ಸಚಿವ ಸ್ಥಾನ: ಹರಿದಾಡಿದ ಅತೃಪ್ತಿಯ ಆಡಿಯೊ
ಬಾಗಲಕೋಟೆ: ‘ಸಚಿವ ಸ್ಥಾನ ಹಂಚಿಕೆ ಪ್ರಕ್ರಿಯೆ ಸರಿಯಾಗಿ ಆಗಿಲ್ಲ. ಹಣ ತೆಗೆದುಕೊಂಡು ಈ ಕೆಲಸ ಮಾಡಲಾಗಿದೆ’ ಎಂದು ಜಿಲ್ಲೆಯ ಶಾಸಕ ಆರ್.ಬಿ.ತಿಮ್ಮಾಪುರ, ರಾಜ್ಯ ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ಅವರು ಮಾತನಾಡಿಕೊಂಡಿದ್ದಾರೆ ಎನ್ನಲಾದ ಆಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ

ಬಾಗಲಕೋಟೆ: ‘ಸಚಿವ ಸ್ಥಾನ ಹಂಚಿಕೆ ಪ್ರಕ್ರಿಯೆ ಸರಿಯಾಗಿ ಆಗಿಲ್ಲ. ಹಣ ತೆಗೆದುಕೊಂಡು ಈ ಕೆಲಸ ಮಾಡಲಾಗಿದೆ’ ಎಂದು ಜಿಲ್ಲೆಯ ಶಾಸಕ ಆರ್.ಬಿ.ತಿಮ್ಮಾಪುರ, ರಾಜ್ಯ ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ಅವರು ಮಾತನಾಡಿಕೊಂಡಿದ್ದಾರೆ ಎನ್ನಲಾದ ಆಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಆದರೆ, ಆಡಿಯೊದಲ್ಲಿರುವ ಧ್ವನಿ ತಮ್ಮದಲ್ಲ ಎಂದು ತಿಮ್ಮಾಪುರ ಹೇಳಿದ್ದಾರೆ. ಹರಿದಾಡಿದ ಆಡಿಯೊ ಇಲ್ಲಿದೆ:ತಿಮ್ಮಾಪುರ: ‘ಪೇಮೆಂಟ್ ಆಗಿವೆ ಎನ್ನುತ್ತಾರೆ’.ನಂಜಯ್ಯನಮಠ: ‘ಶೇ 75ರಷ್ಟಿದೆ. ನಮ್ಮ ಬಾತ್ಮಿ ಪ್ರಕಾರ ಶೇ 80ರಷ್ಟು ಆಗಬಹುದು’.ತಿಮ್ಮಾಪುರ: ‘ಕೆಲವರು ಕೊಟ್ಟಾರ ಅಂತ ಹೇಳುತ್ತಾರೆ’.ನಂಜಯ್ಯನಮಠ: ‘ಕೊಟ್ಟಿರಬಹುದು’.ತಿಮ್ಮಾಪುರ: ‘ಅಂತಹವು ಬಹಳ ಇವೆ. ಜೈಲಿನಾಗಿಂದ ಬಂದವರಿಗೂ ಕೊಟ್ಟಾರ’.ನಂಜಯ್ಯನಮಠ: ‘ನಾಗೇಂದ್ರಗೆ ಕೊಟ್ಟಿರುವುದು ದುರಂತ. ಕೇಸ್ ಇದೆ. ನಿರ್ದೋಷಿ ಅಲ್ಲ. ಜಾಮೀನು ಸಿಕ್ಕಿದೆ. ಅದನ್ನು ಹೇಗೆ ಸಮರ್ಥಿಸಿಕೊಳ್ಳಬೇಕು?’.ತಿಮ್ಮಾಪುರ: ‘ಎಚ್.ಕೆ.ಪಾಟೀಲರು ಏನು ತಪ್ಪು ಮಾಡ್ಯಾರ?’.ನಂಜಯ್ಯನಮಠ: ‘ಪಾಪ, ಯಾವ ಖಾತೆ ಕೊಟ್ಟರೂ ಸಮರ್ಥವಾಗಿ ನಿರ್ವಹಣೆ ಮಾಡಿದ್ದಾರೆ’. ತಿಮ್ಮಾಪುರ: ‘ಸುನೀಲ ಕನಗೋಳ ಯಾರು?’.ನಂಜಯ್ಯನಮಠ: ‘ಸುನೀಲ ಕನಗೋಳ ಅಂತ ಯಾರ ಅದಾರ. ಮೇಲೆ ಒಂದು ನಮೂನೆ ಹುಚ್ಚಿದ್ದಂಗ ಇವೆ. ಹಿಂದಕ್ಕೊಮ್ಮೆ, ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾರೆ ಅಂತ ಎಚ್.ಕೆ.ಪಾಟೀಲ ಪರ ಕೆ.ಸಿ.ವೇಣುಗೋಪಾಲ್ ಅವರ ಮುಂದೆ ಹೇಳಿದೆ. ‘ನಾವು ಹೈಕಮಾಂಡ್ನವರು ಪ್ರಾಮಾಣಿಕವಾಗಿ ಇರು ಅಂತ ಹೇಳಿದ್ದೇವೆಯೇ?’ ಅಂದರು. ಎ.ಎಂ. ಹಿಂಡಸಗೇರಿ ಮತ್ತಿತರರು ಇದ್ದಾಗ ನಾನು ಮಾತನಾಡಿದೆ. 2013ಕ್ಕೆ ಮುಂಚೆ ಸಮ್ಮಿಶ್ರ ಸರ್ಕಾರ ರಚನೆ ಮಾಡುವಾಗಲೂ ಹೇಳಿದ್ದೆ. ಪ್ರಾಮಾಣಿಕರಾಗು ಅಂತ ಯಾರು ಹೇಳಿದ್ದರು ಅಂದರೆ ಇದಕ್ಕೇನು ಉತ್ತರ ಕೊಡುವುದು? ಫಟಿಂಗ್ ಆಗು ಎಂದಿದ್ದೆವು’.‘ನಿಮ್ಮದೊಂದು, ಅವರದೊಂದು ಆಗಬೇಕಿತ್ತು. ಉತ್ತರ ಕರ್ನಾಟಕದಾಗ ಮಾದರ ಪೈಕಿ ಯಾರೂ ಇಲ್ಲ. ಪಕ್ಷ ಸಂಘಟನೆ ಮಾಡಿರಿ, ನಿಮಗೆ ಕೊಡಿ ಅಂದಿದ್ದೆವು. ಹೊಂದುದ ಕಷ್ಟ. ಜಾತ್ರೆ ಮಾಡಿಕೊಂಡು ಹೋಗುತ್ತಾರ. ಹೊರಗ ಅಡ್ಡಾಡುವುದು ಬಿಡುವಂಗಿಲ್ಲ. ಉಸ್ತುವಾರಿಯನ್ನು ಕಣ್ಣಿಲೇ ನೋಡಬೇಕಲ್ಲ’.ತಿಮ್ಮಾಪುರ: ‘ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಲಕ್ಷ್ಮಣ ಸವದಿ ಅವರನ್ನು ಮಾಡುವಂತೆ ಹೇಳುತ್ತೇವೆ’. ನಂಜಯ್ಯನಮಠ: ‘ಮಾಡಿದರೆ ಇವರಿಗೆ (ಕಾಶಪ್ಪನವರ) ಏನು ಮಾಡಲಿಕ್ಕೆ ಆಗುವುದಿಲ್ಲ. ಉಳಿದ ಎಂಎಲ್ಎಗಳಿಗೆ ಹೇಳಿ’.ತಿಮ್ಮಾಪುರ: ‘ನಾಲ್ಕು ಮಂದಿ ಬರೆದುಕೊಡುತ್ತೇವೆ’.ನಂಜಯ್ಯನಮಠ: ‘ಶಿವಕುಮಾರ್ ಅವರಿಗೆ ಮಾತನಾಡುವ ಕೆಲಸ ನಾವು ಮಾಡುತ್ತೇವೆ. ಮೊದಲು ಬರೆದುಕೊಡುವುದು ಮಾಡಿ’.ವಿಜಯಾನಂದ ಕಾಶಪ್ಪನವರ ಇಬ್ಬರ ಸಂಭಾಷಣೆಯಿಂದ ಪಕ್ಷದಲ್ಲಿ ಸಂಚಲನ ಸಚಿವರಾದವರ ವಿರುದ್ಧ ಆರೋಪ–ಪ್ರತ್ಯಾರೋಪ ಸಚಿವ ಸ್ಥಾನ ಸಿಗದಿರುವವರ ಬಗ್ಗೆ ಬೇಸರಎಸ್.ಜಿ ನಂಜಯ್ಯನಮಠ ಅಧ್ಯಕ್ಷ ಕಾಂಗ್ರೆಸ್ ಜಿಲ್ಲಾ ಘಟಕ ಬಾಗಲಕೋಟೆಪೇಮೆಂಟ್ ಮಾಡಿ ಸಚಿವರಾಗಿದ್ದಾರೆ ಎಂದು ಜನರು ಆಡುವ ಮಾತಿನ ಬಗ್ಗೆ ಮಾತನಾಡಿದ್ದೇವೆ. ಸಚಿವ ವಿಜಯಾನಂದ ಕಾಶಪ್ಪನವರ ಬಗ್ಗೆ ಯಾವುದೇ ತಪ್ಪು ಮಾತನಾಡಿಲ್ಲ. ಆಡಿಯೊದಲ್ಲಿರುವುದೆಲ್ಲ ನನ್ನದಲ್ಲ. ಎಸ್ಪಿಗೆ ದೂರು ನೀಡುವೆ ‘ಪಕ್ಷದ್ರೋಹಿಗಳ ವಿರುದ್ಧ ಸೂಕ್ತ ಕ್ರಮ’ ಬಾಗಲಕೋಟೆ: ‘ಅಧಿಕಾರದಲ್ಲಿ ಇದ್ದುಕೊಂಡು ಈ ರೀತಿ ಮಾತನಾಡುವುದು ಸರಿಯಲ್ಲ. ಸತ್ಯಾಸತ್ಯತೆ ಹೈಕಮಾಂಡ್ ಗಮನಕ್ಕೆ ತರುತ್ತೇನೆ. ಕ್ರಮ ಆಗಲೇಬೇಕು. ಹಿಂದೆ ಸರಿಯುವ ಮಾತೇ ಇಲ್ಲ’ ಎಂದು ಸಚಿವ ವಿಜಯಾನಂದ ಕಾಶಪ್ಪನವರ ಹೇಳಿದರು. ಆಡಿಯೊ ವೈರಲ್ ಆಗಿರುವ ವಿಷಯದ ಬಗ್ಗೆ ಬುಧವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು ‘ವಿರೋಧ ಪಕ್ಷದಲ್ಲಿ ಇರುವವರಿಗೆ ಎದುರಿಗೆ ಹೇಳುವ ತಾಕತ್ತಿಲ್ಲ. ಸ್ವಪಕ್ಷದವರದ್ದೇ ಕುತಂತ್ರ ಷಡ್ಯಂತ್ರ’ ಎಂದರು. ‘ಅವರಿಗೆ ಕೊಟ್ಟಾಗ ನಾವು ಅಸೂಯೆ ಪಟ್ಟಿದ್ದೇವೆಯೇ? ತಿಮ್ಮಾಪುರ ಅವರಿಗೆ ನಾಲ್ಕು ಬಾರಿ ಸಚಿವರನ್ನಾಗಿ ಮಾಡಿದ್ದಾರೆ. ಸೋತಾಗಲೂ ವಿಧಾನ ಪರಿಷತ್ ಸದಸ್ಯರನ್ನಾಗಿಸಿ ಸಚಿವರನ್ನಾಗಿಸಿದ್ದರು. ಅವಕಾಶ ಕೊಟ್ಟಿದ್ದಕ್ಕೆ ಕೃತಜ್ಞರಾಗಿರಬೇಕು. ಅರಿವು ಬದ್ಧತೆ ಕಳೆದುಕೊಂಡಿದ್ದಾರೆ’ ಎಂದರು. ‘ಜಿಲ್ಲೆಯ ಹಿರಿಯ ನಾಯಕರಾದ ಎಸ್.ಜಿ.ನಂಜಯ್ಯನಮಠ ಎಂಟು ವರ್ಷಗಳಿಂದ ಪಕ್ಷದ ಜಿಲ್ಲಾ ಅಧ್ಯಕ್ಷರಾಗಿದ್ದಾರೆ. ಇಬ್ಬರೂ ಎಲ್ಲದರ ಬಗ್ಗೆಯೂ ಅರಿವು ಇಟ್ಟುಕೊಂಡು ಮಾತನಾಡಬೇಕು. ಪಕ್ಷ ನಮಗೆ ಏನು ಮಾಡಿದೆ ಎಂಬ ಅರಿವಿರಬೇಕು. ಪಕ್ಷಕ್ಕೆ ದ್ರೋಹ ಮಾಡುವವರ ವಿರುದ್ಧ ಪಕ್ಷ ಸೂಕ್ತ ಕ್ರಮ ಕೈಗೊಳ್ಳುತ್ತದೆ’ ಎಂದರು. ‘ನಮ್ಮ ನಡುವೆ ಕಚ್ಚಾಟವಿಲ್ಲ. ಅವರವರು ಮಾತನಾಡಿಕೊಂಡಿದ್ದಾರೆ. ಅವರಿಗೇನು ನೋವಾಗಿದೆ ಗೊತ್ತಿಲ್ಲ. ಪಕ್ಷ ಅವಕಾಶ ಕೊಟ್ಟಿರುವುದನ್ನು ಹೇಳಬೇಕು. ವಿನಾಕಾರಣ ಹಣದ ಆರೋಪ ಮಾಡುವುದು ಶೇ 80ರಷ್ಟು ಹಣ ಪಡೆದಿದ್ದಾರೆ ಎನ್ನುವುದು ಕೆ.ಸಿ. ವೇಣುಗೋಪಾಲ್ ಅವರಿಗೆ ಏಕವಚನದಲ್ಲಿ ಮಾತನಾಡಿದ್ದು ಹೈಕಮಾಂಡ್ನವರು ಹುಚ್ಚರು ಎಂದಿದ್ದು ಎಲ್ಲದರ ಬಗ್ಗೆಯೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ’ ಎಂದರು. ‘ಇದು ಹೊಸದಲ್ಲ. ನಮ್ಮ ತಂದೆ ಕಾಲದಿಂದಲೂ ಎದುರಿಸಿಕೊಂಡು ಬಂದಿದ್ದೇವೆ. ಮುಂದೆಯೂ ಎದುರಿಸುತ್ತೇವೆ. ಮತ ಕೊಟ್ಟ ಜನರ ಋಣ ತೀರಿಸುವ ಕೆಲಸ ಮಾಡಬೇಕಿದೆ’ ಎಂದರು.