ಮೊಜ್ತಬಾ ಖಮೇನಿ ಜೊತೆ ಸಂವಹನ ತುಂಬಾ ಕಷ್ಟವಾಗ್ತಿದೆ: ಇರಾನ್ ಅಧ್ಯಕ್ಷ
ಟೆಹರಾನ್: ಯುಎಸ್-ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಗಾಯಗೊಂಡಿರುವ ಇರಾನ್ನ ನೂತನ ಸುಪ್ರೀಂ ಲೀಡರ್ ಮೊಜ್ತಬಾ ಖಮೇನಿ(Mojtaba Khamenei) ಅವರ ಜೊತೆ ಸಂವಹನ ಬಹಳ ಕಷ್ಟಕರವಾಗಿದೆ ಎಂದು ಇರಾನ್ ಅಧ್ಯಕ್ಷ ಮಸೌದ್ ಪೆಜೆಷ್ಕಿಯಾನ್(Masoud Pezeshkian) ತಿಳಿಸಿದ್ದಾರೆ. ಮಧ್ಯಪ್ರಾಚ್ಯ ಯುದ್ಧಕ್ಕೆ ಕಾರಣವಾದ ದಾಳಿಯಲ್ಲಿ ತಮ್ಮ ತಂದೆ ಹತ್ಯೆಗೀಡಾದ ನಂತರ ಅಧಿಕಾರ ವಹಿಸಿಕೊಂಡ ಮ

ಟೆಹರಾನ್: ಯುಎಸ್-ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಗಾಯಗೊಂಡಿರುವ ಇರಾನ್ನ ನೂತನ ಸುಪ್ರೀಂ ಲೀಡರ್ ಮೊಜ್ತಬಾ ಖಮೇನಿ(Mojtaba Khamenei) ಅವರ ಜೊತೆ ಸಂವಹನ ಬಹಳ ಕಷ್ಟಕರವಾಗಿದೆ ಎಂದು ಇರಾನ್ ಅಧ್ಯಕ್ಷ ಮಸೌದ್ ಪೆಜೆಷ್ಕಿಯಾನ್(Masoud Pezeshkian) ತಿಳಿಸಿದ್ದಾರೆ. ಮಧ್ಯಪ್ರಾಚ್ಯ ಯುದ್ಧಕ್ಕೆ ಕಾರಣವಾದ ದಾಳಿಯಲ್ಲಿ ತಮ್ಮ ತಂದೆ ಹತ್ಯೆಗೀಡಾದ ನಂತರ ಅಧಿಕಾರ ವಹಿಸಿಕೊಂಡ ಮುಜ್ತಬಾ ಖಮೇನಿ ಅವರು ಇದುವರೆಗೂ ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಪ್ರಸ್ತುತ ಅವರೊಂದಿಗೆ ಸಂವಹನ ಸಾಧಿಸುವುದು ಅತ್ಯಂತ ಕಷ್ಟಕರವಾಗಿದೆ. ಏನೇ ಆದರೂ ನಮಗೆ ಪ್ರಸ್ತುತ ಸನ್ನಿವೇಶದಲ್ಲಿ ಮುನ್ನಡೆಯಲು ಅವರ ಉಪಸ್ಥಿತಿಯೇ ಬಹುದೊಡ್ಡ ಶಕ್ತಿಯಾಗಿದೆ ಎಂದು ಪೆಜೆಷ್ಕಿಯಾನ್ ಹೇಳಿದ್ದಾರೆ. ಇದನ್ನೂ ಓದಿ: ಕೆಂಪು ಸಮುದ್ರದಲ್ಲಿ ಫಸ್ಟ್ ಟೈಮ್ ಭಾರತೀಯ ಹಡಗಿನ ಮೇಲೆ ದಾಳಿ – ಎಲ್ಲಾ 14 ಸಿಬ್ಬಂದಿ ರಕ್ಷಣೆ, ಭಾರತ ಖಂಡನೆ ಇರಾನ್ ಹಾಗೂ ಅಮೆರಿಕ ನಡುವೆ ತೀವ್ರ ಸಂಘರ್ಷ ನಡೆಯುತ್ತಿರುವ ಈ ನಿರ್ಣಾಯಕ ಸಮಯದಲ್ಲಿ, ಮುಜ್ತಬಾ ಖಮೇನಿ ಅವರು ಕೇವಲ ಲಿಖಿತ ಹೇಳಿಕೆಗಳ ಮೂಲಕವೇ ಸಂಪರ್ಕದಲ್ಲಿದ್ದಾರೆ. ಅವರು ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಳ್ಳದಿರುವುದು ಇತರ ಉನ್ನತ ಅಧಿಕಾರಿಗಳೊಂದಿಗೆ ಅವರ ಸಂಬಂಧ ಹೇಗಿದೆ ಎನ್ನುವುದು ಹಲವು ಊಹಾಪೋಹಗಳಿಗೆ ಕಾರಣವಾಗಿದೆ. ಕಳೆದ ತಿಂಗಳು ನಡೆದ ತಮ್ಮ ತಂದೆಯ ಅಂತ್ಯಕ್ರಿಯೆಯ ಚಟುವಟಿಕೆಗಳಲ್ಲೂ ಖಮೇನಿ ಭಾಗವಹಿಸಿರಲಿಲ್ಲ. ಅದಾಗ್ಯೂ ತಮ್ಮ ದೇಶದ ಸರ್ವೋಚ್ಛ ನಾಯಕನನ್ನು ಸಮರ್ಥಿಸಿಕೊಂಡ ಅಧ್ಯಕ್ಷ ಪೆಜೆಷ್ಕಿಯಾನ್, ತಾವು ಅವರೊಂದಿಗೆ ಫಲಪ್ರದ ಸಭೆಗಳನ್ನು ನಡೆಸಲು ಸಾಧ್ಯವಾಗಿದೆ ಎಂದು ಪ್ರತಿಪಾದಿಸಿದ್ದಾರೆ. ಅಲ್ಲದೆ ಸಭೆಗಳಲ್ಲಿ ಅವರು ಅತ್ಯಂತ ಪ್ರೀತಿ ಮತ್ತು ಪ್ರಬುದ್ಧ ತರ್ಕಬದ್ಧತೆಯಿಂದ ಸ್ಪಂದಿಸಿದ್ದಾರೆ ಎಂದು ತಿಳಿಸಿದ್ದಾರೆ. ದುರದೃಷ್ಟವಶಾತ್, ಪ್ರಸ್ತುತ ಇರುವ ಪರಿಸ್ಥಿತಿಯನ್ನು ಬಳಸಿಕೊಂಡು ಕೆಲವು ದುಷ್ಟಶಕ್ತಿಗಳು ಅವರನ್ನು ತಪ್ಪಾಗಿ ವಿಶ್ಲೇಷಿಸುತ್ತಿವೆ ಎಂದು ಪೆಜೆಷ್ಕಿಯಾನ್ ಕಳವಳ ವ್ಯಕ್ತಪಡಿಸಿದ್ದಾರೆ.