ಸೆಪ್ಟೆಂಬರ್ನಲ್ಲಿ ಜನ ಏನ್ ಹೇಳ್ತಾರೆ? – `ಕ್ಯಾ ಬೋಲ್ತಿ ಪಬ್ಲಿಕ್’ ರಾಷ್ಟ್ರವ್ಯಾಪಿ ಅಭಿಯಾನಕ್ಕೆ CJP ನಿರ್ಧಾರ: ದೀಪ್ಕೆ
ನವದೆಹಲಿ: ಕಾಕ್ರೋಚ್ ಜನತಾ ಪಾರ್ಟಿ (Cockroach Janta Party) ಸಂಸ್ಥಾಪಕ ಅಭಿಜೀತ್ ದೀಪ್ಕೆ ಸೆಪ್ಟೆಂಬರ್ ತಿಂಗಳಿನಿಂದ ‘ಕ್ಯಾ ಬೋಲ್ತಿ ಪಬ್ಲಿಕ್’ ಹೆಸರಿನಲ್ಲಿ ರಾಷ್ಟ್ರವ್ಯಾಪಿ ಜನಸಂಪರ್ಕ ಅಭಿಯಾನ ಆರಂಭಿಸುವುದಾಗಿ ಘೋಷಿಸಿದ್ದಾರೆ. ಈ ಅಭಿಯಾನದ ಮೂಲಕ ದೇಶದ ವಿವಿಧ ಭಾಗಗಳಿಗೆ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆಗಳು, ಅಭಿಪ್ರಾಯಗಳು ಮತ್ತು ಬೇಡಿಕೆಗಳನ್ನ ಆಲಿಸಲಾಗುವುದು

ನವದೆಹಲಿ: ಕಾಕ್ರೋಚ್ ಜನತಾ ಪಾರ್ಟಿ (Cockroach Janta Party) ಸಂಸ್ಥಾಪಕ ಅಭಿಜೀತ್ ದೀಪ್ಕೆ ಸೆಪ್ಟೆಂಬರ್ ತಿಂಗಳಿನಿಂದ ‘ಕ್ಯಾ ಬೋಲ್ತಿ ಪಬ್ಲಿಕ್’ ಹೆಸರಿನಲ್ಲಿ ರಾಷ್ಟ್ರವ್ಯಾಪಿ ಜನಸಂಪರ್ಕ ಅಭಿಯಾನ ಆರಂಭಿಸುವುದಾಗಿ ಘೋಷಿಸಿದ್ದಾರೆ. ಈ ಅಭಿಯಾನದ ಮೂಲಕ ದೇಶದ ವಿವಿಧ ಭಾಗಗಳಿಗೆ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆಗಳು, ಅಭಿಪ್ರಾಯಗಳು ಮತ್ತು ಬೇಡಿಕೆಗಳನ್ನ ಆಲಿಸಲಾಗುವುದು ಎಂದು ದೀಪ್ಕೆ (Abhijeet Dipke) ತಿಳಿಸಿದ್ದಾರೆ. ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇತ್ತೀಚೆಗೆ NEET-UG 2026 ಪ್ರಶ್ನೆಪತ್ರಿಕೆ ಸೋರಿಕೆ ವಿವಾದ ಸಂಬಂಧ ದೆಹಲಿಯ ಜಂತರ್ ಮಂತರ್ನಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯನ್ನ ಶ್ಲಾಘಿಸಿದರು. 12 ವರ್ಷಗಳಲ್ಲಿ ಯಾರೂ ಮಾಡದ ಕೆಲಸ ಯುವಕರು ಮಾಡಿದ್ದಾರೆ ಸೆಪ್ಟೆಂಬರ್ನಲ್ಲಿ ನಾವು ‘ಕ್ಯಾ ಬೋಲ್ತಿ ಪಬ್ಲಿಕ್’ ರಾಷ್ಟ್ರವ್ಯಾಪಿ ಅಭಿಯಾನ ಆರಂಭಿಸುತ್ತೇವೆ. ದೇಶದಾದ್ಯಂತ ಸಂಚರಿಸಿ ಜನರನ್ನ ಭೇಟಿ ಮಾಡಿ ಅವರ ಸಮಸ್ಯೆಗಳು ಮತ್ತು ಅಭಿಪ್ರಾಯಗಳನ್ನ ಆಲಿಸುತ್ತೇವೆ. ಕಳೆದ 12 ವರ್ಷಗಳಲ್ಲಿ ಯಾರೂ ಮಾಡದ ಕೆಲಸವನ್ನ ಯುವಕರು ಮಾಡಿದ್ದಾರೆ. ಝೆನ್-ಝಿ (Gen-Z) ಯುವಕರ ಹೋರಾಟದಿಂದಲೇ ಸರ್ಕಾರವು ಶಿಕ್ಷಣ ಸಚಿವರಾಗಿದ್ದ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಸ್ವೀಕರಿಸಬೇಕಾಯಿತು. ಇನ್ನು ಮುಂದೆ ಜನರು ತಮ್ಮ ಬೇಡಿಕೆಗಳೊಂದಿಗೆ ಬೀದಿಗಿಳಿಯಲಿದ್ದಾರೆ ಎಂದು ಎಚ್ಚರಿಕೆ ನೀಡಿದರು. ‘ನಮ್ಮ ಸಿದ್ಧಾಂತದ ಬಗ್ಗೆ ಜನರಿಗೆ ಕುತೂಹಲವಿದೆ’ ಸಿಜೆಪಿ (CJP) ಸಿದ್ಧಾಂತ ಮತ್ತು ಕಾರ್ಯವೈಖರಿಯ ಕುರಿತು ಮಾತನಾಡಿದ ಅಭಿಜೀತ್ ದೀಪ್ಕೆ, ʻನಮ್ಮ ಪಕ್ಷ ಮತ್ತು ಸಿದ್ಧಾಂತದ ಬಗ್ಗೆ ಜನರಲ್ಲಿ ಹಲವು ಪ್ರಶ್ನೆಗಳಿವೆ. ಭಾರತದ ಸಂವಿಧಾನ, ಡಾ. ಬಿ.ಆರ್ ಅಂಬೇಡ್ಕರ್ ಮತ್ತು ಪಂಡಿತ್ ಜವಾಹರಲಾಲ್ ನೆಹರು ಅವರ ತತ್ವಗಳನ್ನ ಆಧಾರವಾಗಿಟ್ಟುಕೊಂಡು ನಾವು ಕಾರ್ಯನಿರ್ವಹಿಸುತ್ತೇವೆ. ಸಾಮಾಜಿಕ ನ್ಯಾಯಕ್ಕಾಗಿ ನಮ್ಮ ಹೋರಾಟ ಮುಂದುವರಿಯಲಿದೆʼ ಎಂದರು. ‘ಎಲ್ಲರಿಗೂ ಕೈಗೆಟುಕುವ ಶಿಕ್ಷಣ ನಮ್ಮ ಗುರಿ’ ದೇಶದಲ್ಲಿ ಶಿಕ್ಷಣ ದುಬಾರಿಯಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ದೀಪ್ಕೆ, ʻಸರ್ಕಾರವು ಯುವಜನತೆ ಮತ್ತು ನಿರುದ್ಯೋಗದ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿಲ್ಲ. ಶಿಕ್ಷಣ ಕ್ಷೇತ್ರದಲ್ಲಿ ಸಮಗ್ರ ಸುಧಾರಣೆ ತರಬೇಕಿದೆ. ಪ್ರತಿಯೊಬ್ಬರಿಗೂ ಕೈಗೆಟುಕುವ ದರದಲ್ಲಿ ಶಿಕ್ಷಣ ದೊರೆಯಬೇಕು ಎಂಬುದು ನಮ್ಮ ಗುರಿ. ಶಿಕ್ಷಣ ಇಂದು ಲಾಭದಾಯಕ ವ್ಯವಹಾರವಾಗಿ ಪರಿಣಮಿಸಿದೆ. ಈ ವ್ಯವಸ್ಥೆಯನ್ನ ಸುಧಾರಿಸಿ ಉತ್ತಮ ಶಿಕ್ಷಣ ವ್ಯವಸ್ಥೆಯನ್ನು ನಿರ್ಮಿಸಲು ನಾವು ಪ್ರಯತ್ನಿಸುತ್ತೇವೆ ಎಂದು ಹೇಳಿದರು.