‘ಮೋದಿ ಸರ್ವಾಧಿಕಾರಿಯಾಗಬೇಕಿತ್ತು’ ಎಂದ ನಟಿ ರೂಪಾಲಿ ಗಂಗೂಲಿಗೆ ನೆಟ್ಟಿಗರ ಚಾಟಿ
ಕಿರುತೆರೆ ನಟಿ ಹಾಗೂ ಬಿಜೆಪಿ ಸದಸ್ಯೆ ರೂಪಾಲಿ ಗಂಗೂಲಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ವಿಚಾರವಾಗಿ ನೀಡಿರುವ ಹೇಳಿಕೆ ವಿವಾದ ಸೃಷ್ಟಿಸಿದೆ.ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯನ್ನು ಖಂಡಿಸಿ ಪ್ರಧಾನಿಯನ್ನು ನಿಂದಿಸುತ್ತಿರುವ ಬಾಲಕಿಯೊಬ್ಬರ ವಿಡಿಯೊಗೆ ಪ್ರತಿಕ್ರಿಯಿಸುವ ಸಂದರ್ಭದಲ್ಲಿ ಅವರು ನೀಡಿರುವ ಹೇಳಿಕೆ, ಸಾಮಾಜಿಕ ಮಾಧ್ಯಮಗಳಲ್ಲಿ ಬಿಸಿ ಬಿಸಿ ಚರ್ಚೆಗೆ ಕಾರಣವಾ

ಕಿರುತೆರೆ ನಟಿ ಹಾಗೂ ಬಿಜೆಪಿ ಸದಸ್ಯೆ ರೂಪಾಲಿ ಗಂಗೂಲಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ವಿಚಾರವಾಗಿ ನೀಡಿರುವ ಹೇಳಿಕೆ ವಿವಾದ ಸೃಷ್ಟಿಸಿದೆ.ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯನ್ನು ಖಂಡಿಸಿ ಪ್ರಧಾನಿಯನ್ನು ನಿಂದಿಸುತ್ತಿರುವ ಬಾಲಕಿಯೊಬ್ಬರ ವಿಡಿಯೊಗೆ ಪ್ರತಿಕ್ರಿಯಿಸುವ ಸಂದರ್ಭದಲ್ಲಿ ಅವರು ನೀಡಿರುವ ಹೇಳಿಕೆ, ಸಾಮಾಜಿಕ ಮಾಧ್ಯಮಗಳಲ್ಲಿ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ.ಬಾಲಕಿಯು ಪ್ರಧಾನಿ ಅವರನ್ನು ನಿಂದಿಸುತ್ತಿರುವ ವಿಡಿಯೊವನ್ನು ಹಂಚಿಕೊಂಡಿರುವ ನೆಟ್ಟಿಗರೊಬ್ಬರು, ಇಂತಹ ಮಕ್ಕಳ ಪೋಷಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆಯನ್ನು ನಿರ್ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.ಅದಕ್ಕೆ ಪ್ರತಿಕ್ರಿಯಿಸಿರುವ ರೂಪಾಲಿ, ‘ಪ್ರಧಾನಿಯನ್ನು ಹೀಗೆ ಅವಮಾನಿಸಿದವರು ಪರಿಣಾಮ ಅನುಭವಿಸಲೇಬೇಕು. ಅವರು (ನರೇಂದ್ರ ಮೋದಿ) ಸರ್ವಾಧಿಕಾರಿಯಾಗಿದ್ದರೆ ಚೆನ್ನಾಗಿರುತ್ತಿತ್ತು’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ, ನೆಟ್ಟಿಗರು ರೂಪಾಲಿ ಅವರನ್ನು ತರಾಟೆ ತೆಗೆದುಕೊಂಡಿದ್ದಾರೆ.Insulting the PM like this must have repercussions!!! I really wish he was a dictator!!!— Rupali Ganguly (@TheRupali) August 4, 2026 ಹಿಂದಿಯ ‘ಅನುಪಮಾ’ ಧಾರಾವಾಹಿಯಲ್ಲಿ ಮುಖ್ಯಪಾತ್ರದಲ್ಲಿ ನಟಿಸಿದ್ದ ರೂಪಾಲಿಗೆ ಕೆಲವರು, ಸರ್ವಾಧಿಕಾರ ಎಂದರೆ ಹೇಗಿರುತ್ತದೆ ಎಂಬುದನ್ನು ತಿಳಿಸಿಕೊಡುವ ಪ್ರಯತ್ನ ಮಾಡಿದ್ದಾರೆ. ಆದರೆ ಹಲವರು, ನಟಿಗೆ ರಾಜಕೀಯವಾಗಿ ಲಾಭವಾಗಲಿದೆ ಎಂದು ತಿವಿದಿದ್ದಾರೆ.‘Sarabhai vs Sarabhai’ ಸರಣಿಯಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ರೂಪಾಲಿ ಹೇಳಿಕೆ ಬಗ್ಗೆ ಅಭಿಮಾನಿಯೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ. ‘ನಾವು ಪರದೆಯ ಮೇಲೆ ಪಾತ್ರಗಳನ್ನು ನೋಡಿ ಪ್ರೀತಿಸಿದ ವ್ಯಕ್ತಿಗಳು ಇಷ್ಟು ಸಂಕುಚಿತ ಮನಸ್ಥಿತಿ ಹೊಂದಿದ್ದಾರೆ ಎಂಬುದು ಗೊತ್ತಿರಲಿಲ್ಲ. ಇಂತಹ ವರ್ತನೆ ನಾಚಿಕೆಗೇಡು. ಹೀಗೆ ದ್ವೇಷ ಕಾರುವುದನ್ನು ಬಿಟ್ಟು, ನಟನೆ ಮುಂದುವರಿಸಿ’ ಎಂದಿದ್ದಾರೆ.ನಾಲ್ವರನ್ನು ಸಾರ್ವಜನಿಕವಾಗಿ ತಲೆಕೆಳಗಾಗಿ ನೇತುಹಾಕಿರುವ ಚಿತ್ರವೊಂದನ್ನು ಹಂಚಿಕೊಂಡಿರುವ ಮತ್ತೊಬ್ಬರು, ‘ನಿಮಗೆ ಬೆನಿಟೊ ಮುಸಲೋನಿ ಯಾರೆಂದು ಗೊತ್ತಾ? ಇಟಲಿಯ ಜನರು ಆತನಿಗೆ ಏನು ಮಾಡಿದರು ಎಂಬುದು ತಿಳಿದಿದೆಯಾ’ ಎಂದು ಕೇಳಿದ್ದಾರೆ.Mussolini... Do you know Benito Mussolini?Do you know what was done to him by the people of Italy ? pic.twitter.com/BarPy1cdIc— MariJ Fan (@Raptor_Svm) August 5, 2026 ‘ಮಗುವಿಗೆ ಶಿಕ್ಷೆಯಾಗಬೇಕು ಎನ್ನುತ್ತೀರಾ.. ಹೋಗಿ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯಿರಿ’ ಎಂದು ಇನ್ನೊಬ್ಬರು ಕುಟುಕಿದ್ದಾರೆ.‘ಯಶಸ್ಸು ಕಾಣದ ಎಲ್ಲ ನಟ – ನಟಿಯರು ಯಾವುದಾದರೂ ಲಾಭದಾಯಕ ಹುದ್ದೆ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಬಿಜೆಪಿಗೆ ಸೇರುತ್ತಾರೆ. ಕೊನೆಗೆ, ಐಟಿ ಸೆಲ್ನ ಕೂಲಿಗಳಂತೆ ಆಡುತ್ತಾರೆ’ ಎಂದು ಮತ್ತೊಬ್ಬರು ವ್ಯಂಗ್ಯವಾಡಿದ್ದಾರೆ.ಇನ್ನೊಬ್ಬರು, ‘ಮಕ್ಕಳನ್ನು ಗಲ್ಲಿಗೇರಿಸಬೇಕೆಂದೋ.. ಕಾರ್ಮಿಕ ಶಿಬಿರಕ್ಕೆ ದೂಡಬೇಕೆಂದೋ ಬಯಸುತ್ತಿದ್ದೀರಾ? ಸರ್ವಾಧಿಕಾರದಲ್ಲಿ ಅದೇ ರೀತಿ ಆಗುವುದು. ಸರ್ವಾಧಿಕಾರದ ಆಡಳಿತದಲ್ಲಿ ಮಕ್ಕಳಿಗೆ ಮಾರ್ಗದರ್ಶನವೆಂಬುದೇ ಇರುವುದಿಲ್ಲ. ಬದಲಾಗಿ, ಬ್ರೇನ್ವಾಶ್ ಮಾಡಲಾಗುತ್ತದೆ. ಹಾಗಾಗಿ, ಏನು ಹೇಳುತ್ತಿದ್ದೀರಿ ಎಂಬುದರ ಪರಿಜ್ಞಾನ ಇರಲಿ’ ಎಂದು ಕಿವಿ ಹಿಂಡಿದ್ದಾರೆ.Okay so you want kids to be executed or want them to go to labour camps now because that's what happens in dictatorship there is no guidance for kids in dictatorship only brainwashing happens. So think before what you ask for— Mirai (@tricko757) August 5, 2026