ತನ್ವೀರ್ ಸೇಠ್ಗೆ ಸಚಿವ ಸ್ಥಾನ ನೀಡುವಂತೆ ಮೈಸೂರಿನಲ್ಲಿ ಪ್ರತಿಭಟನೆ
ಮೈಸೂರು: ತನ್ವೀರ್ ಸೇಠ್ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ಕ್ರಾಂತಿ ಸೇನೆ ಸದಸ್ಯರು ಅಲ್ ಬದರ್ ವೃತ್ತದ ಬಳಿ ಬುಧವಾರ ಪ್ರತಿಭಟಿಸಿದರು.ಸಂಘಟನೆಯ ಅಧ್ಯಕ್ಷ ಎಂ.ಸಿ.ಬಾಬು ಮಾತನಾಡಿ, ತನ್ವೀರ್ ಸೇಠ್ ಅವರು ನರಸಿಂಹರಾಜ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಿದ್ದಷ್ಟೇ ಅಲ್ಲದೆ ಜಾತ್ಯತೀತ ನಾಯಕರಾಗಿ ಕೋಮುಸೌಹಾರ್ದ ಕಾಪಾಡುವಲ್ಲಿ ಪ್ರಮುಖ ಪಾತ್ರವಹ
ಮೈಸೂರು: ತನ್ವೀರ್ ಸೇಠ್ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ಕ್ರಾಂತಿ ಸೇನೆ ಸದಸ್ಯರು ಅಲ್ ಬದರ್ ವೃತ್ತದ ಬಳಿ ಬುಧವಾರ ಪ್ರತಿಭಟಿಸಿದರು.ಸಂಘಟನೆಯ ಅಧ್ಯಕ್ಷ ಎಂ.ಸಿ.ಬಾಬು ಮಾತನಾಡಿ, ತನ್ವೀರ್ ಸೇಠ್ ಅವರು ನರಸಿಂಹರಾಜ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಿದ್ದಷ್ಟೇ ಅಲ್ಲದೆ ಜಾತ್ಯತೀತ ನಾಯಕರಾಗಿ ಕೋಮುಸೌಹಾರ್ದ ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ ಎಂದರು.ಕಾಂಗ್ರೆಸ್ ಪಕ್ಷದ ವರಿಷ್ಠರು ಸಚಿವರ ಆಯ್ಕೆಗೆ ಅನುಸರಿಸಿರುವ ಮಾನದಂಡ, ಅರ್ಹತೆ ಏನು, ತನ್ವೀರ್ ಸೇಠ್ ಅವರು ಹಲವು ವಿಚಾರಗಳಲ್ಲಿ ಅರ್ಹರಾಗಿದ್ದರೂ ಅವರನ್ನು ಯಾಕೆ ಆಯ್ಕೆ ಮಾಡಿಲ್ಲ ಎಂದು ಪ್ರಶ್ನಿಸಿದರು.ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ260806-39-1949200608
Read the complete story at Prajavani