ಕನ್ನಡೇತರ ಶಾಲೆಗಳಲ್ಲಿ 3ನೇ ತರಗತಿಯಿಂದ ಕನ್ನಡ ಕಡ್ಡಾಯ
25 ವರ್ಷಗಳ ಹಿಂದೆ, ಸೋಮವಾರ, 6–8–2001ಕನ್ನಡೇತರ ಶಾಲೆಗಳಲ್ಲಿ 3ನೇ ತರಗತಿಯಿಂದ ಕನ್ನಡ ಕಡ್ಡಾಯಬೆಂಗಳೂರು, ಆಗಸ್ಟ್ 5– ಕನ್ನಡೇತರ ಶಾಲೆಗಳಿಗೆ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಮೂರನೇ ತರಗತಿಯಿಂದ ಕನ್ನಡ ಕಡ್ಡಾಯಗೊಳಿಸಲು ರಾಜ್ಯ ಸರ್ಕಾರ ತಾತ್ವಿಕವಾಗಿ ಒಪ್ಪಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬರಗೂರು ರಾಮಚಂದ್ರಪ್ಪ ತಿಳಿಸಿದರು.ಅಖಿಲ ಕರ್ನಾಟಕ ಮಹಮದ

25 ವರ್ಷಗಳ ಹಿಂದೆ, ಸೋಮವಾರ, 6–8–2001ಕನ್ನಡೇತರ ಶಾಲೆಗಳಲ್ಲಿ 3ನೇ ತರಗತಿಯಿಂದ ಕನ್ನಡ ಕಡ್ಡಾಯಬೆಂಗಳೂರು, ಆಗಸ್ಟ್ 5– ಕನ್ನಡೇತರ ಶಾಲೆಗಳಿಗೆ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಮೂರನೇ ತರಗತಿಯಿಂದ ಕನ್ನಡ ಕಡ್ಡಾಯಗೊಳಿಸಲು ರಾಜ್ಯ ಸರ್ಕಾರ ತಾತ್ವಿಕವಾಗಿ ಒಪ್ಪಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬರಗೂರು ರಾಮಚಂದ್ರಪ್ಪ ತಿಳಿಸಿದರು.ಅಖಿಲ ಕರ್ನಾಟಕ ಮಹಮದೀಯರ ಕನ್ನಡ ವೇದಿಕೆ ಏರ್ಪಡಿಸಿದ್ದ ‘ಕರ್ನಾಟಕ ಸಂಸ್ಕೃತಿಗೆ ಮಹಮದೀಯರ ಕೊಡುಗೆ’ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.ಕನ್ನಡೇತರ ಶಾಲೆಗಳಲ್ಲಿ ಕನ್ನಡ ಕಡ್ಡಾಯಗೊಳಿಸಲು ಎರಡು ಸಾವಿರ ಪೂರ್ಣಾವಧಿ ಶಿಕ್ಷಕರನ್ನು ಮುಂದಿನ ಶೈಕ್ಷಣಿಕ ವರ್ಷದ ಆರಂಭದಲ್ಲಿ ಸರ್ಕಾರ ನೇಮಕ ಮಾಡಿಕೊಳ್ಳಲಿದೆ ಎಂದು ಮುಖ್ಯಮಂತ್ರಿಯವರು ತಮಗೆ ತಿಳಿಸಿದ್ದಾರೆಂದು ಹೇಳಿದರು.ಬ್ರಿಟನ್ ಹೈಕಮಿಷನರ್ರಿಂದ ಗೋಲಗುಮ್ಮಟ ವೀಕ್ಷಣೆವಿಜಾಪುರ, ಆಗಸ್ಟ್ 5– ಭಾರತದಲ್ಲಿ ಬ್ರಿಟನ್ ಹೈಕಮಿಷನರ್ ಆಗಿರುವ ಸರ್ ಬಾಬ್ಯಂಗ್ ಮತ್ತು ಅವರ ಪತ್ನಿ ಲೇಡಿ ಯಂಗ್ ಅವರು ಇಂದು ನಗರದಲ್ಲಿ ವಿಶ್ವವಿಖ್ಯಾತ ಗೋಲಗುಮ್ಮಟ ಸೇರಿದಂತೆ ಕೆಲವು ಐತಿಹಾಸಿಕ ಸ್ಮಾರಕಗಳಿಗೆ ಭೇಟಿ ನೀಡಿ ವೀಕ್ಷಿಸಿದರು.ಹೈದರಾಬಾದ್ನಿಂದ ನಿನ್ನೆ ರಾತ್ರಿ ನಗರಕ್ಕೆ ಆಗಮಿಸಿದ ಅವರು, ಇಂದು ಮುಂಜಾನೆ ಆದಿಲ್ಶಾಹಿ ಕಾಲದ ಪ್ರಮುಖ ಸ್ಮಾರಕಗಳಾದ ಇಬ್ರಾಹಿಂ ರೋಜಾ, ಮಲಿಕ್–ಈ–ಮೈದಾನ್, ಗಗನ ಮಹಲ್, ಗೋಲಗುಮ್ಮಟ ಮತ್ತು ಜುಮ್ಮಾ ಮಸೀದಿಯನ್ನು ವೀಕ್ಷಿಸಿದರು.