ಆಗಸ್ಟ್, ಸೆಪ್ಟೆಂಬರ್ ಪಡಿತರ ಒಂದೇ ಬಾರಿಗೆ ವಿತರಣೆ
ಮೈಸೂರು: ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್ಎಫ್ಎಸ್ಎ) ಅಡಿಯಲ್ಲಿ ಆಗಸ್ಟ್ ಮತ್ತು ಸೆಪ್ಟೆಂಬರ್ ಪಡಿತರ ಆಹಾರಧಾನ್ಯವನ್ನು ಒಂದೇ ಬಾರಿಗೆ ಈ ತಿಂಗಳಲ್ಲೇ ವಿತರಿಸಲು ಸರ್ಕಾರ ಸೂಚಿಸಿದ್ದು, ಪಡಿತರ ಚೀಟಿದಾರರಿಗೆ ಅಕ್ಕಿ ಮತ್ತು ರಾಗಿ ಹಂಚಿಕೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ತಿಳಿಸಿದ್ದಾರೆ.ಅಂತ್ಯೋದಯ ಅನ್ನ ಯೋಜನೆ(ಎಎವೈ) ಕಾರ್ಡ್ ಹೊ

ಮೈಸೂರು: ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್ಎಫ್ಎಸ್ಎ) ಅಡಿಯಲ್ಲಿ ಆಗಸ್ಟ್ ಮತ್ತು ಸೆಪ್ಟೆಂಬರ್ ಪಡಿತರ ಆಹಾರಧಾನ್ಯವನ್ನು ಒಂದೇ ಬಾರಿಗೆ ಈ ತಿಂಗಳಲ್ಲೇ ವಿತರಿಸಲು ಸರ್ಕಾರ ಸೂಚಿಸಿದ್ದು, ಪಡಿತರ ಚೀಟಿದಾರರಿಗೆ ಅಕ್ಕಿ ಮತ್ತು ರಾಗಿ ಹಂಚಿಕೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ತಿಳಿಸಿದ್ದಾರೆ.ಅಂತ್ಯೋದಯ ಅನ್ನ ಯೋಜನೆ(ಎಎವೈ) ಕಾರ್ಡ್ ಹೊಂದಿರುವವರಿಗೆ ಎರಡು ತಿಂಗಳಿಗೆ ಒಟ್ಟು 70 ಕೆ.ಜಿ ಉಚಿತ ಅಕ್ಕಿ (28 ಕೆ.ಜಿ), ರಾಗಿ (42 ಕೆ.ಜಿ) ನೀಡಲಾಗುತ್ತದೆ.ಆದ್ಯತಾ (ಪಿಹೆಚ್ಹೆಚ್) ಕೇಂದ್ರ ಪಡಿತರ ಚೀಟಿಯ ಪ್ರತಿ ಸದಸ್ಯರಿಗೆ ತಿಂಗಳಿಗೆ 5 ಕೆ.ಜಿ.ಯಂತೆ 2 ತಿಂಗಳಿಗೆ ಉಚಿತವಾಗಿ ಅಕ್ಕಿ(4 ಕೆ.ಜಿ) ಮತ್ತು ರಾಗಿ(6 ಕೆ.ಜಿ) ದೊರೆಯಲಿದೆ. ಆದ್ಯತಾ (ಪಿಎಚ್ಎಚ್) ರಾಜ್ಯ ಪಡಿತರ ಚೀಟಿಯ ಪ್ರತಿ ಸದಸ್ಯರಿಗೆ ತಿಂಗಳಿಗೆ 5 ಕೆ.ಜಿ.ಯಂತೆ, 2 ತಿಂಗಳಿಗೆ ಒಟ್ಟು 10 ಕೆ.ಜಿ. ಅಕ್ಕಿಯನ್ನು ಉಚಿತವಾಗಿ ಕೊಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.ಚೀಟಿದಾರರು ಆಹಾರಧಾನ್ಯ ಪಡೆಯುವಾಗ ಆಗಸ್ಟ್ ಮತ್ತು ಸೆಪ್ಟೆಂಬರ್ ಹಂಚಿಕೆಗಳಿಗೆ ಪ್ರತ್ಯೇಕವಾಗಿ ಎರಡು ಬಾರಿ ಕಡ್ಡಾಯವಾಗಿ ಬೆರಳಚ್ಚು ನೀಡಬೇಕು. ಪ್ರತಿ ದಿನ ಬೆಳಿಗ್ಗೆ 6ರಿಂದ ರಾತ್ರಿ 10ರವರೆಗೆ ಪಡಿತರ ವಿತರಣೆಗೆ ಸರ್ವರ್ ಲಭ್ಯಗೊಳಿಸಲಾಗಿದೆ. ಪಡೆಯಲು ಆ.31 ಕೊನೆಯ ದಿನಾಂಕವಾಗಿದೆ. ಅಂತ್ಯದವರೆಗೂ ಕಾಯಬಾರದು. ಪಡಿತರವನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿದರೆ ಅಂಥವರ ಚೀಟಿ ರದ್ದುಪಡಿಸಲಾಗುವುದು. ಪಡಿತರ ವಿತರಣೆ ಸಂಬಂಧ ಯಾವುದೇ ದೂರುಗಳಿದ್ದಲ್ಲಿ (ಕೇಂದ್ರ ಸಹಾಯವಾಣಿ ಸಂಖ್ಯೆ:1967) ಅಥವಾ ಆಹಾರ ಇಲಾಖೆ ಕಚೇರಿಗೆ ಸಲ್ಲಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ