Video | ಪಂದ್ಯದ ವೇಳೆ ಸಿಡಿಲು ಬಡಿದು ಫುಟ್ಬಾಲ್ ಆಟಗಾರ ಸಾವು: ಭೀಕರ ದೃಶ್ಯ ಸೆರೆ
ದಕ್ಷಿಣ ಥಾಯ್ಲೆಂಡ್ನಲ್ಲಿ ನಡೆದ ಸ್ಥಳೀಯ ಫುಟ್ಬಾಲ್ ಪಂದ್ಯದ ವೇಳೆ ಸಿಡಿಲು ಬಡಿದು 24 ವರ್ಷದ ಆಟಗಾರ ಸಾಫ್ಟ್ವಾನ್ ಅವೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.ಮಳೆಯ ನಡುವೆ ಫುಟ್ಬಾಲ್ ಆಡುತ್ತಿದ್ದ ವೇಳೆ ಸಿಡಿಲು ಬಡಿದಿದ್ದು, ಆ ಸಂದರ್ಭದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ದುರಂತದಲ್ಲಿ ಇತರ 12 ಆಟಗಾರರು ಗಾಯಗೊಂಡಿದ್ದಾರೆ ಎಂದು ವರದಿಯಲ್ಲಿ ಉಲ್

ದಕ್ಷಿಣ ಥಾಯ್ಲೆಂಡ್ನಲ್ಲಿ ನಡೆದ ಸ್ಥಳೀಯ ಫುಟ್ಬಾಲ್ ಪಂದ್ಯದ ವೇಳೆ ಸಿಡಿಲು ಬಡಿದು 24 ವರ್ಷದ ಆಟಗಾರ ಸಾಫ್ಟ್ವಾನ್ ಅವೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.ಮಳೆಯ ನಡುವೆ ಫುಟ್ಬಾಲ್ ಆಡುತ್ತಿದ್ದ ವೇಳೆ ಸಿಡಿಲು ಬಡಿದಿದ್ದು, ಆ ಸಂದರ್ಭದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ದುರಂತದಲ್ಲಿ ಇತರ 12 ಆಟಗಾರರು ಗಾಯಗೊಂಡಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.ಸಿಡಿಲು ಬಡಿಯುತ್ತಿದ್ದಂತೆ ಸಾಫ್ಟ್ವಾನ್ ಅವೇ ಮೈದಾನದಲ್ಲೇ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರಿಗೆ ವೈದ್ಯರು ಚಿಕಿತ್ಸೆ ನೀಡಲು ಯತ್ನಿಸಿದರೂ, ಬದುಕುಳಿಯಲಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ‘ಅಮೆಚೂರ್ ಮತ್ತು ಥಾಯ್-ಮಲೇಷ್ಯನ್ ತಂಡಗಳು ಭಾಗವಹಿಸಿದ್ದ ‘ಗೋಲೋಕ್ ಎಫ್ಎ ಕಪ್’ ಸ್ಥಳೀಯ ಪಂದ್ಯಾವಳಿಯ ವೇಳೆ ದುರ್ಘಟನೆ ಸಂಭವಿಸಿದೆ. ಅವೇ, ‘ಸಾಮ್ಕೋಲ್ಟ್ಸ್’ ತಂಡದ ಪರ ಕಣಕ್ಕಿಳಿದಿದ್ದರು.A football player was killed and 12 others were injured after a lightning strike hit the field during a match in Thailand. pic.twitter.com/XLAMhPxqgV— Daily Loud (@DailyLoud) August 6, 2026 ‘ಇದು ಅತ್ಯಂತ ದುಃಖಕರ ಸಂಗತಿ. ಬಿರುಗಾಳಿ-ಮಳೆಯ ಸುರಿಯುವ ಸಂದರ್ಭದಲ್ಲಿ ಪಂದ್ಯವನ್ನು ನಿಲ್ಲಿಸುವುದು ಕಡ್ಡಾಯ ನಿಯಮವಾಗಬೇಕು’ ಎಂದು ನೆಟ್ಟಿಗರೊಬ್ಬರು ಆಗ್ರಹಿಸಿದ್ದಾರೆ.‘ಇದೊಂದು ಭೀಕರ ದುರಂತ. ದೃಶ್ಯವನ್ನು ನೋಡಲು ತುಂಬಾ ಬೇಸರವಾಗುತ್ತದೆ. ನಿಮ್ಮ ಮಗ ಫುಟ್ಬಾಲ್ ಆಡುವುದನ್ನು ನೋಡುತ್ತಿರುವಾಗ ಹೀಗಾದರೆ ಊಹಿಸಿಕೊಳ್ಳಿ... ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ’ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.‘ಈ ದುರಂತಕ್ಕೆ ಲೀಗ್ ಆಡಳಿತವೇ ಕಾರಣ. ಹೆಚ್ಚಿನ ಮುನ್ನೆಚ್ಚರಿಕೆ ವಹಿಸಬೇಕಿತ್ತು. ಮೃತ ಆಟಗಾರನ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.ಥಾಯ್ಲೆಂಡ್ನಲ್ಲಿ ಸಿಡಿಲು ಬಡಿದು ಸಂಭವಿಸುವ ಸಾವು ಸಾಮಾನ್ಯವಾಗಿದೆ ಎಂದೂ ವರದಿ ಉಲ್ಲೇಖಿಸಿದೆ. ಆರೋಗ್ಯ ಇಲಾಖೆಯ ದತ್ತಾಂಶದ ಪ್ರಕಾರ, 2020 ಮತ್ತು 2024ರ ನಡುವೆ ದೇಶದಾದ್ಯಂತ 283 ಜನರು ಸಿಡಿಲು ಬಡಿದು ಮೃತಪಟ್ಟಿದ್ದಾರೆ.ಸಾಫ್ಟ್ವಾನ್ ಅವೇ ಸಾವಿಗೆ ಥಾಯ್ಲೆಂಡ್ ಫುಟ್ಬಾಲ್ ಅಸೋಸಿಯೇಷನ್ ಸಂತಾಪ ಸೂಚಿಸಿದೆ.