‘ಲೆಟ್ಸ್ ಸ್ನ್ಯಾಪ್!’ ಯುವಕರನ್ನು ಸೆಳೆಯಲು ಮೋದಿ ಸರ್ಕಾರದ ಹೊಸ ಪ್ರಯತ್ನ
ನವದೆಹಲಿ: ದೇಶದ ಯುವ ಜನತೆಯನ್ನು (ಜೆನ್ ಝೀ) ತಲುಪಲು ಮತ್ತು ಅವರೊಂದಿಗೆ ಸಂಪರ್ಕ ಸಾಧಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಸಾಮಾಜಿಕ ಮಾಧ್ಯಮದ ಪ್ರತಿಯೊಂದು ವೇದಿಕೆಯನ್ನೂ ಬಳಸಿಕೊಳ್ಳಲು ಮುಂದಾಗಿದೆ.ಇದೀಗ ವಿದೇಶಾಂಗ ವ್ಯವಹಾರಗಳ ಸಚಿವಾಲಯವು (ಎಂಇಎ) ಜನಪ್ರಿಯ ಸಾಮಾಜಿಕ ಜಾಲತಾಣವಾದ ‘ಸ್ನ್ಯಾಪ್ಚಾಟ್’ಗೆ ಲಗ್ಗೆ ಇಟ್ಟಿದೆ.‘ನಾವು

ನವದೆಹಲಿ: ದೇಶದ ಯುವ ಜನತೆಯನ್ನು (ಜೆನ್ ಝೀ) ತಲುಪಲು ಮತ್ತು ಅವರೊಂದಿಗೆ ಸಂಪರ್ಕ ಸಾಧಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಸಾಮಾಜಿಕ ಮಾಧ್ಯಮದ ಪ್ರತಿಯೊಂದು ವೇದಿಕೆಯನ್ನೂ ಬಳಸಿಕೊಳ್ಳಲು ಮುಂದಾಗಿದೆ.ಇದೀಗ ವಿದೇಶಾಂಗ ವ್ಯವಹಾರಗಳ ಸಚಿವಾಲಯವು (ಎಂಇಎ) ಜನಪ್ರಿಯ ಸಾಮಾಜಿಕ ಜಾಲತಾಣವಾದ ‘ಸ್ನ್ಯಾಪ್ಚಾಟ್’ಗೆ ಲಗ್ಗೆ ಇಟ್ಟಿದೆ.‘ನಾವು ಈಗ ಸ್ನ್ಯಾಪ್ಚಾಟ್ನಲ್ಲಿದ್ದೇವೆ! ವಿಶೇಷ ಸ್ಟೋರಿಗಳು, ಅಪ್ಡೇಟ್ಗಳು ಮತ್ತು ಆಕರ್ಷಕ ಕಂಟೆಂಟ್ಗಳಿಗಾಗಿ ನಮ್ಮನ್ನು ಫಾಲೋ ಮಾಡಿ ಮತ್ತು ಸಂಪರ್ಕದಲ್ಲಿರಿ. ಲೆಟ್ಸ್ ಸ್ನ್ಯಾಪ್!’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.We're now on Snapchat! Add us and stay connected for exclusive stories, updates, engaging content and more.Let's Snap! pic.twitter.com/LyzjeuYG1I— Randhir Jaiswal (@MEAIndia) August 6, 2026 ಮತದಾರರೊಂದಿಗೆ, ಮುಖ್ಯವಾಗಿ ಯುವಕರೊಂದಿಗೆ ಸಂಪರ್ಕ ಬೆಳೆಸಿಕೊಳ್ಳಲು ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚು ಸಕ್ರಿಯರಾಗುವಂತೆ ಪ್ರಧಾನಿ ಮೋದಿ ಅವರು ಸಂಸದರಿಗೆ ಸೂಚನೆ ನೀಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.ಮೋದಿ ಅವರು ಸ್ವತಃ ಇನ್ಸ್ಟಾಗ್ರಾಮ್ನಲ್ಲಿ ದೇಶದ ಯುವಕರನ್ನು ಉದ್ದೇಶಿಸಿ ಮಾತನಾಡುವ ವಿಡಿಯೊಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ಉಪಸ್ಥಿತಿಯನ್ನು ಹೆಚ್ಚಿಸಿಕೊಂಡಿದ್ದಾರೆ.ಈಚೆಗೆ ದೆಹಲಿಯ ಜಂತರ್ ಮಂತರ್ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ನಡೆದ ನೀಟ್ ಪರೀಕ್ಷಾ ಅಕ್ರಮದ ವಿರುದ್ಧದ ಪ್ರತಿಭಟನೆಯಿಂದಾಗಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತಾಯಿತು. ಈ ಘಟನೆ ಬೆನ್ನಲ್ಲೇ ಯುವಜನರನ್ನು ತಲುಪುವ ಸರ್ಕಾರದ ಪ್ರಯತ್ನ ತೀವ್ರಗೊಂಡಿದೆ.