ಹೊಸೂರು–ಬೊಮ್ಮಸಂದ್ರ ಮೆಟ್ರೊ: ಕರ್ನಾಟಕದೊಂದಿಗೆ ಚರ್ಚೆ ಎಂದ ತಮಿಳುನಾಡು ಸರ್ಕಾರ
ಚೆನ್ನೈ: ಕೃಷ್ಣಗಿರಿಯ ಹೊಸೂರು ಮತ್ತು ಕರ್ನಾಟಕದ ಬೊಮ್ಮಸಂದ್ರದ ನಡುವೆ ಮೆಟ್ರೊ ರೈಲು ಸಂಪರ್ಕ ಕಲ್ಪಿಸುವ ಯೋಜನೆಯ ಅನುಷ್ಠಾನಕ್ಕೆ ತಮಿಳುನಾಡು ಸರ್ಕಾರ ಯತ್ನಿಸಲಿದೆ. ಈ ಸಂಬಂಧ ಕೇಂದ್ರ ಹಾಗೂ ಕರ್ನಾಟಕ ಸರ್ಕಾರದೊಂದಿಗೆ ಚರ್ಚಿಸಲಿದೆ ಎಂದು ತಮಿಳುನಾಡು ಹಣಕಾಸು ಸಚಿವ ಎನ್. ಮೇರಿ ವಿಲ್ಸನ್ ಬುಧವಾರ ತಿಳಿಸಿದರು.ಬೊಮ್ಮಸಂದ್ರವು ಬೆಂಗಳೂರು ಮತ್ತು ಹೊಸೂರು ಎರಡಕ್ಕೂ ಸಮೀಪ

ಚೆನ್ನೈ: ಕೃಷ್ಣಗಿರಿಯ ಹೊಸೂರು ಮತ್ತು ಕರ್ನಾಟಕದ ಬೊಮ್ಮಸಂದ್ರದ ನಡುವೆ ಮೆಟ್ರೊ ರೈಲು ಸಂಪರ್ಕ ಕಲ್ಪಿಸುವ ಯೋಜನೆಯ ಅನುಷ್ಠಾನಕ್ಕೆ ತಮಿಳುನಾಡು ಸರ್ಕಾರ ಯತ್ನಿಸಲಿದೆ. ಈ ಸಂಬಂಧ ಕೇಂದ್ರ ಹಾಗೂ ಕರ್ನಾಟಕ ಸರ್ಕಾರದೊಂದಿಗೆ ಚರ್ಚಿಸಲಿದೆ ಎಂದು ತಮಿಳುನಾಡು ಹಣಕಾಸು ಸಚಿವ ಎನ್. ಮೇರಿ ವಿಲ್ಸನ್ ಬುಧವಾರ ತಿಳಿಸಿದರು.ಬೊಮ್ಮಸಂದ್ರವು ಬೆಂಗಳೂರು ಮತ್ತು ಹೊಸೂರು ಎರಡಕ್ಕೂ ಸಮೀಪದಲ್ಲಿದೆ. ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಹೊಸೂರಿನಿಂದ ಕರ್ನಾಟಕದ ಬೊಮ್ಮಸಂದ್ರಕ್ಕೆ ಮೆಟ್ರೊ ರೈಲು ಸಂಪರ್ಕ ಕಲ್ಪಿಸುವ ಪ್ರಸ್ತಾವವನ್ನು ಮುಖ್ಯಮಂತ್ರಿ ಸಿ.ಜೋಸೆಫ್ ವಿಜಯ್ ನೇತೃತ್ವದ ಟಿವಿಕೆ ಸರ್ಕಾರವು ಬುಧವಾರ ಮಂಡಿಸಿ ತನ್ನ ಚೊಚ್ಚಲ ಬಜೆಟ್ನಲ್ಲಿ ಪ್ರಕಟಿಸಿದೆ.ಬಜೆಟ್ ಮಂಡಿಸಿದ ಎನ್. ಮೇರಿ ವಿಲ್ಸನ್ ಅವರು,‘ಚೆನ್ನೈ ಮೆಟ್ರೊ ರೈಲು ಯೋಜನೆಯ ಎರಡನೇ ಹಂತದ ಕಾಮಗಾರಿಗೆ ಅಂದಾಜು 63,346 ಕೋಟಿ ತಗುಲಲಿದೆ. ಕ್ಷಿಪ್ರಗತಿಯಲ್ಲಿ ಕಾಮಗಾರಿ ನಡೆಯುತ್ತಿದೆ’ ಎಂದು ಹೇಳಿದರು.ಭ್ರಷ್ಟಾಚಾರ ಮುಕ್ತ ಪಾರದರ್ಶಕ ಆಡಳಿತ ಒದಗಿಸಲು ಮುಖ್ಯಮಂತ್ರಿ ವಿಜಯ್ ಅವರು ದೃಢನಿಶ್ಚಯ ಮಾಡಿದ್ದಾರೆ. ಅದಕ್ಕಾಗಿ ಅವರು ಹಲವು ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ಎನ್. ಮೇರಿ ವಿಲ್ಸನ್ ತಿಳಿಸಿದರು. ‘ಜನರ ತೆರಿಗೆ ಹಣದಲ್ಲಿ ಒಂದು ಪೈಸೆಯನ್ನೂ ಮುಟ್ಟುವುದಿಲ್ಲ. ಈ ಹಣವನ್ನು ತೆಗೆಯಲು ಯಾರಿಗೂ ಅವಕಾಶ ನೀಡುವುದಿಲ್ಲ; ಮುಟ್ಟಿದರೂ ಸುಮ್ಮನೆ ಬಿಡುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು.‘ಜನರ ಹಣ ಮುಟ್ಟಿದರೆ ಸುಮ್ಮನೆ ಬಿಡಲ್ಲ’ ಚಿನ್ನದ ನಾಣ್ಯ ಉಂಗುರ ನೀಡಲು ₹1000 ಕೋಟಿಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿದಂತೆ ಫಲಾನುಭವಿಗಳಿಗೆ ಚಿನ್ನದ ನಾಣ್ಯ ಉಂಗುರ ಮತ್ತು ಹಸುಗಳನ್ನು ನೀಡಲು ತಮಿಳುನಾಡು ಸರ್ಕಾರವು ಬಜೆಟ್ನಲ್ಲಿ ₹1000 ಕೋಟಿ ಮೀಸಲಿಟ್ಟಿದೆ. ‘ಮುಖ್ಯಮಂತ್ರಿ ಅವರು ಒಬ್ಬ ಸಹೋದರನಂತೆ ಸದಾ ರಾಜ್ಯ ಮಹಿಳೆಯರ ಪರ ನಿಲ್ಲುತ್ತಾರೆ’ ಎಂದು ಹಣಕಾಸು ಸಚಿವ ಮೇರಿ ವಿಲ್ಸನ್ ಅವರು ಬಜೆಟ್ ಮಂಡನೆ ವೇಳೆ ಹೇಳಿದರು.‘ಮಹಿಳೆಯರ ಜೀವನದಲ್ಲಿ ವಿವಾಹವು ಅತ್ಯಂತ ಸುಂದರ ಕ್ಷಣ. ಪ್ರತಿಯೊಬ್ಬ ಮಹಿಳೆಯನ್ನೂ ತಮ್ಮ ಕುಟುಂಬದಂತೆ ಪರಿಗಣಿಸಿರುವ ಮುಖ್ಯಮಂತ್ರಿ ಅವರು ವಿವಾಹವಾಗುವ ಹೆಣ್ಣುಮಕ್ಕಳಿಗೆ 8 ಗ್ರಾಂ ಚಿನ್ನದ ನಾಣ್ಯ ಮತ್ತು ರೇಷ್ಮೆ ಸೀರೆಯನ್ನು ನೀಡಲಿದ್ದಾರೆ. ಈ ಯೋಜನೆಗಾಗಿ ₹812 ಕೋಟಿ ಮೀಸಲಿಡಲಾಗಿದೆ’ ಎಂದು ತಿಳಿಸಿದರು. ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸಿದ ನವಜಾತ ಶಿಶುವಿಗೆ ಒಂದು ಗ್ರಾಂ ಉಂಗುರ ನೀಡಲಾಗುತ್ತದೆ. ಇದಕ್ಕಾಗಿ ₹560 ಕೋಟಿ ಮೀಸಲಿಡಲಾಗಿದೆ ಎಂದು ಹೇಳಿದರು. ಮೊದಲ ಬಾರಿ ಹಜ್ ಯಾತ್ರೆ ಕೈಗೊಳ್ಳುವವರಿಗೆ ನೀಡುವ ಸಹಾಯಧನದ ಮೊತ್ತವನ್ನು ₹25000ದಿಂದ ₹35000ಕ್ಕೆ ಏರಿಸಲಾಗಿದೆ ಎಂದು ಮೇರಿ ವಿಲ್ಸನ್ ತಿಳಿಸಿದರು. ‘ಟಿವಿಕೆ ಸರ್ಕಾರವು ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸಲಿದೆ. ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವುದನ್ನು ಸರ್ಕಾರ ಮುಂದುವರಿಸಲಿದೆ. ಅಲ್ಪಸಂಖ್ಯಾತರ ಕಲ್ಯಾಣ ಮತ್ತು ರಕ್ಷಣೆ ವಿಚಾರದಲ್ಲಿ ಸರ್ಕಾರ ರಾಜಿಯಾಗುವುದಿಲ್ಲ’ ಎಂದರು.ಹಜ್ ಯಾತ್ರೆ ಸಹಾಯಧನ ಏರಿಕೆ