ಶುದ್ಧ ಇಂಧನ ತಂತ್ರಜ್ಞಾನ ಬೆಳೆಯಬೇಕು: ಎಚ್ಡಿಕೆ
ನವದೆಹಲಿ: ಭಾರತವು ಶುದ್ಧ ಇಂಧನ ತಂತ್ರಜ್ಞಾನವನ್ನು ಬಳಕೆ ಮಾಡುವ ದೇಶಗಳ ಪಟ್ಟಿಯಲ್ಲಿ ಮುಂಚೂಣಿ ಸ್ಥಾನಕ್ಕೆ ಬರಲು ಯತ್ನಿಸುವುದಷ್ಟೇ ಅಲ್ಲದೆ, ಆ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ಮುಂಚೂಣಿ ದೇಶವೂ ಆಗಬೇಕು ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದರು.ಸಿಐಐ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ನವೀಕರ

ನವದೆಹಲಿ: ಭಾರತವು ಶುದ್ಧ ಇಂಧನ ತಂತ್ರಜ್ಞಾನವನ್ನು ಬಳಕೆ ಮಾಡುವ ದೇಶಗಳ ಪಟ್ಟಿಯಲ್ಲಿ ಮುಂಚೂಣಿ ಸ್ಥಾನಕ್ಕೆ ಬರಲು ಯತ್ನಿಸುವುದಷ್ಟೇ ಅಲ್ಲದೆ, ಆ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ಮುಂಚೂಣಿ ದೇಶವೂ ಆಗಬೇಕು ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದರು.ಸಿಐಐ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ನವೀಕರಿಸಬಹುದಾದ ಇಂಧನವನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುವುದು, ಇಂಧನ ದಕ್ಷತೆಯನ್ನು ಹೆಚ್ಚಿಸುವ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದು, ಇಂಗಾಲದ ಉತ್ಪಾದನೆಯನ್ನು ತಗ್ಗಿಸುವುದು ಈ ಹೊತ್ತಿನ ಅಗತ್ಯಗಳು’ ಎಂದರು.‘ನಮ್ಮ ಗುರಿ ಸ್ಪಷ್ಟವಾಗಿದೆ... ಭಾರತವು ಜಾಗತಿಕ ಮಟ್ಟದಲ್ಲಿ ಇಂಧನ ಪರಿವರ್ತನೆಗೆ ದಾರಿ ಮಾಡಿಕೊಡುವ ಉಪಕರಣಗಳು ಮತ್ತು ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ಮುಂಚೂಣಿ ದೇಶವೂ ಆಗಬೇಕು’ ಎಂದರು.
Read the complete story at Prajavani