿಸಿದ್ದಾರೆ.ಈ ಸಂಬಂಧ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಸ್ಕ್ರೀನ್ಶಾಟ್ ಪೋಸ್ಟ್ ಮಾಡಿರುವ ಕೇಜ್ರಿವಾಲ್, 'ಮೆಟಾ ಸಂಸ್ಥೆಯ ಭಾರತದ ಕಚೇರಿಯನ್ನು ವಿಚಾರಿಸಿದಾಗ ನನ್ನ ಖಾತೆಯನ್ನು ನಿರ್ಬಂಧಿಸಲಾಗಿದ್ದು, ಅದು ಭಾರತದಲ್ಲಿ ಲಭ್ಯವಿಲ್ಲ ಎಂಬ ವಿಷಯ ಗೊತ್ತಾಗಿದೆ' ಎಂದು ತಿಳಿಸಿದ್ದಾರೆ.'ಕಂಪನಿಯ ಅಧಿಕಾರಿಗಳು ಈ ನಿರ್ಬಂಧಕ್ಕೆ ಯಾವುದೇ ಸ್ಪಷ್ಟೀಕರಣವಾಗಲಿ ಅಥವಾ ಇದನ್ನು ಹೇಗೆ ತೆರವುಗೊಳಿಸಬೇಕು ಎಂಬುದನ್ನಾಗಲಿ ತಿಳಿಸಿಲ್ಲ' ಎಂದು ದೂರಿದ್ದಾರೆ. 'ಪ್ರಧಾನಿಗೆ ಅಷ್ಟೊಂದು ತಲೆಬಾಗಬೇಡಿ. ಇಲ್ಲದಿದ್ದರೆ ಅವರು ಭಾರತದಲ್ಲಿ ತಮ್ಮ ಸ್ವಂತ ಖಾತೆಯನ್ನು ಮಾತ್ರ ನಡೆಸಲು ನಿಮಗೆ ಅವಕಾಶ ನೀಡುತ್ತಾರೆ' ಎಂದು ಕೇಜ್ರಿವಾಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಮೆಟಾ ಸಂಸ್ಥೆಯಿಂದ ತಕ್ಷಣಕ್ಕೆ ಯಾವುದೇ ಅಧಿಕೃತ ಪ್ರತಿಕ್ರಿಯೆ ಲಭ್ಯವಾಗಿಲ್ಲ.Hi @Meta @metaindia Why have you restricted my account? Verbal enquiries at your India office revealed that my account has been restricted in India and is unavailable in India. Why? Noone in your office is giving any reasons. Noone is suggesting how restrictions can be removed.… pic.twitter.com/4JThAqFMon— Arvind Kejriwal (@ArvindKejriwal) August 6, 2026 ಹೊಸ ಎ.ಐ ಕೋಡಿಂಗ್ ಆ್ಯಪ್: ಓಪನ್ಎಐ, ಆಂಥ್ರೋಪಿಕ್ ಜೊತೆ ಮೆಟಾ ಸ್ಪರ್ಧೆವೈಫಲ್ಯ ಉಂಟಾಗಿದೆ: ತಪ್ಪೊಪ್ಪಿಕೊಂಡ ಮೆಟಾ ಕಂಪನಿ