ಸಾವಿರ ಸಂಚಿಕೆಗಳನ್ನು ಪೂರೈಸಿದ ‘ಲಕ್ಷ್ಮೀ ನಿವಾಸ’; ಅಪರೂಪದ ಫೋಟೊ ಹಂಚಿಕೊಂಡ ದಿಶಾ
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ಸಾವಿರ ಸಂಚಿಕೆಗಳನ್ನು ಪೂರೈಸಿದೆ. ಈ ಬಗ್ಗೆ ನಟಿ ದಿಶಾ ಮದನ್ ಅವರು ಸಾಮಾಜಿಕ ಜಾಲತಾಣದಲ್ಲಿ ತಂಡದೊಂದಿಗಿರುವ ಅಪರೂಪದ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ರೂಪದರ್ಶಿಯೂ ಆಗಿರುವ ದಿಶಾ ಮದನ್ ಅವರು ಲಕ್ಷ್ಮೀ ನಿವಾಸದಲ್ಲಿ ಭಾವನಾ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಎಲ್ಲಾ ಕಲಾವಿದರು, ತಂತ್ರಜ

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ಸಾವಿರ ಸಂಚಿಕೆಗಳನ್ನು ಪೂರೈಸಿದೆ. ಈ ಬಗ್ಗೆ ನಟಿ ದಿಶಾ ಮದನ್ ಅವರು ಸಾಮಾಜಿಕ ಜಾಲತಾಣದಲ್ಲಿ ತಂಡದೊಂದಿಗಿರುವ ಅಪರೂಪದ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ರೂಪದರ್ಶಿಯೂ ಆಗಿರುವ ದಿಶಾ ಮದನ್ ಅವರು ಲಕ್ಷ್ಮೀ ನಿವಾಸದಲ್ಲಿ ಭಾವನಾ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಎಲ್ಲಾ ಕಲಾವಿದರು, ತಂತ್ರಜ್ಞರ ತಂಡದೊಂದಿಗೆ ಕ್ಲಿಕ್ಕಿಸಿಕೊಂಡ ಫೋಟೊ ಹಂಚಿಕೊಂಡಿರುವ ದಿಶಾ, ‘ಎಂತಹ ಅದ್ಭುತ ಪಯಣ’ ಎಂದು ಬರೆದುಕೊಂಡಿದ್ದಾರೆ. View this post on Instagram A post shared by Disha (@disha.madan) ಇತ್ತೀಚಿಗೆ ಸಿಂಚನಾ ಪಾತ್ರಕ್ಕೆ ರೂಪಿಕಾ ಅವರ ಬದಲು ಧಾರಾವಾಹಿ ಆರಂಭದಲ್ಲಿದ್ದ ದಿವ್ಯಾ ಗ್ರಾಮ ಅವರೇ ವಾಪಸ್ಸಾಗಿದ್ದಾರು.ಮಧ್ಯಮ ವರ್ಗದ ಜನರು ತಮ್ಮ ಕನಸು ನನಸಾಗಿಸಲು ಜೀವನಪೂರ್ತಿ ಅನುಭವಿಸುವ ಕಷ್ಟ- ಸುಖ, ನೋವು- ನಲಿವಿನೊಂದಿಗೆ ಸವೆಸುವ ಬದುಕಿನ ಹಾದಿ ಈ ಧಾರಾವಾಹಿಯ ಕಥಾಹಂದರವಾಗಿದೆ.2024ರ ಜನವರಿ 16ರಂದು ಆರಂಭಗೊಂಡಿರುವ ಈ ಧಾರಾವಾಹಿ ಬರೋಬ್ಬರಿ ಮೂರು ವರ್ಷಗಳಿಂದ ಪ್ರೇಕ್ಷಕರನ್ನು ರಂಜಿಸುತ್ತಿದೆ. ಇತ್ತೀಚಿಗೆ ಧಾರಾವಾಹಿ ಅಂತ್ಯಗೊಳ್ಳುತ್ತಿದೆ ಎನ್ನುವ ಸುದ್ದಿ ಹರಿದಾಡಿತ್ತು. ಆದರೆ ಹೊಸ ನಿರ್ದೇಶಕರು ಧಾರಾವಾಹಿಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದು, ಧಾರಾವಾಹಿ ಮುಂದುವರಿದಿದೆ. ಜಯಂತ್ ಪಾತ್ರಧಾರಿ ಮೆಚ್ಚಿದ ನಟಿ ಯಮುನಾಇತ್ತೀಚಿಗೆ ಜಯಂತ್ ಪಾತ್ರಕ್ಕೆ ತಾಯಿಯಾಗಿ ನಟಿ, ನೃತ್ಯಗಾರ್ತಿ ಯಮುನಾ ಶ್ರೀನಿಧಿ ಅವರು ಲಕ್ಷ್ಮೀ ನಿವಾಸ ತಂಡಕ್ಕೆ ಸೇರಿಕೊಂಡಿದ್ದರು. ಜಯಂತ್ ಪಾತ್ರಧಾರಿ ದೀಪಕ್ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದ ಅವರು, ‘ಜಗತ್ತಿನ ದೃಷ್ಟಿಯಲ್ಲಿ ನಾನು ಕೊನೆಗೂ ಜಯಂತ್ನ ಬಂಧನದಿಂದ ಮುಕ್ತಳಾಗಿರಬಹುದು… ಆದರೆ ನಿಜ ಹೇಳಬೇಕೆಂದರೆ ನನಗೆ ಸ್ವಲ್ಪ ಸ್ಟಾಕ್ಹೋಮ್ ಸಿಂಡ್ರೋಮ್ ಆಗಿದೆಯೇನೋ ಅನ್ನಿಸುತ್ತಿದೆ. ತೆರೆಯ ಮೇಲೆ ಜಯಂತ್ನ ನಟನೆ ಎಷ್ಟು ಅದ್ಭುತವಾಗಿದೆಯೋ, ತೆರೆ ಹಿಂದೆ ದೀಪಕ್ ಅವರ ವ್ಯಕ್ತಿತ್ವವೂ ಅಷ್ಟೇ ಅದ್ಭುತ. ಅವರ ಜೊತೆ ಪ್ರತಿಯೊಂದು ದೃಶ್ಯದಲ್ಲೂ ಅಭಿನಯಿಸುವುದು ನನಗೆ ಕಲಿಯುವ ಅವಕಾಶವಾಗಿತ್ತು. ಅವರ ಅಭಿನಯವನ್ನು ಹತ್ತಿರದಿಂದ ನೋಡುವುದು ನಿಜಕ್ಕೂ ಒಂದು ಅನುಭವ. ತೆರೆ ಹಿಂದೆ ಅವರು ಒಬ್ಬ ನಿಜವಾದ ಜಂಟಲ್ಮನ್. ಯಾವಾಗಲೂ ನನ್ನ ಬಗ್ಗೆ ಕಾಳಜಿ ವಹಿಸಿ, ತುಂಬಾ ಆತ್ಮೀಯವಾಗಿ ನಡೆದುಕೊಂಡರು. ನಾನು ಈ ರೀತಿ ಹೇಳುವುದು ಕಥೆಗೆ ಸ್ವಲ್ಪ ವಿರುದ್ಧವಾಗಬಹುದು, ಇದನ್ನು ಸಾರ್ವಜನಿಕವಾಗಿ ಹೇಳಬಾರದೇನೋ… ಆದರೆ ಅವರ ಬಗ್ಗೆ ನನ್ನ ಮೆಚ್ಚುಗೆಯನ್ನು ವ್ಯಕ್ತಪಡಿಸದೇ ಇರಲಾಗಲಿಲ್ಲ. ಮತ್ತೊಮ್ಮೆ ನಿಮ್ಮೊಂದಿಗೆ ತೆರೆ ಹಂಚಿಕೊಳ್ಳುವ ಅವಕಾಶಕ್ಕಾಗಿ ಕಾಯುತ್ತಿದ್ದೇನೆ, ದೀಪಕ್ ಅವರೆ’ ಎಂದಿದ್ದಾರೆ. View this post on Instagram A post shared by Yamuna Srinidhi (@yamuna_srinidhi_)